Kannada NewsKarnataka NewsLatest

*ಫ್ಲೈ ಓವರ್ ಮೇಲಿಂದ ಜಿಗಿದು ನೌಕರ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಫ್ಲೈ ಓವರ್ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ನಡೆದಿದೆ.

ನಾಯಂಡಹಳ್ಳಿಯ ಫ್ಲೈ ಓವರ್ ಮೇಲಿಂದ ಕೆಳಗೆ ಜಿದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 30 ವರ್ಷದ ನವೀನ್ ಮೃತ ದುರ್ದೈವಿ.

ಜ್ಞಾನಭಾರತಿ ನಿವಾಸಿಯಾಗಿದ್ದ ಈತ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಇಂದು ಬೆಳಿಗ್ಗೆ ಫ್ಲೈ ಓವರ್ ಮೇಲೆ ಬೈಕ್ ಪಾರ್ಕ್ ಮಾಡಿದ ನವೀನ್ ಏಕಾಏಕಿ ಕೆಳಗೆ ಜಿಗಿದಿದ್ದಾನೆ. ಇದನ್ನು ಕಂಡ ಬ್ಯಾಟರಾಯನಪುರ ಸಂಚಾರಿ ಠಾಣೆ ಪೊಲೀಸರು ತಕ್ಷಣ ಧಾವಿಸಿದ್ದಾರೆ. ಅಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿದೆ.

Home add -Advt

ನಾಲ್ಕು ತಿಂಗಳ ಹಿಂದಷ್ಟೇ ನವೀನ್ ವಿವಾಹವಾಗಿದ್ದ ಎಂದು ತಿಳಿದುಬಂದಿದೆ.

Related Articles

Back to top button