GIT add 2024-1
Beereshwara 33

ಚುನಾವಣಾ ಅಖಾಡಕ್ಕೆ ಏಕನಾಥ ಶಿಂಧೆ: ನಾಳೆ ಬೆಳಗಾವಿಯಲ್ಲಿ ಸಮಾವೇಶ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯ ಮತದಾನಕ್ಕೆ ಕೆಲವೆ ದಿನಗಳು ಬಾಕಿ ಇದ್ದು, ಅಂತಿಮ ಹಂತದ ಪ್ರಚಾರಕ್ಕೆ ಘಟಾನುಘಟಿ ನಾಯಕರು ಪ್ರಚಾರಕ್ಕೆ ಬರುತ್ತಿದ್ದಾರೆ. ಮರಾಠಿ ಭಾಷಿಕರ ಮತ ಸೇಳೆಯಲು ಮಹಾ ಸಿಎಂ ಏಕನಾಥ್ ಶಿಂಧೆ ನಾಳೆ ಬೆಳಗಾವಿ ಹಾಗೂ ಕಾರವಾರ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಕೈಗೊಳ್ಳಲಿದ್ದಾರೆ.‌

ನಾಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಬೆಳಗಾವಿ ಲೊಕಸಭಾ ಚುನಾವಣಾ ನಿಮಿತ್ಯ ಮಧ್ಯಾಹ್ನ 1 ಘಂಟೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೆಕುಂದರಗಿ ಕೆ.ಎಚ್ ಗ್ರಾಮಕ್ಕೆ ಆಗಮಿಸಿ ಚುನಾವಣಾ ಬಹಿರಂಗ ಸಭೆಯಲ್ಲಿ ಭಾಗವಹಿಸಿಲಿದ್ದಾರೆ.

Emergency Service

ಸಂಜೆ 3.30 ಕ್ಕೆ ಕೆನರಾ ಲೊಕಸಭಾ ಕ್ಷೇತ್ರದ ಖಾನಾಪೂರ ಪಟ್ಟಣದ ಶಿವಾಜಿನಗರದಲ್ಲಿರುವ ಮಲಪ್ರಭಾ ಕ್ರೀಡಾಂಗಣದಲ್ಲಿ ಚುನಾವಣಾ ನಿಮಿತ್ಯ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಪ್ರಚಾರ ಕಾರ್ಯಕ್ರಮ ಮಾಡಲಿದ್ದು ಎರಡು ಲೊಕಸಭಾ ಕ್ಷೇತ್ರದ ಮತದಾರ ಬಂಧುಗಳು ಹಾಗೂ ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಬೆಳಗಾವಿ ‌ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Laxmi Tai add
Bottom Add3
Bottom Ad 2