Kannada NewsKarnataka NewsLatestUncategorized

*18 ಅಡಿ ಆಳದ ವಿ.ಸಿ.ನಾಲೆಗೆ ಬಿದ್ದ ಕಾರು; ನೀರಿನಲ್ಲಿ ಕೊಚ್ಚಿ ಹೋದ ಚಾಲಕ?*

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ವರುಣಾರ್ಭಟದ ನಡುವೆ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿ.ಸಿ.ನಾಲೆಗೆ ಬಿದ್ದಿದ್ದು, ಚಾಲಕ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

Home add -Advt

ಮಂದ್ಯ ಜಿಲ್ಲೆಯ ತಿಬ್ಬನಹಳ್ಳಿ ಬಳಿ ವಿ.ಸಿ.ನಾಲೆಗೆ ಕಾರಿನ ಸಮೇತ ಚಾಲಕ ಬಿದ್ದಿದ್ದು, ತುಂಬಿ ಹರಿಯುತ್ತಿರುವ ನಾಲೆ ನೀರಿನಲ್ಲಿ ಚಾಲಕ ಕೊಚ್ಚಿ ಹೋಗಿರುವ ಸಾಧ್ಯತೆದಟ್ಟವಾಗಿದೆ. ಚಾಲಕ ಲೋಕೇಶ್ ನಾಲೆಗೆ ಬಿದ್ದಿದ್ದು, ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿಯಿಂದ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಮೋಹನ್ ಎಂಬುವವರಿಗೆ ಸೇರಿದ ಸ್ವಿಫ್ಟ್ ಕಾರು ಇದಾಗಿದ್ದು, 18 ಅಲ ಅಡಿಯ ವಿ.ಸಿ.ನಾಲೆಗೆ ಕಾರು ಬಿದ್ದಿದೆ. ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.


Related Articles

Back to top button