
ಪ್ರಗತಿವಾಹಿನಿ ಸುದ್ದಿ: ಮಳೆ ಅಬ್ಬರದ ನಡುವೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೃಷ್ಣಾಪುಅರ ಗ್ರಾಮದ ತೋಟದಲ್ಲಿ ನಡೆದಿದೆ.
ಮಧ್ಯಪ್ರದೇಶ ಮೂಲದ ಮೋಹಿತ್ (24) ಹಾಗೂ ಕತರ್ವ (38) ಮೃತರು. ಜಯರಾಂ ಎಂಬುವವರ ತೋಟದಲ್ಲಿ ಈ ದುರಂತ ಸಂಭವಿಸಿದೆ.
ಕೃಷ್ಣಾಪುರ ಗ್ರಾಮದ ಜಯರಾಂ ಅವರ ಅಡಿಕೆ ತೋಟದಲ್ಲಿ ಕೆಲವು ಶ್ರೀಗಂಧದ ಮರಗಳನ್ನು ಹಾಕಲಾಗಿತ್ತು. ಶ್ರೀಗಂಧ ಮರ ಕಳ್ಳತನಕ್ಕೆ ಬಂದು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಅಬ್ಬಿನಹೊಳೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.