ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೋಟಿಸ್ ನೀಡಿದ ಜಾರಿ ನಿರ್ದೇಶನಾಲಯ
ಪ್ರಗತಿ ವಾಹಿನಿ ಸುದ್ದಿ ನವದೆಹಲಿ –
ರಾಜ್ಯ ಸಭೆ ಪ್ರತಿ ಪಕ್ಷದ ನಾಯಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾರಿ ನಿರ್ದೇಶನಾಲಯವು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಟೀಸ್ ಜಾರಿಗೊಳಿಸಿದೆ.
೧೯೩೭ರಲ್ಲಿ ೫ ಲಕ್ಷ ಮೂಲ ಬಂಡವಾಳದ ಮೂಲಕ ಅಸ್ಥಿತ್ವಕ್ಕೆ ಬಂದ ಅಸೋಸಿಯೇಟೆಡ್ ಜರ್ನಲ್ಸ್ ಲಿ. ಸಂಸ್ಥೆ ೧೯೩೮ರಲ್ಲಿ ಜವಾಹರಲಾಲ್ ನೆಹರು ಅವರ ನೇತೃತ್ವದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಾರಂಭಿಸಿತ್ತು. ಬಳಿಕ ಸಂಸ್ಥೆಯ ಅಡಿಯಲ್ಲಿ ಹಿಂದಿ ಮತ್ತು ಉರ್ದು ಪತ್ರಿಕೆಗಳೂ ಪ್ರಾರಂಭಗೊಂಡವು.
ಸ್ವಾತಂತ್ರ್ಯಾನಂತರ ನೆಹರೂರವರು ಪತ್ರಿಕೆಗೆ ದೇಶದ ವಿವಿಧೆಡೆ ಭೂಮಿ ಮಂಜೂರು ಮಾಡಿದ್ದರು. ಆದರೆ ನಾನಾ ಕಾರಣಗಳಿಂದ ೨೦೦೮ರಲ್ಲಿ ಪತ್ರಿಕೆ ಪ್ರಕಟಣೆ ಸ್ಥಗಿತಗೊಳಿಸಿತ್ತು. ಈ ವೇಳೆ ಪತ್ರಿಕಾ ಸಂಸ್ಥೆಗೆ ೯೦ ಕೋಟಿಗೂ ಹೆಚ್ಚು ಸಾಲವಿತ್ತು.
ಆದರೆ ಪತ್ರಿಕಾ ಸಂಸ್ಥೆಗೆ ೯೦ ಕೋಟಿಗೂ ಹೆಚ್ಚು ಬಡ್ಡಿರಹಿತ ಸಾಲವನ್ನು ರಾಜಕೀಯ ಪಕ್ಷದ ವತಿಯಿಂದ ನೀಡಲಾಗಿದೆ. ಅದರಲ್ಲಿ ೫೦ ಲಕ್ಷ ರೂ. ಎಐಸಿಸಿ ಖಜಾನೆಯಿಂದ ನೇರ ವರ್ಗಾವಣೆಯಾಗಿದೆ ಎಂಬ ಆರೋಪವಿದೆ. ಅಲ್ಲದೇ ನ್ಯಾಷನಲ್ ಹೆರಾಲ್ಡ್ ಒಡೆತನದಲ್ಲಿದ್ದ ಹೆರಾಲ್ಡ್ ಹೌಸ್ನ ನವೀಕರಣಕ್ಕೂ ಕೋಟ್ಯಾಂತರ ರೂ. ಹಣ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಬಿಜೆಪಿ ಮುಖಂಡ ಸುಬ್ರಹಣ್ಯಂ ಸ್ವಾಮಿ ದೂರು ದಾಖಲಿಸಿದ್ದರು. ರಾಜಕೀಯ ಪಕ್ಷದ ವತಿಯಿಂದ ಬೇರೆ ಕಂಪನಿಗಳಿಗೆ ಸಾಲ ನೀಡಲು ಬರುವುದಿಲ್ಲ ಎಂದು ಸುಬ್ರಹ್ಮಣ್ಯಂ ಸ್ವಾಮಿ ಪ್ರತಿಪಾದಿಸಿದ್ದಾರೆ. ಅಲ್ಲದೆ ನ್ಯಾಷನಲ್ ಹೆರಾಲ್ಡ್ ಪತ್ರಿಕಾ ಸಂಸ್ಥೆ ದೇಶದ ಹಲವೆಡೆ ಭೂಮಿ ಹೊಂದಿದ್ದು ಇದರ ಬೆಲೆ ಸಾವಿರಾರು ಕೋಟಿ ರೂ. ಆಗುತ್ತದೆ ಎಂಬುದು ಅವರ ವಾದವಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ನ ಹಿರಿಯ ಮುಖಂಡರ ವಿಚಾರಣೆಯ ಕಾರಣಕ್ಕೆ ಇಡಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಮವಾರ ನೊಟಿಸ್ ಜಾರಿ ಮಾಡಿದೆ.
ಸಂಸದೆ ಸುಮಲತಾ ಬಿಜೆಪಿ ಸೇರ್ತಾರಾ? CM ಬೊಮ್ಮಾಯಿ ಜೊತೆ ಚರ್ಚಿಸಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ