Kannada NewsKarnataka News

ಹನ್ನೊಂದು ಪ್ರಮುಖ ಸುದ್ದಿಗಳು

ಪ್ರಾದೇಶಿಕ ಆಯುಕ್ತ ಆಮ್ಲಾನ್ ಬಿಸ್ವಾಸ್ ಅಧಿಕಾರ ಸ್ವೀಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಅಪರ ಪ್ರಾದೇಶಿಕ ಆಯುಕ್ತರಾದ ಶಶಿಧರ್ ಕುರೇರ್ ಹಾಗೂ ರಮೇಶ್ ಕಳಸದ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಮದುರ್ಗ – ದಸರಾ ಕ್ರೀಡಾಕೂಟ 

೨೦೧೯-೨೦ನೇ ಸಾಲಿನ ರಾಮದುರ್ಗ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಸೆಪ್ಟೆಂಬರ ೧೬ ಮತ್ತು ೧೭ನೇ ರಂದು ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದ ಕ್ರೀಡಾಶಾಲೆ ಚಂದರಗಿಯಲ್ಲಿ ಜರುಗಿಸಲು ನಿರ್ಧರಿಸಲಾಗಿದೆ.
ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆಪ್ಟೆಂಬರ ೧೬ ರಂದು ಬೆಳಿಗ್ಗೆ ೯ ಗಂಟೆಗೆ ಹಾಜರಿದ್ದು ಸಂಘಟಕರಿಗೆ ತಮ್ಮ ಪ್ರವೇಶ ಪತ್ರದೊಂದಿಗೆ ವರದಿ ಮಾಡಿಕೊಳ್ಳಬೇಕು.

ಸ್ಪರ್ಧೆಗಳ ವಿವರ:
ಅಥ್ಲೆಟಿಕ್ಸ್ (ಪುರುಷರಿಗೆ) : ೧೦೦, ೨೦೦, ೪೦೦, ೮೦೦ ಹಾಗೂ ೧೫೦೦ ಮೀ ಓಟ, ೫೦೦೦ ಮೀ ಓಟ, ಉದ್ದ ಜಿಗಿತ , ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, ೧೧೦ ಮೀ ಹರ್ಡಲ್ಸ್, ೪ x ೧೦೦ ಹಾಗೂ ೪ x ೪೦೦ ಮೀ ರಿಲೇ, ಅಥ್ಲೆಟಿಕ್ಸ್ (ಮಹಿಳೆಯರಿಗೆ) : ೧೦೦, ೨೦೦, ೪೦೦, ೮೦೦ ಹಾಗೂ ೧೫೦೦ ಮೀ ಓಟ, ೩೦೦೦ ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, ೧೦೦ ಮೀ ಹರ್ಡಲ್ಸ್, ೪ x ೧೦೦ ಹಾಗೂ ೪ x ೪೦೦ ಮೀ ರಿಲೇ, ಗುಂಪು ಸ್ಪರ್ಧೆಗಳು (ಪುರುಷ ಮತ್ತು ಮಹಿಳೆಯರಿಗಾಗಿ) : ಕಬಡ್ಡಿ, ವಾಲಿಬಾಲ್, ಖೋಖೋ, ಫುಟ್ಬಾಲ್ (ಪುರುಷರಿಗೆ ಮಾತ್ರ)

ನಿಯಮಗಳು:
ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ರಾಮದುರ್ಗ ತಾಲೂಕಿನ ರಹವಾಸಿಯಾಗಿರಬೇಕು, ಕ್ರೀಡಾಪಟುಗಳು ಸೆಪ್ಟೆಂಬರ ೧೬ ರಂದು ಬೆಳಿಗ್ಗೆ ೯ ಗಂಟೆಗೆ ಆಟದ ಮೈದಾನದಲ್ಲಿ ಹಾಜರಿದ್ದು ಸಂಘಟಕರಿಗೆ ವರದಿ ಮಾಡಿಕೊಳ್ಳುವುದು, ಕ್ರೀಡಾಕೂಟದಲ್ಲಿ ರಕ್ಷಣಾ ಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಾಗಿರುವುದಿಲ್ಲ, ಈ ಕ್ರೀಡಾಕೂಟದಲ್ಲಿ ತಾಲೂಕಿನ ಶಾಲಾ ಕಾಲೇಜು, ಯುವಕ, ಯುವತಿ ಸಂಘಗಳ ಹಾಗೂ ಕ್ರೀಡಾ ಸಂಘ ಸಂಸ್ಥೆಗಳ ಕ್ರೀಡಾಪಟುಗಳು ಭಾಗವಹಿಸಬಹುದು.
ಶಾಲಾ ಕಾಲೇಜುಗಳ ವತಿಯಿಂದ ಭಾಗವಹಿಸುವ ಕ್ರೀಡಾಪಟುಗಳು ಶಾಲಾ ಮುಖ್ಯಸ್ಥರ ಮುಖಾಂತರ ಪ್ರವೇಶ ಪತ್ರಗಳನ್ನು ಹಾಜರಪಡಿಸುವುದು, ಒಂದು ತಾಲೂಕಿನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತೊಂದು ತಾಲೂಕಿನಲ್ಲಿ ಭಾಗವಹಿಸತಕ್ಕದ್ದಲ್ಲ, ನಿರ್ಣಾಯಕರ ನಿರ್ಣಯವೇ ಅಂತಿಮವಾಗಿದ್ದು ಕ್ರೀಡಾಕೂಟದಲ್ಲಿ ಅಸಭ್ಯವಾಗಿ ವರ್ತಿಸಿದ ಕ್ರೀಡಾಪಟು ಅಥವಾ ತಂಡಗಳನ್ನು ಅನರ್ಹಗೊಳಿಸಲಾಗುವುದು, ಭಾಗವಹಿಸುವ ಕ್ರೀಡಾಪಟುಗಳು ಆಯಾ ಗ್ರಾಮ ಪಂಚಾಯತ ಶೇ ೨% ಅನುದಾನದಲ್ಲಿ ಪ್ರವಾಸ ಭತ್ಯೆ, ದಿನಭತ್ಯೆಯನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೮೩೧೭೪೫೬೩೦೧, ೯೭೪೩೯೭೨೪೯೯ ನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಲಹೊಂಗಲ:  ದಸರಾ ಕ್ರೀಡಾಕೂಟ

೨೦೧೯-೨೦ನೇ ಸಾಲಿನ ಬೈಲಹೊಂಗಲ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಸೆಪ್ಟೆಂಬರ ೧೩ ಮತ್ತು ೧೪ನೇ ರಂದು ಬೈಲಹೊಂಗಲ ತಾಲ್ಲೂಕು ಕ್ರೀಡಾಂಗಣದಲ್ಲಿ ಜರುಗಿಸಲು ನಿರ್ಧರಿಸಲಾಗಿದೆ.

ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆಪ್ಟೆಂಬರ ೧೩ ರಂದು ಬೆಳಿಗ್ಗೆ ೯ ಗಂಟೆಗೆ ಹಾಜರಿದ್ದು ಸಂಘಟಕರಿಗೆ ತಮ್ಮ ಪ್ರವೇಶ ಪತ್ರದೊಂದಿಗೆ ವರದಿ ಮಾಡಿಕೊಳ್ಳಬೇಕು.

ಸ್ಪರ್ಧೆಗಳ ವಿವರ
ಅಥ್ಲೆಟಿಕ್ಸ್ (ಪುರುಷರಿಗೆ) : ೧೦೦, ೨೦೦, ೪೦೦, ೮೦೦ ಹಾಗೂ ೧೫೦೦ ಮೀ ಓಟ, ೫೦೦೦ ಮೀ ಓಟ, ಉದ್ದ ಜಿಗಿತ , ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, ೧೧೦ ಮೀ ಹರ್ಡಲ್ಸ್, ೪ x ೧೦೦ ಹಾಗೂ ೪ x ೪೦೦ ಮೀ ರಿಲೇ, ಅಥ್ಲೆಟಿಕ್ಸ್ (ಮಹಿಳೆಯರಿಗೆ) : ೧೦೦, ೨೦೦, ೪೦೦, ೮೦೦ ಹಾಗೂ ೧೫೦೦ ಮೀ ಓಟ, ೩೦೦೦ ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, ೧೦೦ ಮೀ ಹರ್ಡಲ್ಸ್, ೪ x ೧೦೦ ಹಾಗೂ ೪ x ೪೦೦ ಮೀ ರಿಲೇ, ಗುಂಪು ಸ್ಪರ್ಧೆಗಳು (ಪುರುಷ ಮತ್ತು ಮಹಿಳೆಯರಿಗಾಗಿ) : ಕಬಡ್ಡಿ, ವಾಲಿಬಾಲ್, ಖೋಖೋ, ಫುಟ್ಬಾಲ್ (ಪುರುಷರಿಗೆ ಮಾತ್ರ)

ನಿಯಮಗಳು:
ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಬೈಲಹೊಂಗಲ ತಾಲೂಕಿನ ರಹವಾಸಿಯಾಗಿರಬೇಕು, ಕ್ರೀಡಾಪಟುಗಳು ಸೆಪ್ಟೆಂಬರ ೧೩ ರಂದು ಬೆಳಿಗ್ಗೆ ೯ ಗಂಟೆಗೆ ಆಟದ ಮೈದಾನದಲ್ಲಿ ಹಾಜರಿದ್ದು ಸಂಘಟಕರಿಗೆ ವರದಿ ಮಾಡಿಕೊಳ್ಳುವುದು, ಕ್ರೀಡಾಕೂಟದಲ್ಲಿ ರಕ್ಷಣಾ ಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಾಗಿರುವುದಿಲ್ಲ, ಈ ಕ್ರೀಡಾಕೂಟದಲ್ಲಿ ತಾಲೂಕಿನ ಶಾಲಾ ಕಾಲೇಜು, ಯುವಕ, ಯುವತಿ ಸಂಘಗಳ ಹಾಗೂ ಕ್ರೀಡಾ ಸಂಘ ಸಂಸ್ಥೆಗಳ ಕ್ರೀಡಾಪಟುಗಳು ಭಾಗವಹಿಸಬಹುದು.
ಶಾಲಾ ಕಾಲೇಜುಗಳ ವತಿಯಿಂದ ಭಾಗವಹಿಸುವ ಕ್ರೀಡಾಪಟುಗಳು ಶಾಲಾ ಮುಖ್ಯಸ್ಥರ ಮುಖಾಂತರ ಪ್ರವೇಶ ಪತ್ರಗಳನ್ನು ಹಾಜರಪಡಿಸುವುದು, ಒಂದು ತಾಲೂಕಿನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತೊಂದು ತಾಲೂಕಿನಲ್ಲಿ ಭಾಗವಹಿಸತಕ್ಕದ್ದಲ್ಲ, ನಿರ್ಣಾಯಕರ ನಿರ್ಣಯವೇ ಅಂತಿಮವಾಗಿದ್ದು ಕ್ರೀಡಾಕೂಟದಲ್ಲಿ ಅಸಭ್ಯವಾಗಿ ವರ್ತಿಸಿದ ಕ್ರೀಡಾಪಟು ಅಥವಾ ತಂಡಗಳನ್ನು ಅನರ್ಹಗೊಳಿಸಲಾಗುವುದು, ಭಾಗವಹಿಸುವ ಕ್ರೀಡಾಪಟುಗಳು ಆಯಾ ಗ್ರಾಮ ಪಂಚಾಯತ ಶೇ ೨% ಅನುದಾನದಲ್ಲಿ ಪ್ರವಾಸ ಭತ್ಯೆ, ದಿನಭತ್ಯೆಯನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೯೬೪೩೪೩೭೮೭, ೯೬೮೬೩೮೩೯೦೯, ೮೬೧೮೪೯೭೫೩೩ ನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ನವದೆಹಲಿ ರವರು ೨೦೧೯-೨೦ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಂದ, ಸಂಸ್ಥೆಗಳಿಂದ ವಯೋಶ್ರೇಷ್ಠ ಸಮ್ಮಾನ್ ೨೦೧೯ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಹಿರಿಯ ನಾಗರಿಕರಿಂದ ಹಾಗೂ ಸಂಸ್ಥೆಗಳಿಂದ ನಿಗದಿತ ನಮೂನೆಯಲ್ಲಿ ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ ೧೩ ರೊಳಗೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಛೇರಿ, ಶಿವಾಜಿ ನಗರ ಬೆಳಗಾವಿ ಇಲ್ಲಿಗೆ ದ್ವಿಪ್ರತಿಗಳಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ದಿನಾಂಕ ಮುಗಿದ ನಂತರ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ  

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಕೆಎಲ್‌ಇ ಸೊಸೈಟಿ ಲಿಂಗರಾಜ ಮಹಾವಿದ್ಯಾಲಯ ಬೆಳಗಾವಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಇವರ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ತಿಳುವಳಿಕೆ ಕಾರ್ಯಾಗಾರ ಶುಕ್ರವಾರ (ಸೆ.೧೨) ಬೆಳಗ್ಗೆ ೧೦ ಗಂಟೆಗೆ ನಗರದ ಕೆಎಲ್‌ಇ ಸೊಸೈಟಿ ಲಿಂಗರಾಜ ಮಹಾವಿದ್ಯಾಲಯ ಕೇಂದ್ರ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಉದ್ಘಾಟಕರಾಗಿ ಜಿಲ್ಲಾ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯ ದೇವರಾಜ ಅರಸ, ಅಧ್ಯಕ್ಷತೆಯನ್ನು ಕೆಎಲ್‌ಇ ಲಿಂಗರಾಜ ಮಹಾವಿದ್ಯಾಲಯ ಪ್ರಾಚಾರ್ಯರು ಡಾ.ಆರ್.ಎಮ್.ಪಾಟೀಲ ವಹಿಸುವರು.
ಮುಖ್ಯ ಅಥಿತಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ಎಸ್.ವ್ಹಿ.ಮುನ್ಯಾಳ, ಚಿಕ್ಕೊಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ಶೈಲಜಾ ತಮ್ಮನ್ನವರ, ಮುಖ್ಯಸ್ಥರು ಮಾನಸಿಕ ವಿಭಾಗ ಬಿಮ್ಸ್ ಆಸ್ಪತ್ರೆ ಡಾ. ರಾಜೇಂದ್ರಕುಮಾರ ಕಟ್ಟೆ, ಮನೋವೈದ್ಯರು ಮಾನಸಿಕ ವಿಭಾಗ ಬಿಮ್ಸ್ ಆಸ್ಪತ್ರೆ ಡಾ. ಸರಸ್ವತಿ ತೆನಗಿ ಹಾಗೂ ಹಿರಿಯ ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೆಶಕರು ಗುರುನಾಥ ಕಡಬೂರ.
ಕಾರ್ಯಾಗಾರದಲ್ಲಿ ಡಾ. ರಾಜೇಂದ್ರ ಕುಮಾರ ಕಟ್ಟೆ, ಡಾ.ಸರಸ್ವತಿ ತೆನಗಿ .ಡಾ. ಸುಮಿತ ಕುಮಾರ ದುರಗೋಜಿ ಉಪನ್ಯಾಸ ನೀಡುವರು.

ಕಲುಷಿತ ನೀರು: ಎಚ್ಚರಿಕೆ 

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಲುಷಿತ ನೀರು ಮತ್ತು ಆಹಾರ ಸೇವಿಸುವುದರಿಂದ ಕಾಲರಾ, ವಿಷಮಶೀತ ಜ್ವರ, ವಾಂತಿ ಭೇದಿ, ಆಮಶಂಕೆ, ಕಾಮಾಲೆ, ಇಲಿ ಜ್ವರ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗುವ ಸಂಭವವಿರುವ ಕಾರಣ ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಕಾರಣ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ: ೧೦೪ನ್ನು ಸಂಪರ್ಕಿಬೇಕು ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೋಗಗಳು ಬರದಂತೆ ವಹಿಸಿಬೇಕಾದ ಕ್ರಮಗಳು:
ನಾವು ಸೇವಿಸುವ ಆಹಾರ ಮತ್ತು ನೀರಿನ ಸ್ವಚ್ಚತೆಗೆ ಆದ್ಯತೆ ನೀಡಬೇಕು, ಮಲಮೂತ್ರ ವಿಸರ್ಜನೆಗೆ ಶೌಚಾಲಯವನ್ನು ಉಪಯೋಗಿಸಬೇಕು, ಮಲಮೂತ್ರ ವಿಸರ್ಜನೆಯ ನಂತರ ಹಾಗೂ ಆಹಾರ ಸೇವಿಸುವ ಮೊದಲು ಕೈಕಾಲುಗಳನ್ನು ಚೆನ್ನಾಗಿ ಸಾಬೂನಿನಿಂದ ತೊಳೆದುಕೊಳ್ಳಬೇಕು, ಕೈ ಬೆರಳುಗಳ ಉಗುರುಗಳು ಹೆಚ್ಚು ಬೆಳೆಯದಂತೆ ನೋಡಿಕೊಳ್ಳುವುದು, ಕುಡಿಯುವ ನೀರಿನ ಅಭಾವವಿದ್ದ ಪ್ರದೇಶಗಳಲ್ಲಿ ಸಾರ್ವಜನಿಕರು ಕಾಯಿಸಿ ಆರಿಸಿದ ನೀರನ್ನಾಗಲೀ ಅಥವಾ ಹ್ಯಾಲೋಜನ್ ಗುಳಿಗೆಗಳಿಂದ ಶುದ್ಧೀಕರಿಸಿದ ನೀರನ್ನೆ ಉಪಯೋಗಿಸಬೇಕು, ಕುಡಿಯುವ ನೀರಿನ ಸ್ಥಾವರಗಳ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಬೇಕು.

ಅದರಂತೆ ಗ್ರಾಮದಲ್ಲಿ ಪರಿಸರ ನೈರ್ಮಲ್ಯಕ್ಕೆ ಮಹತ್ವ ಕೊಡಬೇಕು ನೊಣಗಳ ಹಾವಳಿಯನ್ನು ಹತೋಟಿಯಲ್ಲಿಡಬೇಕು, ತಾಜಾ ಹಾಗೂ ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು, ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ಬಿಸಿ ನೀರಿನಲ್ಲಿ ಅಥವಾ ಉಪ್ಪು ಮಿಶ್ರಿತ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸಬೇಕು, ಭೇದಿ ನಿಯಂತ್ರಿಸಲು ತಪ್ಪದೇ ಓ.ಆರ್.ಎಸ್ ಬಳಸಬೇಕು, ಯಾವುದೇ ಸಾಂಕ್ರಾಮಿಕ ರೋಗ ಕಾಣಿಸಿದ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿಯ ಸಲಹೆ ಪಡೆಯುವುದು ಮತ್ತು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವುದು.

ಈ ರೀತಿ ಮಾಡಬೇಡಿ:
ಬಯಲಿನಲ್ಲಿ ನೀರಿನ ಸ್ಥಾವರಗಳ ಸುತ್ತಮುತ್ತ ದನಕರುಗಳ ಮೈ ತೊಳೆಯುವುದು ಹಾಗೂ ಬಟ್ಟೆ ಪಾತ್ರಗಳನ್ನು ತೊಳೆಯುವುದು, ಕುಡಿಯುವ ನೀರಿನಲ್ಲಿ ಕೈ ಅದ್ದುವುದು, ಬೀದಿ ಬದಿಯಲ್ಲಿ ತೆರೆದಿಟ್ಟ ಮತ್ತು ಕರಿದ ಆಹಾರ ಪದಾರ್ಥಗಳನ್ನು ಹಾಗೂ ಕತ್ತರಿಸಿಟ್ಟ ಹಣ್ಣುಗಳನ್ನು ತಿನ್ನುವುದು, ಮನೆ ವೈದ್ಯ ಮಾಡುವುದು, ಮೊದಲೇ ಸಿದ್ದಪಡಿಸಿದ ಆಹಾರವನ್ನು ಸೇವಿಸುವುದು, ಕೆರೆ, ನದಿ, ಹಳ್ಳ, ಹೊಂಡ, ಹೊಲಗದ್ದೆ ಮತ್ತು ಹರಿಯುವ ಕಾಲುವೆ ನೀರನ್ನು ಕುಡಿಯುವುದು, ಬಯಲಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು.

ಮಕ್ಕಳ ಮೇಲೆ ದೌರ್ಜನ್ಯ 

ಮಕ್ಕಳ ದೈಹಿಕ ಶೋಷಣೆ ಮತ್ತು ಲೈಗಿಂಕ ದೌರ್ಜನ್ಯ ಪ್ರಕರಣಗಳಿಂದ ಮಾನಸಿಕ ಸ್ಥೈರ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾದಿಕಾರಿಗಳು ಸಮಗ್ರ ಶಿಕ್ಷಣ ಅಭಿಯಾನ ಉಪನಿರ್ದೇಶಕರು ತಿಳಿಸಿದ್ದಾರೆ.
ಅನೇಕ ಬಾರಿ ಮಕ್ಕಳು ತಮ್ಮ ಮೇಲೆ ಆಗುತ್ತಿರುವ ತೊಂದರೆಗಳ ಕುರಿತು ಯಾರಿಗೆ, ಹೇಗೆ ದೂರು ಕೊಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲದೆ ಮಾನಸಿಕವಾಗಿ ತೊಂದರೆಗೆ ಒಳಗಾಗುತ್ತಿದ್ದಾರೆ.
ಮಕ್ಕಳು ದೈನಂದಿನ ಶಾಲಾ ವೇಳೆಯಲ್ಲಿ ಕ್ಷುಲ್ಲಕ ತಪ್ಪುಗಳನ್ನು ಮಾಡಿದಾಗ ಶಾಲೆಯಿಂದ ಹೊರಹಾಕುವ, ದೈಹಿಕವಾಗಿ ಥಳಿಸುವ ಶಿಕ್ಷೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅನೇಕ ಮಕ್ಕಳು ಶಾಲೆಯಿಂದ ಹೊರಗೆ ಉಳಿಯಲು ಸಹ ಕಾರಣವಾಗುತ್ತಿದೆ.
ಪೋಷಣೆ ಅಗತ್ಯವಿರುವ, ಬಾಲ ಕಾರ್ಮಿಕರ, ಬಾಲ್ಯ ವಿವಾಹಕ್ಕೆ ಒಳಗಾಗಬಹುದಾದ ಹಾಗೂ ಒಳಗಾದ, ಕಾಣೆಯಾದ, ಶಾಲೆಯಿಂದ ಹೊರಗುಳಿದ, ಮಾದಕ ವ್ಯಸನಕ್ಕೆ ಒಳಗದ, ಲೈಂಗಿಕ ಶೋಷಣೆಗೆ ಗುರಿಯಾದವರು ಮಕ್ಕಳ ಚೈಲ್ಡ್ ಹೆಲ್ಪ್ ಲೈನ್ ೧೦೯೮ ನ್ನು ಸಂಪರ್ಕಿಸಿ ರಕ್ಷಣೆ ಪಡೆಯಬಹುದಾಗಿರುತ್ತದೆ ಎಂದು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾದಿಕಾರಿಗಳು ಸಮಗ್ರ ಶಿಕ್ಷಣ ಅಭಿಯಾನ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಮದ್ಯ ಮಾರಾಟ ನಿಷೇಧ

೨೦೧೯ ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೆಪ್ಟಂಬರ ೧೨ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಹಿತ ದೃಷ್ಟಿಯಿಂದ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಅವಶ್ಯಕತೆ ಇರುವುದರಿಂದ ಬೆಳಗಾವಿ ಜಿಲ್ಲೆಯಾದ್ಯಂತ (ಬೆಳಗಾವಿ ತಾಲ್ಲೂಕು ಹೊರತುಪಡಿಸಿ) ಎಲ್ಲ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲಿಕರು ಅಧಿಭೋಗದಾರರು ಮತ್ತು ಸಂದರ್ಭನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೋಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸತಕ್ಕದ್ದು ಎಂದು ಬೆಳಗಾವಿ ನಗರ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪೋಲಿಸ ಆಯುಕ್ತರು ಬಿ.ಎಸ್.ಲೋಕೇಶ ಕುಮಾರ ಅವರು ತಿಳಿಸಿದ್ದಾರೆ.
೧೧ನೇ ದಿನದ ಗಣೇಶ ಮೂರ್ತಿಗಳ ವಿಸರ್ಜನೆಯ ನಿಮಿತ್ಯ ಸೆ.೧೨ ರ ಬೆಳಿಗ್ಗೆ ೬ ಗಂಟೆಯಿಂದ ಸೆ.೧೩ ರ ಬೆಳಿಗ್ಗೆ ೬ ಗಂಟೆವರೆಗೆ ಎಲ್ಲ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಬೇಕು.
ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು ಅಬಕಾರಿ ಉಪ ಆಯುಕ್ತರು, ಬೆಳಗಾವಿ ತಾಲೂಕ ಮತ್ತು ಉಪ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಅವರ ಅಧೀನ ಅಧಿಕಾರಿಗಳು, ಹೆಚ್ಚುವರಿ ಅಬಕಾರಿ ಅಧೀಕ್ಷಕರು, ಬೆಳಗಾವಿ ಮತ್ತು ಅಬಕಾರಿ ಉಪ-ಅಧೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಈ ಅಧಿಸೂಚನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಜರುಗಿಸಬೇಕು.
ಈ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ನಗರ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರು ಬಿ.ಎಸ್.ಲೋಕೇಶ ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳ ಪ್ರವಾಸ 

ಲೋಕಾಯುಕ್ತ ಪೊಲೀಸರಿಂದ ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕುಂದುಕೊರತೆಗಳ ಸಭೆಯನ್ನು ನಡೆಸಲು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್ ಅವರು ಆದೇಶಿಸಿರುತ್ತಾರೆ. ಹಾಗೂ ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಸದರಿ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಿರುತ್ತಾರೆ.
ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರದಲ್ಲಿ ನೀಡಬಹುದಾಗಿದೆ. ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್ ರವರು ತಿಳಿಸಿದ್ದಾರೆ.
ಈ ನಿಮಿತ್ಯವಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸೆಪ್ಟೆಂಬರ ೧೬ ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ, ಪೊಲೀಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ .ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಬೆಳಗಾವಿ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ ೧೮ ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ, ಪೊಲೀಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ರಾಮದುರ್ಗ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ ೨೦ ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ, ಪೊಲೀಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಖಾನಾಪೂರ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಬೆಳಗಾವಿ ಕಛೇರಿ ದೂರವಾಣಿ ಸಂಖ್ಯೆ ೦೮೩೧-೨೪೨೧೫೫೦ ಮತ್ತು ೦೮೩೧-೨೪೨೧೯೨೨ ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ವಿದ್ಯುತ್ ಗ್ರಾಹಕರ ಗಮನಕ್ಕೆ

ಹೆಸ್ಕಾಂ ನಗರ ಉಪವಿಭಾಗ-೩ ರ ಕಚೇರಿ ವ್ಯಾಪ್ತಿಯಲ್ಲಿ ಬರುವ ವಿದ್ಯುತ ಗ್ರಾಹಕರಿಗೆ ಅಗಸ್ಟ್ ಹಾಗೂ ಸೆಪ್ಟೆಂಬರ ತಿಂಗಳಿನಲ್ಲಿ ವಿದ್ಯುತ್ ಗ್ರಾಹಕರು ಗೂಗಲ್ ಪೇ ಮತ್ತು ಪೋನ್ ಪೇ ಮೂಲಕ ತಮ್ಮ ಬಿಲ್ಲುಗಳನ್ನು ಪಾವತಿಸಿದ್ದು ಅದರಲ್ಲಿ ಕೆಲವೊಂದು ಸ್ಥಾವರಗಳು ಸಂಬಂಧಪಟ್ಟ ಅಕೌಂಟ್ ಐ.ಡಿ. ಸಂಖ್ಯೆ (ಖಾತೆ) ಗಳಿಗೆ ಲಿಂಕ್ ತಪ್ಪಿದ್ದರಿಂದ ಸರಿಯಾಗಿ ಪಾವತಿಯಾಗುತ್ತಿಲ್ಲ. ಹಣವು ಹೆಸ್ಕಾಂನ ಖಾತೆಗೆ ಜಮಾ ಆಗದೇ ಗ್ರಾಹಕರ ಬ್ಯಾಂಕ್ ಖಾತೆಗೆ ಮರಳಿ ಜಮಾ ಆಗುತ್ತಿದೆ.
ಆದರಿಂದ ಗ್ರಾಹಕರು ನೇರವಾಗಿ ಡಬ್ಯೂ.ಎಸ್.ಎಸ್.(ವೇಬ್ ಸೇಲ್ಫ್ ಸರ್ವಿಸೇಸ್) ಮೂಲಕ ಮಾತ್ರ ಹಣ ಪಾವತಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯಲ್ಲಿ ಅಕ್ಟೋಬರ್ ೯ ರಿಂದ ೧೩ ದಿನಗಳ ಕ್ಯಾಮರಾ ಹಾಗೂ ಸೆಕ್ಯೂರಿಟಿ ಅಲಾರಂ ಇನಸ್ಟಾಲೇಷನ್ ಮತ್ತು ದುರಸ್ತಿಯ ಉಚಿತ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು ೧೮ ರಿಂದ ೪೫ ವರ್ಷ ವಯೋಮಿತಿಯ ಹಾಗೂ ಓದು ಬರಹ ತಿಳಿದಿರುವ ಸ್ವದ್ಯೋಗದಲ್ಲಿ ಆಸಕ್ತಿ ಇರುವ ಯುವಕರು ಅರ್ಜಿಯನ್ನು ಸಲ್ಲಿಸಬಹುದು. ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: ೯೪೮೩೪೮೫೪೮೯, ೯೪೮೨೧೮೮೭೮೦, ೦೮೨೮೪-೨೨೦೮೦೭ ನ್ನು ಸಂಪರ್ಕಿಸಲು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button