ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ವಿದ್ಯುತ್ ದರ ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಪರಿಷ್ಕೃತ ದರ ಮಾರ್ಚ್ 1ರಿಂದ ಜಾರಿಗೆ ಬರಲಿದೆ. ಪ್ರತಿ ಯೂನಿಟ್ ಮೇಲೆ 1 ರೂ. 10 ಪೈಸೆ ವಿದ್ಯುತ್ ದರ ಇಳಿಕೆ ಮಾಡಲಾಗಿದೆ.
ವಾಣಿಜ್ಯ ಬಳಕೆ ವಿದ್ಯುತ್ ದರ, ಕೈಗಾರಿಕೆ, ಖಾಸಗಿ, ಆಸ್ಪತ್ರೆಗಳ ವಿದ್ಯುತ್ ದರ ಕೂಡ ಇಳಿಕೆಯಾಗಿದೆ. ವಾಣಿಜ್ಯ ಬಳಕೆ ವಿದ್ಯುತ್ ದರ ಯೂನಿಟ್ ಗೆ 1 ರೂ.25 ಪೈಸೆ ಇಳಿಕೆಯಾಗಿದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ಯೂನಿಟ್ ಗೆ 40 ಪೈಸೆ ಕಡಿಮೆ ಮಾಡಲಾಗಿದೆ.
ಖಾಸಗಿ ಏತ ನೀರಾವರಿ ಬಳಕೆ ವಿದ್ಯುತ್ ದರ ಯೂನಿಟ್ ಗೆ 2 ರೂಪಾಯಿ, ಕೈಗಾರಿಕೆಗಳ ವಿದ್ಯುತ್ ದರ ಯೂನಿಟ್ ಗೆ 50 ಪೈಸೆ , ಅಪಾರ್ಟ್ ಮೆಂಟ್ ಗಳ ವಿದ್ಯುತ್ ದರದಲ್ಲಿ ಯೂನಿಟ್ ಗೆ 10 ಪೈಸೆ ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ