ತಾಲ್ಲೂಕು ಮುಖ್ಯೋಪಾಧ್ಯಾಯರ ಶೈಕ್ಷಣಿಕ ಜಾಗೃತಿ ಸಭೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಪ್ರಾಥಮಿಕ ಶಾಲೆಗಳ ಶೈಕ್ಷಣಿಕ ಭೌದ್ಧಿಕ ಪ್ರಗತಿಗಾಗಿ ಮುಖ್ಯೋಪಾಧ್ಯಾಯರು ವ್ಯವಸ್ಥಿತವಾಗಿ ಶಿಸ್ತು ಬದ್ಧ ಕ್ರಿಯಾ ಯೋಜನೆ ರೂಪಿಸಿಕೊಂಡು ಸರ್ವಾಂಗೀಣ ಪ್ರಗತಿಗೆ ಶ್ರಮ ವಹಿಸುವಂತೆ ತಾಲೂಕಾ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಕರೆ ನೀಡಿದರು.
ಅವರು ಕಂಗ್ರಾಳಿ ಕೆ.ಎಚ್. ಗ್ರಾಮದ ಮರಾಠಿ ಶಾಲೆಯಲ್ಲಿ ಜರುಗಿದ ತಾಲೂಕಾ ವಲಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸನ್ 2019-20ನೇಯ ಶೈಕ್ಷಣಿಕ ಕಾರ್ಯಗಳ ಜಾಗೃತಿ ಕುರಿತು ಜರುಗಿದ ಸಭೆಯಲ್ಲಿ ಮಾರ್ಗದರ್ಶನ ನೀಡಿ ಮಾತನಾಡುತ್ತಿದ್ದರು.
ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಕುರಿತು ವಿವರಿಸಿದ ಅವರು ತಾಲೂಕಾ ವಲಯದಲ್ಲಿ ಕೈಕೊಳ್ಳಬಹುದಾದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು, ಬಿಸಿಯೂಟದ ನಿರ್ವಹಣೆಯನ್ನು ವ್ಯವ್ಯಸ್ಥಿತವಾಗಿ ಮಾಡಬೇಕಾದ ಅಗತ್ಯತೆ ವಿವರಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಲ್ಲಿ ಶ್ರಮಿಸಬೇಕೆಂದರು.
ಬಿ.ಆರ್.ಸಿ ಸಮನ್ವಯಾಧಿಕಾರಿ ಮಹಾದೇವ ಮೇದಾರ ಮಾತನಾಡಿ ಶಾಲೆಯ ಆಡಳಿತ ನಿರ್ವಹಣೆ ಕುರಿತು ವಿವರಿಸಿದರು. ಶಾಲೆಗಳ ಪ್ರಗತಿಗಾಗಿ ಉತ್ತಮ ಕಾರ್ಯನಿರ್ವಹಣೆ ಮಾಡಲು ತಿಳಿಸಿದರು. ತಾಲೂಕಾ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಆರ್.ಸಿ.ಮುದಕನಗೌಡರವರು ಅಕ್ಷರದಾಸೋಹ ಕಾರ್ಯಕ್ರಮ ಸಮರ್ಪಕ ಅನುಷ್ಠಾನ, ನಿರ್ವಹಿಸಬೇಕಾದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.
ಸಭೆಯಲ್ಲಿ ತಾಲೂಕಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷ ಬಸವರಾಜ ಸುಣಗಾರ ಮಾತನಾಡಿ ಇಲಾಖೆಯ ಆದೇಶ ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲೂಕಾ ಮುಖ್ಯೋಪಾಧ್ಯಾಯರು ಉತ್ತಮಕಾರ್ಯ ನಿರ್ವಹಣೆ ಮಾಡುತ್ತ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವರು ಎಂದರು.
ಸಭೆಯಲ್ಲಿ ಬಿ.ಆರ್.ಸಿ ಸಂಪನ್ಮೂಲ ವ್ಯಕ್ತಿ ಆರ್.ಜಿ. ಮಂತುರ್ಗಿ ಸಿ.ಆರ್.ಸಿ ಸಂಪನ್ಮೂಲ ವ್ಯಕ್ತಿಗಳಾದ ಸಾಗರ ಹರಾಡೆ, ಉಮೇಶ ಪಾಶ್ಚಾಪುರ, ಪರಶುರಾಮ ರಜಪೂತ, ವಿಜಯಲಕ್ಷ್ಮೀ ಭಗವಂತಪ್ಪನವರ, ಶಂಕರ ಕುಲಕರ್ಣಿ ಮಹಾದೇವ, ಎಸ್. ಅಥಣಿ, ಶ್ರೀಮತಿ ಇಂಚಲ ಸೇರಿದಂತೆ ತಾಲೂಕಿನ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು./////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ