
ಪ್ರಗತಿವಾಹಿನಿ ಸುದ್ದಿ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವ ವಿಖ್ಯಾತ ಹಂಪಿಗೆ ಭಾರತ ಚುನಾವಣಾ ಆಯೋಗದ ಕಮಿಷನರ್ ಡಾ.ಸುಖಬೀರ್ ಸಿಂಗ್ ಕುಟುಂಬ ಸಮೇತ ಭೇಟಿ ಮಾಡಿದ್ರು.
ಹಂಪಿಯ ಯಂತ್ರೋದ್ಧಾರಕ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸ್ಮಾರಕಗಳನ್ನ ವೀಕ್ಷಣೆ ಮಾಡಿ ವಿಜಯನಗರ ಸಾಮ್ರಾಜ್ಯದ ಕಲೆ, ವಾಸ್ತುಶಿಲ್ಪಕ್ಕೆ ಮನಸೋತರು. ಪ್ರವಾಸೋದ್ಯಮ ಇಲಾಖೆ ಮಾರ್ಗದರ್ಶಿ ವಿರೂಪಾಕ್ಷಿ ಹಾಗೂ ತಂಡದವರು ಚುನಾವಣಾ ಆಯೋಗ ಕಮಿಷನರ್ ಅವರಿಗೆ ಹಂಪಿಯ ಇತಿಹಾಸದ ಬಗ್ಗೆ ಮಾರ್ಗದರ್ಶನ ನೀಡಿದ್ರು. ಡಾ. ಸುಖಬೀರ್ ಸಿಂಗ್ ಸಂಧು ಇಂದು ಮತ್ತು ನಾಳೆ ಹಂಪಿಯಲ್ಲಿನ ವಿವಿಧ ಸ್ಮಾರಕಗಳನ್ನ ವೀಕ್ಷಣೆ ಮಾಡಲಿದ್ದಾರೆ. ಇನ್ನು ಈ ಸಂದರ್ಭವಿಜಯನಗರ ಡಿಸಿ ಎಂ ಎಸ್ ದಿವಾಕರ್, ಎಸ್.ಪಿ ಶ್ರೀಹರಿಬಾಬು, ಸಿಇಓ ಅಕ್ರಂ ಷಾ, ಪ್ರವಾಸೋದ್ಯಮ ಡಿಡಿ ಪ್ರಭುಲಿಂಗ, ಹಂಪಿ ಪಿಎಸ್ಐ ಶಿವುಕುಮಾರ್ ಇತರರು ಹಾಜರಿದ್ರು.