ಧರ್ಮಸ್ಥಳ ದರ್ಶನ ಪಡೆದ ಎಡನೀರು ಮಠದ ನಿಯೋಜಿತ ಉತ್ತರಾಧಿಕಾರಿ

ಪ್ರಗತಿವಾಹಿನಿ ಸುದ್ದಿ, ಉಜಿರೆ: ಕಾಸರಗೋಡು ಎಡನೀರು ಮಠದ ನಿಯೋಜಿತ ಉತ್ತರಾಧಿಕಾರಿ ಯತಿ ಶ್ರೀ  ಸಚ್ಚಿದಾನಂದ ಭಾರತೀ ಸ್ವಾಮೀಜಿ(ಜಯರಾಮ ಮಂಜತ್ತಾಯ) ಅವರು ಗುರುವಾರ (ಸೇ.)24) ಶ್ರೀ ಕ್ಷೆತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ , ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದರು.

ಬಳಿಕ ಧರ್ಮಾಧಿಕಾರಿ ಡಾ! ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕ್ಷೇತ್ರದ ಪರವಾಗಿ ಡಾ! ಹೆಗ್ಗಡೆಯವರು  ಅವರಿಗೆ ಗೌರವಾರ್ಪಣೆ ಸಲ್ಲಿಸಿದರು.                                          ಎಡನೀರು ಮಠದ ನಿಯೋಜಿತ ಯತಿಗಳನ್ನು ಕ್ಷೇತ್ರದ ಸಕಲ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯ್ತು. ಧರ್ಮಾಧಿಕಾರಿಗಳ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಪಾರುಪತ್ತೇದಾರ ಲಕ್ಷ್ಮಿನಾರಾಯಣ ರಾವ್, ಸೀತಾರಾಮ ತೋಳ್ಪಡಿತ್ತಾಯ ಸ್ವಾಗತಿಸಿದರು. ಕುಂಟಾರು ರವೀಶ್ ತಂತ್ರ್ಯ್ತ್ರಿ ಗೋಕುಲ ಅಡಿಗ,  ರಾಜೇಂದ್ರ ಕಲ್ಲೂರಾಯ , ಉಜಿರೆ ಅಶೋಕ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಅವರು ಬಳಿಕ ಉಜಿರೆಯ ಅರಿಪ್ಪಾಡಿ ಮಠಕ್ಕೆ ಭೇಟಿ ನೀಡಿ  ಶ್ರೀ ದುರ್ಗಾಪರಮೇಶ್ವರಿಯ ದರ್ಶನ ಪಡೆದರು. ಬಾಲಕೃಷ್ಣ ಅರಿಪ್ಪಾಡಿತ್ತಾಯರು ಅವರನ್ನು ಭಕ್ತಿಪೂರ್ವಕ ಸ್ವಾಗತಿಸಿ, ಗೌರವಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button