ಪ್ರಗತಿವಾಹಿನಿ ಸುದ್ದಿ, ಅಮರಾವತಿ: ಸರಕಾರಗಳು ಮಾಹಿತಿ ಸಂಗ್ರಹಣೆಗೆ ನಾನಾ ರೀತಿಯ ಸಮೀಕ್ಷೆಗಳನ್ನು ನಡೆಸುತ್ತಲೇ ಇರುತ್ತವೆ. ಆದರೆ ಆಂಧ್ರ ಪ್ರದೇಶ ಸರಕಾರ ಇನ್ನೂ ಒಂದು ಹೆಜ್ಜೆ ಮುಂದಿರಿಸಿ ಜನರಿಗೆ ಮುಜುಗರ ಹುಟ್ಟಿಸುವ ಸಮೀಕ್ಷೆಯೊಂದನ್ನು ಕೈಗೊಂಡಿದೆ.
ಅಪರಾಧ ಪ್ರಕರಣಗಳ ಮಾಹಿತಿ ಸಂಗ್ರಹಿಸಲು ಗ್ರಾಮ, ವಾರ್ಡ್ ಮಟ್ಟದಲ್ಲಿ ನಡೆಸಲಾಗುತ್ತಿರುವ ಈ ಸಮೀಕ್ಷೆ ವೇಳೆ ಪೊಲೀಸ್ ಸಿಬ್ಬಂದಿ ಕೇಳುವ ಪ್ರಶ್ನೆಗೆ ಬಹುತೇಕ ಜನ ಒಳಗೊಳಗೇ “ಗುರ್ರ್..” ಎನ್ನುತ್ತಲೇ ಉತ್ತರಿಸುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಯಾದರೂ ಮುಜುಗರಕ್ಕೀಡಾಗುತ್ತಲೇ ಅಂಜಿ, ಅಳುಕಿ, ನಾಚಿ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಿದ್ದಾರೆ.
ಇಷ್ಟಕ್ಕೂ ಇಂಥ ಪ್ರಶ್ನೆಗಳು ಯಾವವು ಗೊತ್ತೇ..? ನೀವು ಯಾರೊಂದಿಗಾದರೂ ಅಕ್ರಮ ಸಂಬಂಧ ಹೊಂದಿದ್ದೀರಾ?, ನಿಮಗೆ ವಿವಾಹೇತರ ಸಂಬಂಧಗಳಿವೆಯೇ, ಹಲವರೊಂದಿಗೆ ಲೈಂಗಿಕ ಸಂಬಂಧ ಇದೆಯಾ?, ಎಷ್ಟು ಮದುವೆಯಾಗಿದ್ದೀರಿ? ಎಂಬಿತ್ಯಾದಿ 12 ಬಗೆಯ ಪ್ರಶ್ನೆಗಳನ್ನು ಕೇಳಿ ಸಿಬ್ಬಂದಿ ಅಂದು ಸಂಜೆ ಪೊಲೀಸ್ ಠಾಣೆಯಲ್ಲಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ನೀಡಬೇಕು.
ಈ ಸಮೀಕ್ಷೆಯಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಸ್ವಯಂಸೇವಕರೂ ಇದ್ದು ಸಮೀಕ್ಷಾ ಕಾರ್ಯ ಎಂದು ಮುಗಿಯುವುದೋ ಎಂದು ಕಾಯುವಂತಾಗಿದೆ.
ಭೂ ಪರಿವರ್ತನೆ ಕಾಲಾವಧಿ ಏಳು ದಿನಗಳಿಗೆ ಇಳಿಕೆ: ಮಸೂದೆ ಅಂಗೀಕಾರ
https://pragati.taskdun.com/land-conversion-period-reduced-to-seven-days-bill-passed/
*ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಕಾಂಗ್ರೆಸ್ ಸಾಧನೆಯೇನು? ಜಗದೀಶ್ ಶೆಟ್ಟರ್ ಪ್ರಶ್ನೆ*
https://pragati.taskdun.com/jagadish-shettarmahadai-samaveshacongresssreaction/
ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುವ ಪರಿಹಾರಧನ ರೂ.15 ಲಕ್ಷಕ್ಕೆ ಹೆಚ್ಚಳ
https://pragati.taskdun.com/the-compensation-given-to-the-families-of-those-killed-in-forest-attacks-has-been-increased-to-rs-15-lakh/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ