Kannada NewsKarnataka NewsLatest

*ವಿದ್ಯುತ್ ದುರಂತ; 7 ಆಕಳುಗಳು ಸಜೀವ ದಹನ*

ಪ್ರಗತಿವಾಹಿನಿ ಸುದ್ದಿ; ಮುಂಡಗೋಡ: ವಿದ್ಯುತ್ ಅವಘಡದಿಂದ ಏಳು ಆಕಳುಗಳು ಸಜೀವ ದಹನವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಹಳೂರನಲ್ಲಿ ನಡೆದಿದೆ.

ಮುಂಡಗೋಡ್ ಪಟ್ಟಣದ ಹಳೂರನ ನಿವಾಸಿ ಮಂಜುನಾಥ ನಾಗೇಶ ಶೇಟ್ ಎಂಬವರಿಗೆ ಸೇರಿದ 7  ಆಕಳುಗಳು ಕೊಟ್ಟಿಗೆಯಲ್ಲಿ ಸಜೀವ ದಹನಗೊಂಡಿವೆ. ರಾತ್ರಿ ಏಳು ಆಕಳುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು.   ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ಬಿದ್ದಿದ್ದು, ಕೊಟ್ಟಿಗೆ ಸಮೇತ ಆಕಳುಗಳು ಸಂಪೂರ್ಣ ದಹನಗೊಂಡಿವೆ.

ಅಂದಾಜು ಎರಡುವರೆ ಲಕ್ಷಕ್ಕೂ ಅಧಿಕ ಬೆಲೆ ಬಾಳುವ ದನಗಳಾಗಿದ್ದವು ಎನ್ನಲಾಗಿದೆ. ಕಂದಾಯ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದನಗಳು ಸಾವನ್ನಪ್ಪಿದ್ದಕ್ಕೆ ಕುಟುಂಬದವರು ಕಣ್ಣೀರಿಟ್ಟಿದ್ದಾರೆ.

ಇನ್ನು ಘಟನೆ‌ ಬಗ್ಗೆ‌ ಮಾಹಿತಿ ಪಡೆದ ಶಾಸಕ ಶಿವರಾಮ ಹೆಬ್ಬಾರ್ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಪರಿಹಾರ ಬದಗಿಸುವ ಬಗ್ಗೆಯೂ ಜಾನುವಾರುಗಳ ಮಾಲೀಕರಾದ ನಾಗೇಶ ಶೇಟ್ ಅವರಿಗೆ ಭರವಸೆ ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button