ನೈಜೀರಿಯಾದಲ್ಲಿ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ -ರೂಪಾ ದಿಕ್ಸೂಚಿ ಭಾಷಣ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಪಶ್ಚಿಮ ಆಫ್ರಿಕಾದ ನೈಜೀರಿಯಾದಲ್ಲಿ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ ಕುರಿತು ವಿಚಾರಸಂಕಿರಣ ನಡೆಯಲಿದ್ದು, ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ಡಿ.ರೂಪಾ ಭಾಗವಹಿಸಲಿದ್ದಾರೆ.
ಗುರುವಾರ ಈ ವಿಚಾರಸಂಕಿರಣ ನಡೆಯಲಿದ್ದು, ರೂಪಾ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾಜ್ಯದ ಪೊಲೀಸ್ ಅಧಿಕಾರಿಯೊಬ್ಬರು ನೈಜೀರಿಯಾಕ್ಕೆ ಅಧಿಕೃತ ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ನೈಜೀರಿಯಾದ ಪ್ರತಿಷ್ಠಿತ ಗುಸಾವು ಸಂಸ್ಥೆ ಆಯೋಜಿಸಿರುವ ಒಂದು ದಿನದ ವಿಚಾರಸಂಕಿರಣದಲ್ಲಿ 100ಕ್ಕೂ ಹೆಚ್ಚು ಉನ್ನತಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನೈಜೀರಿಯಾದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಉತ್ತಮಗೊಳಿಸಲು ಕೈಗೊಳ್ಳಬಹುದಾದ ತಂತ್ರಗಳನ್ನು ಈ ವಿಚಾರಸಂಕಿರಣದಲ್ಲಿ ರೂಪಿಸಲಾಗುತ್ತದೆ.
ವಿಚಾರಸಂಕಿರಣದ ಆರಂಭದಲ್ಲೇ ರೂಪಾ 40 ನಿಮಿಷ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಚಾರಸಂಕಿರಣದಲ್ಲಿ ಭಾಗವಹಿಸಲು ರೂಪಾ ಇಂದು ಸಂಜೆ ಬೆಂಗಳೂರಿನಿಂದ ವಿಮಾನದ ಮೂಲಕ ನೈಜೀರಿಯಾ ತೆರಳಿದರು.
ಸಂಬಂಧಿತ ಸುದ್ದಿಗಳು –
ಡಿ.ರೂಪಾಗೆ ಪ್ರತಿಷ್ಠಿತ ಜಿ-ಫೈಲ್ಸ್ ಗವರ್ನ ನ್ಸ್ ಅವಾರ್ಡ್
ಡಿ.ರೂಪಾಗೆ ವಿನಯ ಕುಮಾರ ವರದಿಯ ಪ್ರತಿ ನೀಡಲು ಮಾಹಿತಿ ಹಕ್ಕು ಆಯೋಗ ಆದೇಶ
ಡಿ.ರೂಪಾ ಮತ್ತೆ ಎತ್ತಂಗಡಿ: 2 ವರ್ಷದಲ್ಲಿ 5 ಬಾರಿ ಟ್ರಾನ್ಸಫರ್!
ಡಿ.ರೂಪಾಗೆ ವಿನಯ ಕುಮಾರ ವರದಿಯ ಪ್ರತಿ ನೀಡಲು ಮಾಹಿತಿ ಹಕ್ಕು ಆಯೋಗ ಆದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ