Belagavi NewsBelgaum NewsKarnataka NewsLatest

*”ಬಸವ ಬುತ್ತಿ” ಕಾರ್ಯಕ್ರಮ ಗ್ರಾಮೀಣ ಜನರ ಭಕ್ತಿ, ಕಾಯಕ ಸಂಸ್ಕೃತಿಯ ಅನನ್ಯ ಸಂಕೇತ: ಪೂಜ್ಯ ಅಡವಿಸಿದ್ದರಾಮ ಸ್ವಾಮಿಗಳು*

ಪ್ರಗತಿವಾಹಿನಿ ಸುದ್ದಿ: ಮೂಡಲಗಿ: ಸುಕ್ಷೇತ್ರ ಶಿವಾಪುರ ಅಡವಿಸಿದ್ದೇಶ್ವರ ಮಠದ ಜಾತ್ರೆಯ ಶುಭ ಸಂದರ್ಭದಲ್ಲಿ ಜರುಗುವ ‘ಬಸವ ಬುತ್ತಿ’ ಕಾರ್ಯಕ್ರಮವು ಉತ್ತರ ಕರ್ನಾಟಕದ ಗ್ರಾಮೀಣ ಜನರ ಭಕ್ತಿ ಹಾಗೂ ಕಾಯಕ ಸಂಸ್ಕೃತಿಯ ಅನನ್ಯ ಸಂಕೇತವಾಗಿದೆ ಎಂದು ಶಿವಾಪುರ ಮಠದ ಪೂಜ್ಯ ಅಡವಿಸಿದ್ದರಾಮ ಸ್ವಾಮಿಗಳು ಹೇಳಿದರು.
ಸಮೀಪದ ಶಿವಾಪುರ ಗ್ರಾಮದಲ್ಲಿ ಶನಿವಾರ (ಸೆ. 12) ಅಡವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ನಡೆದ “ಬಸವ ಬುತ್ತಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


ತಾಯಂದಿರು ತಮ್ಮ ಕೈಯಾರೆ ಪ್ರೀತಿಯಿಂದ ಸಿದ್ಧಪಡಿಸಿದ ಜೋಳದ ರೊಟ್ಟಿ, ಕಾಯಿಪಲ್ಯ, ಹಸಿಖಾರ ಹಾಗೂ ಪುಂಡಿಪಲ್ಯದ ಬುತ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು, “ಓಂ ನಮಃ ಶಿವಾಯ” ಎಂಬ ಶಿವನಾಮ ಸ್ಮರಣೆ ಮಾಡುತ್ತಾ ಶ್ರೀಮಠಕ್ಕೆ ಸಾಗುವ ದೃಶ್ಯ ಅತ್ಯಂತ ಭಕ್ತಿಪೂರ್ವಕವಾಗಿರುತ್ತದೆ.


ತಾಯಂದಿರ ಈ ನಿಷ್ಕಲ್ಮಶ ಭಕ್ತಿ ಮತ್ತು ಸಮರ್ಪಣಾ ಭಾವವನ್ನು ಕಂಡ ಪೂಜ್ಯ ಅಡವಿಸಿದ್ದರಾಮ ಸ್ವಾಮಿಗಳು, “ಭಕ್ತರ ಭಕ್ತಿಯೇ ಶ್ರೀಮಠದ ನಿಜವಾದ ಶಕ್ತಿ” ಎಂದು ನುಡಿದರು. ಮಠದ ಮೂಲ ಚೈತನ್ಯವಿರುವುದೇ ಭಕ್ತರು ಹಸನ್ಮುಖಿಯಾಗಿ ಸಲ್ಲಿಸುವ ನಿಸ್ವಾರ್ಥ ಸೇವೆಯಲ್ಲಿ ಎಂಬುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ. ಭಕ್ತಿ, ಪ್ರಸಾದ ಹಾಗೂ ಸಮಾನತೆಯ ಮಹತ್ವವನ್ನು ಸಾರುವ ಈ ಆಚರಣೆಯು ಜನಮನದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯವನ್ನು ಪೋಷಿಸುತ್ತಾ ಬಂದಿದೆ ಎಂದರು. ಸಹಸ್ರ ಬಿಲ್ವಾರ್ಚಣೆ: ಶ್ರೀ ಅಡವಿಸಿದ್ದೇಶ್ವರ ಅಜ್ಜನ ಜಾತ್ರೆಯಲ್ಲಿ,ಅಜ್ಜನ ಗದ್ದುಗೆಗೆ ಸದ್ಬಕ್ತರಿಂದ ಸಹಸ್ರ ಬಿಲ್ವಾರ್ಚಣೆ ಹಾಗೂ ಬುತ್ತಿ,ತರಕಾರಿ,ಹಣ್ಣುಗಳ,ಪುಷ್ಪಾಲಂಕಾರ ಸೇರಿದಂತೆ ಅನೇಕ ಅಲಂಕಾರ ಮಾಡಲಾಗಿತ್ತು. ಜಾತ್ರೆಯಲ್ಲಿ ಉಡಿ ತುಂಬುವ ಕಾರ್ಯಕ್ರಮವು ಅತ್ಯಂತ ಪವಿತ್ರ ಹಾಗೂ ಭಾವನಾತ್ಮಕ ಕ್ಷಣವಾಗಿರುತ್ತದೆ. ಹೆಣ್ಣುಮಕ್ಕಳಿಗೆ ಮತ್ತು ತಾಯಂದಿರಿಗೆ ಗೌರವ ಹಾಗೂ ಸೌಭಾಗ್ಯದ ಸಂಕೇತವಾಗಿ ಉಡಿ ತುಂಬುವುದು ನಮ್ಮ ಸಂಸ್ಕೃತಿಯ ಅನನ್ಯ ಪರಂಪರೆ. ಅಜ್ಜನ ಜಾತ್ರೆಯ ಸಮಯದಲ್ಲಿ ಈ ಭಾಗದ ಅನೇಕ ಸಂತರು,ಮಹಾತ್ಮರು ಭಾಗವಹಿಸಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ತಾಯಂದಿರು, ಮಕ್ಕಳು,ಶ್ರೀ ಮಠದ ಭಕ್ತರು ಭಾಗವಹಿಸಿದ್ದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button