
ಪ್ರಗತಿವಾಹಿನಿ ಸುದ್ದಿ: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಬೆಳಗ್ಗೆ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಏಳು ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ.
ಒಂದು ವಾರದ ಹಿಂದೆ ಪೊಲೀಸ್ ಮಾಹಿತಿದಾರರೆಂದು ಆರೋಪಿಸಿ ಇಬ್ಬರು ಬುಡಕಟ್ಟು ಜನರನ್ನು ಮಾವೋವಾದಿಗಳು ಕೊಂದಿದ್ದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆಸಲಾಗಿದೆ. ಚಲ್ಪಾಕ್ ಅರಣ್ಯದಲ್ಲಿ ಎನ್‌ಕೌಂಟರ್ ನಡೆದಿದೆ. ಮಾವೋವಾದಿ ವಿರೋಧಿ ಗ್ರೇಹೌಂಡ್ಸ್ ಪಡೆಗಳು ಚಲ್ಪಾಕ ಅರಣ್ಯದಲ್ಲಿ ಮಾವೋವಾದಿಗಳನ್ನು ಸುತ್ತುವರಿದು ಮೊದಲಿಗೆ ಶರಣಾಗುವಂತೆ ಆದೇಶಿಸಿದ್ದಾರೆ.
ಐಎಎನ್‌ಎಸ್ ಪ್ರಕಾರ, ಇಂದು ಬೆಳಗ್ಗೆ 5.30 ರ ಸುಮಾರಿಗೆ ಎನ್‌ಕೌಂಟರ್ ನಡೆದಿದೆ. ಮಾವೋವಾದಿ ವಿರೋಧಿ ಗ್ರೇಹೌಂಡ್ಸ್ ಪಡೆಗಳು ಚಲ್ಪಾಕ ಅರಣ್ಯದಲ್ಲಿ ಮಾವೋವಾದಿಗಳನ್ನು ಗುರುತಿಸಿ ಶರಣಾಗುವಂತೆ ಹೇಳಿದ್ದಾರೆ. ಆದ್ರೆ ಮಾವೋವಾದಿಗಳು ಒಪ್ಪದೆ, ದಾಳಿಗೆ ಮುಂದಾದ ಕಾರಣ ಎನ್ ಕೌಂಟರ್ ಮಾಡಲಾಗಿದೆ.