Kannada NewsKarnataka NewsLatestPolitics

*CM ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ರಾಜ್ಯಾದ್ಯಂತ ಬಾಲಕಾರ್ಮಿಕರ ವಿರುದ್ಧ ಬೃಹತ್ ಕಾರ್ಯಾಚರಣೆ: 800 ಮಕ್ಕಳ ರಕ್ಷಣೆ!*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಯಶವಂತಪುರ ಎಪಿಎಂಸಿ ಯಾರ್ಡ್‌ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಹಠಾತ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಾಲಕಾರ್ಮಿಕರು ಪತ್ತೆಯಾಗಿದ್ದರು. ಆಗ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದ ಸಿಎಂ, ಅದರ ಬೆನ್ನಲ್ಲೇ ರಾಜ್ಯಾದ್ಯಂತ ಬಾಲಕಾರ್ಮಿಕರ ಪತ್ತೆ ಕಾರ್ಯಾಚರಣೆ ನಡೆಸುವಂತೆ DGP ಅವರಿಗೆ ಸೂಚನೆ ನೀಡಿದ್ದರು.

ಅದರಂತೆ DGP ಕಂಟ್ರೋಲ್ ರೂಂ, ಬೆಂಗಳೂರು ವತಿಯಿಂದ ಇಂದಿನವರೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಪೊಲೀಸರು ಬೃಹತ್ ಯಶಸ್ಸು ಸಾಧಿಸಿದ್ದಾರೆ.

Home add -Advt

ರಾಜ್ಯ 962 ಒಟ್ಟು ಪೊಲೀಸ್ ಠಾಣೆಗಳು ಪೊಲೀಸರು ಕಾರ್ಯಾಚರಣೆ ನಡೆಸಿ 16951 ಸ್ಥಳಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ 800 ಮಕ್ಕಳನ್ನು ರಕ್ಷಿಸಲಾಗಿದೆ.

ಜಿಲ್ಲಾವಾರು ವಿವರ:

ಬೆಂಗಳೂರು ನಗರದಲ್ಲಿ 503 ಮಕ್ಕಳ ರಕ್ಷಣೆ, ವಿಜಯಪುರ ಜಿಲ್ಲೆಯಲ್ಲಿ 72, ತುಮಕೂರು ಜಿಲ್ಲೆಯಲ್ಲಿ 33, ಕೊಪ್ಪಳ ಜಿಲ್ಲೆಯಲ್ಲಿ 27, ಕಲಬುರಗಿ ನಗರದಲ್ಲಿ 22, ಬೆಂಗಳೂರು ಗ್ರಾಮಾಂತರ 09 ಬೆಳಗಾವಿ ಜಿಲ್ಲೆಯಲ್ಲಿ 12 ಹಾಗೂ ಬೆಳಗಾವಿ ನಗರದಲ್ಲಿ 2, ಬಳ್ಳಾರಿ 15, ಚಿತ್ರದುರ್ಗ 13, ಚಿಕ್ಕಬಳ್ಳಾಪುರ 16 ಮಕ್ಕಳ ರಕ್ಷಣೆ ಮಾಡಲಾಗಿದೆ.‌ಇನ್ನುಳಿದಂತೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆದಿದೆ. ಕೆಲವು ಜಿಲ್ಲೆಗಳಲ್ಲಿ NIL ವರದಿಯಾಗಿದೆ.

ಆರೋಪಿಗಳ ವಿರುದ್ಧ ಕ್ರಮ

ಪೊಲೀಸರು ಹಲವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಬೆಂಗಳೂರು ಸಿಟಿಯಲ್ಲಿ 18 ಪ್ರಕರಣ, ವಿಜಯಪುರದಲ್ಲಿ 25 ನೋಟಿಸ್ ಹಾಗೂ 3 FIR ದಾಖಲಾಗಿದೆ. ಕೊಡಗು ಜಿಲ್ಲೆಯಲ್ಲಿ 2 FIR ದಾಖಲಾಗಿದೆ. ರಕ್ಷಿಸಲಾದ ಮಕ್ಕಳನ್ನು CWC (Child Welfare Committee) ಗೆ ಹಸ್ತಾಂತರಿಸಲಾಗಿದ್ದು, ಕೆಲವರನ್ನು ಪೋಷಕರಿಗೆ ಒಪ್ಪಿಸಲಾಗಿದೆ.

ಯಶವಂತಪುರ ಘಟನೆ ಬಳಿಕ ಸಿಎಂ ಖಡಕ್ ಸೂಚನೆ ಮೇರೆಗೆ ನಡೆದ ಈ ಕಾರ್ಯಾಚರಣೆ ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

Back to top button