Latest

*ಕಾಲೇಜು ಶೌಚಾಲಯದಲ್ಲಿ ಶವವಾಗಿ ಪತ್ತೆಯಾದ ಎಂಜಿನಿಯರಿಂಗ್ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 15 ದಿನಗಳ ಹಿಂದಷ್ಟೇ ಕಾಲೇಜಿಗೆ ಸೇರಿದ್ದ ಎಂಜಿನಿಯರಿಂಗ ವಿದ್ಯಾರ್ಥಿ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಎಎಂಪಿ ಕಾಲೇಜಿನ ಎಂಜಿನಿಯರಿಂಗ ವಿದ್ಯಾರ್ಥಿ ನಿತಿನ್ (19) ಮೃತ ಯುವಕ. ನಿತಿನ್ ಮೃತದೇಹ ಕತ್ತು ಕುಯ್ದುಕೊಂಡ ರೀತಿಯಲ್ಲಿ ಕಾಲೇಜಿನ ವಸತಿ ನಿಲಯದ ಶೌಚಾಲಯದಲ್ಲಿ ಪತ್ತೆಯಾಗಿದೆ.

Home add -Advt

ಕೇರಳ ಮೂಲದ ನಿತಿನ್ ಡಿಸೆಂಬರ್ 19ರಂದು ಕಾಲೇಜಿಗೆ ಸೇರಿದ್ದ. ಇದೀಗ ಇದ್ದಕ್ಕಿದ್ದಂತೆ ಕತ್ತು ಕುಯ್ದುಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಚಾಕುವಿನಿಂದ ತನನ್ನು ತಾನೇ ಚುಚ್ಚಿಕೊಂಡು ನಿತಿನ್ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

*ಬಿಜೆಪಿಯಲ್ಲಿ ನನ್ನದೇ ಆದ ಶಕ್ತಿಯಿದೆ; ಮಾಜಿ ಸಿಎಂ ಯಡಿಯೂರಪ್ಪ ಖಡಕ್ ಮಾತು*

https://pragati.taskdun.com/b-s-yedyurappareactionj-p-naddakoppala-programme/

Related Articles

Back to top button