Belagavi NewsBelgaum NewsKannada NewsKarnataka News

*ಗಣೇಶೋತ್ಸವ: ರಾತ್ರಿ 12 ಗಂಟೆಯವರೆಗೆ ಅಂಗಡಿಗಳಿಗೆ ಅನುಮತಿ ನೀಡಲು ಒತ್ತಾಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕೆಳಕರ್ ಬಾಗ್ ಪ್ರದೇಶದ ವ್ಯಾಪಾರಿ ಸಂಘಟನೆಯ ವತಿಯಿಂದ ಗಣೇಶೋತ್ಸವದ ವೇಳೆ ರಾತ್ರಿ 12 ಗಂಟೆಯವರೆಗೆ ಅಂಗಡಿ ತೆರೆಯಲು ಅನುಮತಿ ನೀಡಿ ಎಂದು ಉಪ ಪೊಲೀಸ್ ಆಯುಕ್ತರಾದ ನಾರಾಯಣ ಭಾರಮಣಿ ಅವರಿಗೆ ಮನವಿ ಸಲ್ಲಿಸಲಾಯಿತು.

ಗಣೇಶೋತ್ಸವದ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಾತ್ರಿ 10 ಗಂಟೆಯ ನಂತರವೂ ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಾರೆ. ಆದರೆ ಕೆಲವು ಕಡೆಗಳಲ್ಲಿ ಪೊಲೀಸರು ಅಂಗಡಿಗಳನ್ನು ಬೇಗನೆ ಮುಚ್ಚುವಂತೆ ಸೂಚಿಸುತ್ತಿದ್ದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ತೊಂದರೆ ಎದುರಿಸುವಂತಾಗಿದೆ

Home add -Advt

ಈ ಹಿನ್ನೆಲೆಯಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಅಂಗಡಿಗಳನ್ನು ರಾತ್ರಿ 12 ಗಂಟೆಯವರೆಗೆ ತೆರೆಯಲು ಅನುಮತಿ ನೀಡಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.

ವ್ಯಾಪಾರಿಗಳ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಗಣೇಶೋತ್ಸವದ ಸಂದರ್ಭದಲ್ಲಿ ರಾತ್ರಿ 12 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ನಾಯಕ ಧನಂಜಯ ಜಾಧವ್, ಪ್ರಸಾದ್ ಮೋರೆ, ಪ್ರೇಮ ಚಿಖಲ್ಕರ್ ಸೇರಿದಂತೆ ಕೆಳಕರ್ ಬಾಗ್ ಪ್ರದೇಶದ ಹಾಗೂ ನಗರದ ಅನೇಕ ವ್ಯಾಪಾರಿ ಬಂಧುಗಳು ಉಪಸ್ಥಿತರಿದ್ದರು.

Related Articles

Back to top button