Kannada NewsKarnataka News

ಪ್ರಪುಲ್ಲ ಮನಸ್ಸಿನಿಂದ ಸಮಾಜ ಹೊಸತನ ಕಾಣಲು ಸಾಧ್ಯ

ಪ್ರಪುಲ್ಲ ಮನಸ್ಸಿನಿಂದ ಸಮಾಜ ಹೊಸತನ ಕಾಣಲು ಸಾಧ್ಯ
 

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು:  ಪ್ರಾಮಾಣಿಕ, ಸದೃಢ ಮತ್ತು ಸಮಾನ ವಯಸ್ಕ ಮನಸ್ಸುಗಳು ಸೇರಿ ದಿಟ್ಟ ಹೆಜ್ಜೆ ಇಟ್ಟಾಗಲೇ ಸಮಾಜ ಹೊಸತನ ಕಾಣಲು ಸಾಧ್ಯ ಎಂದು ಲೇಖಕ ಪ್ರವೀಣ ಗಿರಿ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂಜಿನೀಯರ‍್ಸ್ ಡೇ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ವಿಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಕ್ಷೇತ್ರವೂ ಹೊಸತನ ಕಂಡುಕೊಳ್ಳಬೇಕಿದ್ದಲ್ಲಿ ಕೇವಲ ಇಂಜಿನೀಯರ‍್ಸ್‌ಗಳ ಅವಶ್ಯಕತೆ ಅಷ್ಟೇ ಅಲ್ಲದೇ ಪ್ರಪುಲ್ಲ ಮತ್ತು ಪರಿಶುದ್ಧ ಮನಸ್ಸುಗಳ ಅವಶ್ಯಕತೆ ಇದೆ ಎಂದರು.
ಶಾಲಾ-ಕಾಲೇಜು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಇಂದಿನ ಯುವ ಪೀಳಿಗೆ ಎತ್ತ ಹೆಜ್ಜೆ ಇಟ್ಟಿದೆ ಎಂಬ ಸ್ಪಷ್ಟ ಚಿತ್ರಣ ಕಂಡು ಬರುತ್ತದೆ ಎಂದ ಅವರು, ವಿದ್ಯಾರ್ಥಿಗಳು ಪುಸ್ತಕೀಯ ಜ್ಞಾನದ ಜೊತೆಗೇ ಸಾಮಾನ್ಯ ಜ್ಞಾನವನ್ನು ತಿಳಿದುಕೊಂಡಲ್ಲಿ ದೇಶದ ಕುರಿತಾದ ಹೊಸ ಚಿಂತನೆ ಬೆಳೆಸಿಕೊಳ್ಳಬಹುದು. ಇಂದು ಭಾರತ ವಿಶ್ವಗುರು ಆಗುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದು ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದಾಗಿದೆ. ಇಂದಿನ ವಿದ್ಯಾರ್ಥಿ ಬಳಗ ತಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ಆಯ್ದುಕೊಂಡು ದೇಶ ಕಟ್ಟುವಲ್ಲಿ ಶ್ರಮಿಸಬೇಕು ಎಂದರು.
ಪ್ರಾಚಾರ್ಯರಾದ ಜಿ.ಎಂ. ಗಣಾಚಾರಿ ಮಾತನಾಡಿ ಶೃದ್ಧೆ, ಸತತ ಪ್ರಯತ್ನ ಮತ್ತು ನಿರಂತರ ಅಭ್ಯಾಸವಿದ್ದಲ್ಲಿ ಜಗತ್ತಿನಲ್ಲಿ ಯಾವುದು ಅಸಾಧ್ಯವಲ್ಲ. ಇದಕ್ಕೆ ಸರ್.ಎಂ. ವಿಶ್ವೇಶ್ವರಯ್ಯ ಅವರ ಬದುಕು ಸಾಕ್ಷಿಯಾಗಿ ನಿಲ್ಲುತ್ತದೆ. ಇಂತಹ ಮಹಾನ್ ವ್ಯಕ್ತಿಗಳ ಜೀವನ ಆದರ್ಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿ ಆಗಬೇಕು ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಬಿ. ಪೆಂಟೇದ ಮಾತನಾಡಿದರು. ಜಿ.ಎಂ. ದೂಫದ ಸ್ವಾಗತಿಸಿದರು. ವಿ.ಎಂ. ಧಾರವಾಡ ನಿರೂಪಿಸಿದರು. ಎಂ.ಎಸ್. ಹಿರೇಮಠ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button