
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ ಆರೋಪದ ಮೇಲೆ ಶಿಕ್ಷಣ ಇಲಾಖೆ ನೌಕರರೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಬಿಜೆಪಿ ಪರ ವಾಟ್ಸಪ್ ಗ್ರೂಪ್ ನಲ್ಲಿ ಸಂದೇಶ ಕಳುಹಿಸಿ ಪ್ರಚಾರ ನಡೆಸಿರುವ ಆರೋಪದಲ್ಲಿ ಹಾಸನದ ಡಿಡಿಪಿಐ ಕಚೇರಿಯ ಎಫ್ ಡಿಎ ಬಿ.ಹೆಚ್ ಮಂಜುನಾಥ್ ಅವರನ್ನು ಅಮನಾತು ಮಾಡಲಾಗಿದೆ.
ಬಿ.ಹೆಚ್.ಮಂಜುನಾಥ್ ವಿರುದ್ಧ ನಾಗೇಂದ್ರ ಎಂಬುವವರು ದೂರು ನೀಡಿದ್ದರು. ಪ್ರಕರಣದ ಬಗ್ಗೆ ಮಂಜುನಾಥ್ ಅವರ ವಿಚಾರಣೆ ಹಾಗೂ ಡಿಸಿಪಿಐ ವರದಿ ಆದರಿಸಿ ಇಲಾಖೆ ತನಿಖೆ ಕಾಯ್ದಿರಿಸಿ ಆದೇಶ ಹೊರಡಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ