Kannada NewsKarnataka NewsLatest

*ಪಿಎಸ್ ಐ ಎಂದು ನಂಬಿಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಪಿಎಸ್ ಐ ಎಂದು ನಂಬಿಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಖಾಸಗಿ ವ್ಯಕ್ತಿಯೊಬ್ಬ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ರಾಯಚೂರು ಮೂಲದ ಯಮನೂರ ಎಂಬಾತ, ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ತಾನು ಪಿಎಸ್ ಐ ಎಂದು ಪರಿಚಯಿಸಿಕೊಂಡಿದ್ದಾನೆ. ಆಕೆಯನ್ನು ನಂಬಿಸಿ ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರವೆಸಗಿರುವ ಆರೋಪಿ, ಖಾಸಗಿ ವಿಡಿಯೋಗಳನ್ನು ವೈರಲ್ ಮಾಡಿ, ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

Home add -Advt

ಯುವತಿಗೆ ಆರೋಪಿ ಇನ್ ಸ್ಟಾಗ್ರಾಂ ನಲ್ಲಿ ಪರಿಚಯವಾಗಿದ್ದಾನೆ. ತಾನು ವಾಮಂಜೂರು ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಎಂದು ಹೇಳಿಕೊಂಡಿದ್ದಾನೆ. ಯುವತಿಯ ಮನೆಯವರಿಗೂ ತಾನು ಕೆಲಸ ಕೊಡಿಸುವುದಾಗಿ ಹೇಳಿ ಆಕೆಯಿಂದ ಕೆಲ ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ತಣ್ಣೀರು ಬಾವಿ ಬಳಿಯ ಬೀಚ್ ಗೆ ಯುವತಿಯನ್ನು ಕರೆದೊಯ್ದು ಫೋಟೋ ತೆಗೆದುಕೊಂಡಿದ್ದಾನೆ. ಬಳಿಕ ಅದೇ ಫೋಟೋಗಳನ್ನು ಇಟ್ಟುಕೊಂಡು ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಹೆದರಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾನೆ.

ಬೆಂಗಳೂರಿನ ನೆಲಮಂಗಲ ಬಳಿ ಲಾಡ್ಜ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಮುಲ್ಕಿಯ ಕಿನ್ನಿಗೋಳಿಯ ಲಾಡ್ಜ್ ಗೂ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಸಂತ್ರಸ್ತೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮಾಡಲು ಆರಂಭಿಸಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಾಗ ಆಕೆಯ ಸ್ನೇಹಿತರು, ಮನೆಯವರ ಮೊಬೈಲ್ ಗೆ ಫೋಟೋಗಳನ್ನು ಕಳುಹಿಸಿದ್ದಾನೆ. ಫೋಟೋ ಡಿಲಿಟ್ ಮಾಡಬೇಕೆಂದರೆ ಒಂದುವರೆ ಲಕ್ಷ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ.

ಸಂತ್ರಸ್ತ ಯುವತಿ ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಯಮನೂರನನ್ನು ಪೊಲೀಸರು ಬಂಧಿಸಿದ್ದಾರೆ.


Related Articles

Back to top button