Kannada NewsLatest

ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ; ಆಪ್ತಸಮಾಲೋಚನೆ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ, ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 4 ನೇ ಸೆಮಿಸ್ಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ “ಬಾರ್ನ್ ಟು ವಿನ್” ಲೇಖಕರಾದ ಶ್ರೀ ರಾಮ್ ಕುಮಾರ್ ಶೇಷು ಅವರಿಂದ ಉದ್ಯೋಗಾವಕಾಶವನ್ನು ಹೆಚ್ಚಿಸುವ ಕುರಿತು ಸ್ಪೂರ್ತಿದಾಯಕ ಆಪ್ತಸಮಾಲೋಚನೆ ಕಾರ್ಯಕ್ರಮ ಜಿಐಟಿಯ ಸಿಲ್ವರ್ ಜುಬಿಲಿ ಸಭಾಂಗಣ ದಲ್ಲಿ ಜರುಗಿತು .

ಜಿಐಟಿಯ ಪ್ರಾಚಾರ್ಯರಾದ ಡಾ.ಜೆ.ಕೆ.ಕಿತ್ತೂರು ಸಭೆಯನ್ನು ಸ್ವಾಗತಿಸಿ, ವಿದ್ಯಾರ್ಥಿಗಳನ್ನು ಸಮಗ್ರ ವ್ಯಕ್ತಿತ್ವ ವಿಕಸನ ಮತ್ತು ತಂಡ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. ಜಿಐಟಿ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಂದ್ರ ಬೆಳಗಾಂವಕರ ಅವರು ವಿದ್ಯಾರ್ಥಿಗಳಿಗೆ ಉತ್ತಮ ಕೌಶಲ್ಯಗಳನ್ನು ಬೆಳೆಸಲು ಕರೆ ನೀಡಿದರು.

ರಾಮ್ ಕುಮಾರ್ ಶೇಷು ಅವರು “ಬಾರ್ನ್ ಟು ವಿನ್” ನ ಲೇಖಕರಾಗಿದ್ದು, ಇದು ಅನೇಕ ಉದ್ಯಮಿಗಳು ಮತ್ತು ಕಾರ್ಪೊರೇಟ್ ಕಾರ್ಯನಿರ್ವಾಹಕರನ್ನು ಪ್ರೇರೇಪಿಸಿದೆ ಮತ್ತು ಅವರು ಕಂಪನಿಗಳಿಗೆ ಉತ್ಪಾದಕತೆ, ಮಾರಾಟವನ್ನು ಹೆಚ್ಚಿಸಲು, ಗುಣಮಟ್ಟವನ್ನು ಕೇಂದ್ರೀಕರಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಗ್ರಾಹಕರ ತೃಪ್ತಿಯನ್ನು ಸುಧಾರಿಸಲು ಸಮಾಲೋಚನೆ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ .

ಅವರು ಸಂದರ್ಶನಗಳಲ್ಲಿ ಉಚ್ಚಾರಣಾ ಕೌಶಲ್ಯಗಳ ಪ್ರಾಮುಖ್ಯತೆ ಮತ್ತು ವಿಶಿಷ್ಟ ನೇಮಕಾತಿ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ಅವರು “ಮಾಡಬಹುದು” ಎಂಬ ಮನೋಭಾವವನ್ನು ವಿದ್ಯಾರ್ಥಿಗಳು , ತಾವು ತೆಗೆದುಕೊಳ್ಳುವ ಯಾವುದೇ ವಿಷಯದಲ್ಲಿ ಸಮಗ್ರತೆ, ಉತ್ಸಾಹ ಮತ್ತು ದೃಷ್ಟಿಕೋನದಿಂದ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಸಹಾಯಕ ಪ್ಲೇಸ್ ಮೆಂಟ್ ಅಧಿಕಾರಿ ಪ್ರೊ.ಸಾಗರ ಸಂತಾಜಿ ಹಾಗೂ 4ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿ ಪ್ರಿಯಾಂಕಾ ಪಾಟೀಲ್ ಕಾರ್ಯಕ್ರಮವನ್ನು ಸಂಯೋಜಿಸಿದರು.350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.

ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್

https://pragati.taskdun.com/karnataka-news/education-karnataka-news/inauguration-cultural-sports-highschool-yaksamba/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button