Kannada NewsKarnataka News

ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಗೆಜೆಟ್ ಆದೇಶದಂತೆ ಚುನಾವಣೆ

ಫುಡ್ ಪಾರ್ಕ್ ನಿರ್ಮಿಸುವ ಯೋಜನೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯು ಹಲವು
ವಿಶೇಷತೆಯಿಂದ ಕೂಡಿದ್ದು , ಈ ಚುನಾವಣೆಯಲ್ಲಿ ಪೌರ ಕಾರ್ಮಿಕರಿಗೆ ಕೂಡ ಟಿಕೆಟ್
ನೀಡಲಾಗಿದೆ. ರಾಜ್ಯ ಸರ್ಕಾರವು ಸಾಮಾನ್ಯ ಜನರಿಗೂ ಕೂಡ ಅವಕಾಶವನ್ನು ನೀಡಿದ್ದು,
ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಹಾಗೂ ಜಿಲ್ಲಾ
ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ‌ ಹೇಳಿದರು.

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಶನಿವಾರ (ಸೆ.11) ನಡೆದ  ಪತ್ರಿಕಾಗೋಷ್ಠಿಯಲ್ಲಿ
ಅವರು ಮಾತನಾಡಿದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 58 ವಾರ್ಡ್ ಗಳಲ್ಲಿ ಸುಮಾರು 56 ವಾರ್ಡುಗಳ ಸ್ಥಾನಕ್ಕೆ  ಬಿಜೆಪಿ ಸ್ಪರ್ಧಿಸಿದ್ದು, ಇನ್ನೆರಡು ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ತಡವಾಗಿದ್ದರಿಂದ
ಟಿಕೆಟ್ ನೀಡಿಲ್ಲ. ಸ್ಪರ್ಧಿಸಿದ 56 ವಾರ್ಡ್ ಗಳಲ್ಲಿ 35 ಸ್ಥಾನಗಳನ್ನು ಬಿಜೆಪಿಯು
ಗೆದ್ದು ಸ್ಪಷ್ಟ ಬಹುಮತದಿಂದ ವಿಜೇತವಾಗಿದ್ದು, ಸಂತಸ ತಂದಿದೆ ಎಂದು ಜಲಸಂಪನ್ಮೂಲ
ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ‌ ಹೇಳಿದರು.

ಅಭಿವೃದ್ಧಿಯೇ ಸರ್ಕಾರದ ಮೂಲ ಮಂತ್ರ :

ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಎರಡನೇ ಬಾರಿ ಅಧಿಕಾರಕ್ಕೆ ಬಂದಾಗ ಪ್ರಧಾನ ಮಂತ್ರಿ
ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬ ಘೋಷ ವಾಕ್ಯದೊಂದಿಗೆ ಆಡಳಿತ
ಪ್ರಾರಂಭಿಸಿದರು. ಅದರಂತೆ ಜನರ ರಕ್ಷಣೆ ಹಿತ ಹಾಗೂ ಜನರ ಸೇವೆಗಾಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ. ಇಂದು ಹೆಚ್ಚು ರಾಜ್ಯಗಳಲ್ಲಿ ಮೋದಿ ಸರ್ಕಾರ ಆಡಳಿತ
ನಡೆಸುತ್ತಿದೆ.

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇಂದಿನ ಮುಖ್ಯಮಂತ್ರಿಗಳಾದ
ಬಸವರಾಜ ಬೊಮ್ಮಾಯಿ ಅವರ‌ ಸರ್ಕಾರವು ಅಭಿವೃದ್ಧಿ ಪರ ಸರ್ಕಾರವಾಗಿದೆ. ಸರ್ಕಾರವು
ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಮೂಲ ಕಸುಬು ಆಧಾರಿತ ಜನರಿಗೆ, ಕಾರ್ಮಿಕರಿಗೆ
ಅನೇಕ ಸೌಲಭ್ಯಗಳನ್ನು ನೀಡಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ
ಸಚಿವರಾದ ಗೋವಿಂದ ಕಾರಜೋಳ‌ ತಿಳಿಸಿದರು.

ಗೆಜೆಟ್ ಆದೇಶದ ಪ್ರಕಾರ ಮೇಯರ್ ಸ್ಥಾನಕ್ಕೆ ಚುನಾವಣೆ :

ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಗೆಜೆಟ್ (ರಾಜ್ಯಪತ್ರ)
ಆದೇಶದಂತೆ ಚುನಾವಣೆ ನಡೆಸಲಾಗುವುದು. ಚುನಾವಣಾ ಅಧಿಕಾರಿಗಳು ನೀಡುವ ವೇಳಾಪಟ್ಟಿಯಂತೆ
ಚುನಾವಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಶೀಘ್ರವೇ ಎಲ್ಲ ವಾರ್ಡಗಳಿಗೆ 24*7 ಶುದ್ಧ ಕುಡಿಯುವ ನೀರು :

ಈಗಾಗಲೇ, ನಗರದ 10 ವಾಡ್೯ಗಳಿಗೆ 24*7 ಶುದ್ಧ ಕುಡಿಯುವ ನೀರನ್ನು ಸರಬರಾಜು
ಮಾಡಲಾಗುತ್ತಿದೆ. ಇನ್ನುಳಿದ 48 ವಾರ್ಡ್ ಗಳಿಗೆ ಶೀಘ್ರವೇ 24 ಗಂಟೆಗಳ ಕಾಲ ನೀರನ್ನು
ಒದಗಿಸಲಾಗುವುದು  ಎಂದು ಅವರು ಹೇಳಿದರು.

ಒಂದು ವರ್ಷದಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ಪೂರ್ಣ:

ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲಾ ಕಾಮಗಾರಿಗಳು ಮುಕ್ತಾಯದ ಹಂತವನ್ನು ತಲುಪಿದ್ದು,
ಇನ್ನು ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು
ಜಲ ಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ‌
ತಿಳಿಸಿದರು.

ಫುಡ್ ಪಾರ್ಕ್ ನಿರ್ಮಿಸುವ ಯೋಜನೆ :

ಗಡಿ ಜಿಲ್ಲೆ ಬೆಳಗಾವಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ 16  ‌ಬಗೆಯ ತಳಿಯ ‌ಮಾವಿನ
ಹಣ್ಣು ಬೆಳೆಯುತ್ತಿದ್ದು, ಅವುಗಳಲ್ಲಿ ಕೇಸರ್ ಮಾವು ಪ್ರಸಿದ್ಧಿಯನ್ನು ಪಡೆದಿದೆ.
ಮುಂದಿನ ದಿನಗಳಲ್ಲಿ ಇಂತಹ ಹಣ್ಣುಗಳ ಮಾರಾಟಕ್ಕೆ ಪ್ರೋತ್ಸಾಹ ದೊರೆಯಲು ಫುಡ್ ಪಾರ್ಕ್‌
ಗಳ  ನಿರ್ಮಾಣ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಶಾಸಕರು ಸೂಕ್ತ ಪ್ರಸ್ತಾವ
ಸಲ್ಲಿಸಬೇಕು ಎಂದರು.

ಅಲ್ಲದೇ, ಸುವರ್ಣ ವಿಧಾನ ಸೌಧಕ್ಕೆ ಕಚೇರಿಗಳ ಸ್ಥಳಾಂತರ ಕುರಿತಂತೆ ಮುಖ್ಯ ಮಂತ್ರಿಗಳ
ಜೊತೆ ಮಾತುಕತೆ ನಡೆಸಲಾಗಿದೆ.‌ ಮುಂಬರುವ  ದಿನಗಳಲ್ಲಿ ಕಚೇರಿಗಳನ್ನು
ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು.

ಅಂತರ್ ರಾಜ್ಯಗಳ ನೀರಿನ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಸಚಿವರಾದ
ಗಜೇಂದ್ರ ಸಿಂಗ್ ಅವರೊಂದಿಗೆ ಚರ್ಚಿಸಲಾಗಿದೆ. ಅತಿ ಶೀಘ್ರದಲ್ಲಿ ವ್ಯಾಜ್ಯಗಳನ್ನು
ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಹಾಗೂ ಜಿಲ್ಲಾ
ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ‌ ತಿಳಿಸಿದರು.

ಬೆಳಗಾವಿ ಯುವ ಜನರು ಹಾಗೂ ಗಣೇಶ ಮಂಡಳಿಗಳ ಒತ್ತಾಯದ ಮೇಲೆ 11 ದಿನಗಳ ಕಾಲ ಗಣೇಶೋತ್ಸವ ಮಾಡಲು ಸೋಮವಾರ ಮುಖ್ಯಮಂತ್ರಿ ಅವರು ಒಪ್ಪಿಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಸಂಸದರಾದ ಮಂಗಳಾ ಅಂಗಡಿ, ಬೆಳಗಾವಿ ಉತ್ತರ ಶಾಸಕರಾದ
ಅನಿಲ್ ಬೆನಕೆ, ಬೆಳಗಾವಿ ದಕ್ಷಿಣ ಶಾಸಕರಾದ ಅಭಯ ಪಾಟೀಲ ಹಾಗೂ ಮತ್ತಿತರು
ಉಪಸ್ಥಿತರಿದ್ದರು‌.

ನೂತನ ನಗರಸೇವಕರೊಂದಿಗೆ ಭಾನುವಾರ ಸಂಘ ಸಂಸ್ಥೆಗಳ ಸಂವಾದ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button