ಪ್ರಗತಿವಾಹಿನಿ ಸುದ್ದಿ: ಲೋಕಸಭಾಗೆ ಕಾಂಗ್ರೆಸ್- ಬಿಜೆಪಿ ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ. ಆದರೆ ಚುನಾವಣೆ ಸಮಯದಲ್ಲೇ ಕಾಂಗ್ರೆಸ್ ಕಚೇರಿಗೆ ಬೀಗ ಬಿದ್ದಿರುವ ಘಟನೆ ಬಳ್ಳಾರಿ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದೆ.
ಹೌದು..ಹೊಸ ಜಿಲ್ಲಾಧ್ಯಕ್ಷರ ನೇಮಕದ ಎಫೆಕ್ಟ್ ನಿಂದ ಕಾಂಗ್ರೆಸ್ ಕಚೇರಿಗೆ ಬೀಗ ಹಾಕಲಾಗಿದೆ ಎನ್ನಾಲಾಗಿದೆ. ಮೊನ್ನೆ ಅಷ್ಟೇ ಕೆಲವು ಜಿಲ್ಲೆಗಳಲ್ಲಿ ಹೊಸ ಜಿಲಾಧ್ಯಕ್ಷರನ್ನ ನೇಮಕ ಮಾಡಿರುವ ಕಾಂಗ್ರೆಸ್, ಅದರಲ್ಲಿ ಬಳ್ಳಾರಿಯಿಂದ ಮೋಹಮ್ಮದ್ ರಫಿಕ್ ಅವರನ್ನು ಬದಲಾಯಿಸಿ, ಅಲ್ಲಂ ಪ್ರಶಾಂತ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದೆ. ಆದರೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆ ಸ್ವಂತ ಕಚೇರಿ ಇಲ್ಲ, ಇಲ್ಲಿ ಅಧ್ಯಕ್ಷರಾದವರೇ ಕಚೇರಿ ಮಾಡಿಕೊಂಡು ಪಕ್ಷ ನಡೆಸೋದು ವಾಡಿಕೆ ಆಗಿದೆ. ಕಳೆದ ಆರು ವರ್ಷದಿಂದ ಮಹಮ್ಮದ್ ರಫಿಕ್ ಬಾಡಿಗೆ ಕಟ್ಟುತ್ತಾ ಬಂದಿದ್ದರು, ಈಗ ಅಲ್ಲಂ ಪ್ರಶಾಂತ್ ಅಧ್ಯಕ್ಷರಾಗಿದ್ದಾರೆ, ಇದೇ ರೀತಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ಮಾಡುತ್ತಾರಾ ಅಥವಾ ಇದೇ ಕಛೇರಿಯಲ್ಲಿ ಮುಂದುವರೆಯುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ಈಗ ಏಕಾಏಕಿ ಅಧ್ಯಕ್ಷರ ಬದಲಾವಣೆ ಹಿನ್ನೆಲೆ ಕಚೇರಿಗೆ ಬೀಗ ಹಾಕಿಸಿದ ಮೋಹಮದ್ ರಫಿಕ್ ಅಸಾಮಾಧನಾ ಹೊರ ಹಾಕಿದ್ದಾರೆ. ಕೇಳಿದ್ದರೆ ನಾನೇ ರಾಜಿನಾಮೆ ಕೊಡ್ತಾ ಇದ್ದೆ, ಏಕಾಏಕಿ ಬದಲಾವಣೆ ಮಾಡಿದ್ದು, ಸರಿಯಲ್ಲ ಎಂದು ಹಿತೈಷಿಗಳು ಹಾಗೂ ಹಿರಿಯ ನಾಯಕರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.
ಹೊಸದಾಗಿ ನೇಮಕಗೊಂಡ ಅಧ್ಯಕ್ಷರಿಂದ ಹೊಸ ಕಚೇರಿಗಾಗಿ ಕಟ್ಟಡದ ಹುಡುಕಾಟ ಮಾಡಲಾಗುತ್ತಿದೆ ಎನ್ನಾಲಾಗಿದೆ. ಬಿಜೆಪಿ ಜೆಡಿಎಸ್ ಪಕ್ಷಗಳು ಬಳ್ಳಾರಿಯಲ್ಲಿ ಸ್ವಂತ ಕಚೇರಿ ಹೊಂದಿವೆ, ಆದ್ರೇ ಸ್ವಾತಂತ್ರ್ಯ ಪೂರ್ವದಿಂದ ಇರೋ ಕಾಂಗ್ರೇಸ್ ಪಕ್ಷಕ್ಕೆ ಬಳ್ಳಾರಿಯಲ್ಲಿ ಕಚೇರಿ ಇಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ