*ಸಮುತ್ಕರ್ಷ ಸಂಸ್ಥೆ ವತಿಯಿಂದ ಪ್ರವೇಶ ಪರೀಕ್ಷೆ ಆಯೋಜನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮುತ್ಕರ್ಷ ಐಎಎಸ್ ಸಂಸ್ಥೆಯು ವತಿಯಿಂದ “ಶ್ರಧಾ” ಮತ್ತು “ಮೇಧಾ” ಹೆಸರಿನ ಐಎಎಸ್ ಕೋರ್ಸುಗಳನ್ನು ಪ್ರಾರಂಭವಾಗುತ್ತಿದ್ದು, ಪ್ರವೇಶ ಪರೀಕ್ಷೆಯನ್ನು ಏರ್ಪಡಿಸಲಾಗಿದೆ ಎಂದು ಸಮುತ್ಕರ್ಷ ಟ್ರಸ್ಟ್ ನ ಡೈರೆಕ್ಟರ್ ಜಿತೇಂದ್ರ ನಾಯಕ ತಿಳಿಸಿದ್ದಾರೆ.
ಸಮುತ್ಕರ್ಷ ಐಎಎಸ್ ಸಂಸ್ಥೆಯು ಕರ್ನಾಟಕದಲ್ಲಿ ಕಳೆದ ಎಂಟು ವರ್ಷಗಳಿಂದ ಶಾಲಾ ಮಕ್ಕಳಲ್ಲಿ ಐಎಎಸ್/ಐಪಿಎಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮತ್ತು ಈಗಿನಿಂದಲೇ ತಯಾರಿ ಮಾಡಲು ಅನೇಕ ಕೋರ್ಸಗಳನ್ನು ನಡೆಸುತ್ತಿದೆ. ಪ್ರತಿವರ್ಷವೂ ಸಮುತ್ಕರ್ಷದ ಅಭ್ಯರ್ಥಿಗಳು ಅನೇಕ ಪರೀಕ್ಷೆಗಳಲ್ಲಿ ಆಯ್ಕೆಯಾಗುತ್ತಿರುವುದು ಮತ್ತು ವಿವಿದೆಡೆ ತಮ್ಮ ಪ್ರತಿಭೆಯನ್ನು ತೋರುತ್ತಿರುವುದು ಹೆಮ್ಮೆಯ ಸಂಗತಿ.
ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶಾಲಾಮಕ್ಕಳಿಗಾಗಿ “ಶ್ರದ್ಧಾ” ಮತ್ತು “ಮೇಧಾ” ಹೆಸರಿನ ಐಎಎಸ್ ಫೌಂಡೆಷನ್ ಕೋರ್ಸುಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ 6, 7, 8 ಹಾಗೂ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳಿಗೆ ಅಗತ್ಯವಿರುವ ಮಾನಸಿಕ, ಬೌದ್ಧಿಕ ಸಾಮರ್ಥ್ಯಗಳ ಬೆಳವಣಿಗೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಮೂಲಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಉನ್ನತ ಕನಸು ಕಾಣುವತ್ತ ಅಡಿಪಾಯ ಹಾಕುವ ಉದ್ದೇಶ ಈ ಕೋರ್ಸನದ್ದು.
ಈ ಹಿನ್ನೆಯಲ್ಲಿ ಸಮುತ್ಕರ್ಷ ಐ.ಎ.ಎಸ್- ಜುಲೈ 14, ರವಿವಾರದಂದು ಬೆಳಿಗ್ಗೆ 10 ರಿಂದ 12 ರವರೆಗೆ, ಮಹಿಳಾ ವಿದ್ಯಾಲಯ ಆಂಗ್ಲ ಮಾದ್ಯಮ ಶಾಲೆ, ಕಾಲೇಜು ರೋಡ, ಬೆಳಗಾವಿಯಲ್ಲಿ ಪ್ರವೇಶ ಪರೀಕ್ಷೆಯನ್ನು ಏರ್ಪಡಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ಕೋರ್ಸಗೆ ಪ್ರವೇಶ ಪಡೆಯಬಹುದು ಎಂದು ಟ್ರಸ್ಟನ ಡೈರೆಕ್ಟರ ಜನರಲ್ ಜಿತೇಂದ್ರ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಪ್ರತಿಭಾ ಪಾಟೀಲ ಅವರನ್ನು (ಮೊ. 7899794717) ಸಂಪರ್ಕಿಸಲು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ