ಪ್ರಗತಿ ವಾಹಿನಿ ಸುದ್ದಿ ಮುಂಬೈ –
ಮಹಾರಾಷ್ಟ್ರದ ಕುಟುಂಬ ಕಲ್ಯಾಣ ಇಲಾಖೆಯ ಫ್ಯಾಮಿಲಿ ಪ್ಲಾನಿಂಗ್ ಜಾಗೃತಿ ಕಿಟ್‌ನಲ್ಲಿರುವ ವಸ್ತುವೊಂದು ಆ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ತೀವ್ರ ಮುಜುಗರ ಉಂಟುಮಾಡುತ್ತಿದೆ.
ಹೌದು, ಮಹಾರಾಷ್ಟ್ರ ಕುಟುಂಬ ಕಲ್ಯಾಣ ಇಲಾಖೆಯು, ಫ್ಯಾಮಿಲಿ ಪ್ಲಾನಿಂಗ್, ಏಡ್ಸ್ ಮತ್ತು ಗುಪ್ತ ರೋಗಗಳ ತಡೆಗಟ್ಟುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಕಿಟ್ ಒಂದನ್ನು ಸಿದ್ಧಪಡಿಸಿದೆ. ಅದನ್ನು ಆಶಾ ಕಾರ್ಯಕರ್ತೆಯರು ಸ್ಥಳೀಯ ಮಟ್ಟದಲ್ಲಿ ಹಂಚಿಕೆ ಮಾಡಿ ವಿವರಣೆ ನೀಡಬೇಕಿದೆ. ಆದರೆ ಕಿಟ್‌ನಲ್ಲಿ ರಬ್ಬರ್‌ನಿಂದ ತಯಾರಿಸಲಾದ ಪುರುಷರ ಕೃತಕ ಗುಪ್ತಾಂಗವನ್ನೂ ಸೇರಿಸಲಾಗಿದೆ.
ಸ್ಥಳೀಯವಾಗಿ ಜನರಲ್ಲಿ ಈ ವಸ್ತುವನ್ನು ಹಂಚಿ ವಿವರಣೆ ನೀಡಲು ಆರೋಗ್ಯ ಕಾರ್ಯಕರ್ತೆಯರು ತೀವ್ರ ಮುಜುಗರ ಅನುಭವಿಸುತ್ತಿದ್ದಾರೆ.
ವ್ಯಾಪಕ ವಿರೋಧ
ಕಿಟ್‌ನಲ್ಲಿ ಈ ರೀತಿಯ ಮುಜುಗರ ತರಿಸುವ ವಸ್ತುವನ್ನು ಸೇರ್ಪಡೆಗೊಳಿಸಿರುವ ಬಗ್ಗೆ ಮಹಾರಾಷ್ಟ್ರದ ವಿವಿಧ ರಾಜಕೀಯ ಮುಖಂಡರು, ಸಾಮಾಜಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಲ್ಲದೇ ಆರೋಗ್ಯ ಕಾರ್ಯಕರ್ತೆಯರ ಸಂಘಟನೆಯೂ ಸಹ ಕಿಟ್ ಹಂಚಿಕೆ ಮಾಡಿ ವಿವರಣೆ ನೀಡುವಲ್ಲಿ ಉಂಟಾಗುವ ಸಂಕಷ್ಟ ಮತ್ತು ಮುಜುಗರದ ಬಗ್ಗೆ ಅಳಲು ತೋಡಿಕೊಂಡಿದ್ದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಿಟ್‌ನಲ್ಲಿ ಸೇರಿಸಲಾಗಿರುವ ರಬ್ಬರ್‌ನ ಪುರುಷರ ಗುಪ್ತಾಂಗವನ್ನು ತೆಗೆದುಹಾಕುವಂತೆ ಆಗ್ರಹ ವ್ಯಕ್ತವಾಗಿದೆ.
ಹೇಳದೆ ಕೇಳದೆ ದುಬೈಗೆ ಹಾರಿದ್ದ ಇನ್ಸ್‌ಪೆಕ್ಟರ್ ಸಸ್ಪೆಂಡ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ