Latest

*ದೇವಸ್ಥಾನದ ಆನೆ ದಾಳಿ: ಮಾವುತ ಸೇರಿ ಇಬ್ಬರು ಸಾವು*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ತಿರುಚಂದುರ್ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆನೆ ದಾಳಿಗೆ ಮಾವುತ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಆನೆ ದಾಳಿಯಲ್ಲಿ ಮಾವುತ ಉದಯಕುಮಾರ್ ಹಾಗೂ ಆತನ ಸಂಬಂಧಿ ಶಿಶುಪಾಲನ್ ಗಂಭೀರವಾಗಿ ಗಾಯಗೊಂದಿದ್ದರು. ಇಬ್ಬರನ್ನೂ ತಿರುಚಂದುರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಆನೆಗೆ ಆಹಾರ ನೀಡುತ್ತಿದಗ ಏಕಾಏಕಿ ಆನೆ ಕೋಪಗೊಂಡು ಮಾಹಿತ ಹಾಗೂ ಆತನ ಸಂಅಬ್ಂಧಿ ಮೇಲೆ ಏಕಾಏಕಿ ಆನೆ ದಾಳಿ ನಡೆಸಿದೆ ಎಂದು ದೇವಸ್ಥನ ವ್ಯಾಪ್ತಿಯ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

Home add -Advt

2006ರಲ್ಲಿ ಈ ಆನೆಯನ್ನು ದೇವಾಲಯಕ್ಕೆ ಉಡುಗೊರೆಯಾಗಿ ನೀಡಲಾಗಿತ್ತು. ಆನೆ ಆರೈಕೆಗೆ ಮೂರು ಜನರಿದ್ದಾರೆ. ರಾಜಗೋಪಾಲಪುರ ಬಳಿ ಪ್ರತ್ಯೇಕ ಶೆಡ್ ನಲ್ಲಿ ಈ ಆನೆಯನ್ನು ನಿರ್ವಹಿಸಲಾಗುತ್ತಿದೆ.


Related Articles

Back to top button