ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಏರಿಕೆ ಮಾಡುವ ಮುಲಕ ರಾಜ್ಯದ ಜನತೆಗೆ ಕರೆಂಟ್ ಶಾಕ್ ನೀಡಿದೆ.
ಈಗಾಗಲೇ ಜನಸಾಮಾನ್ಯರು ಪೆಟ್ರೋಲ್ ಡೀಸೆಲ್, ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು, ಇದರ ಮಧ್ಯೆಯೇ ರಾಜ್ಯ ಸರ್ಕಾರ ಕರೆಂಟ್ ಶಾಕ್ ನೀಡಿದೆ.
ಎಲ್ಲಾ ಎಸ್ಕಾಂ, ಬೆಸ್ಕಾಂ ವ್ಯಾಪ್ತಿ, ಜೆಸ್ಕಾಂ ವ್ಯಾಪ್ತಿ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿಯಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆಯಂತೆ ಹೆಚ್ಚಳ ಮಾಡಲಾಗಿದೆ.
ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ. ಕಳೆದ ವರ್ಷ 30 ಪೈಸೆ ಹೆಚ್ಚಳ ಮಾಡಿದ್ದ ಕೆ ಇ ಆರ್ ಸಿ ಈಬಾರಿ 35 ಪೈಸೆ ಹೆಚ್ಚಳ ಮಾಡಿದೆ.
ಕರ್ನಾಟಕದಲ್ಲಿ ಸ್ವಚ್ಛ ನಾಯಕತ್ವದ ಕೊರತೆಯಿದೆ; AAP ಸೇರಿದ ಭಾಸ್ಕರ್ ರಾವ್ ಕಳವಳ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ