Kannada NewsLatestPolitics

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಡಾ.ಆರ್.ಎಂ.ಪಾಟೀಲ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಡಾ.ಆರ್.ಎಂ.ಪಾಟೀಲ

ಪ್ರಗತಿವಾಹಿನಿ – ಸದ್ದಿ : ಬೆಳಗಾವಿ ‘ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎನ್ನುವುದು ಯಾರು ಮರೆಯಬಾರದು’ ಎಂದು ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ ಹೇಳಿದರು.

ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರು, ರಾಜ್ಯಸಭಾ ಸದಸ್ಯ, ಶಿಕ್ಷಣಶಿಲ್ಪಿ, ಧೀಮಂತನಾಯಕ, ಕೃಷಿ, ಆರೋಗ್ಯ, ಸಹಕಾರಿ ಕ್ಷೇತ್ರದ ಅನನ್ಯ ಸಾಧಕ ಡಾ.ಪ್ರಭಾಕರ ಕೋರೆ ಅವರ 72 ನೇ ಹುಟ್ಟುಹಬ್ಬದ ಅಂಗವಾಗಿ ಸಸಿಗಳನ್ನು ನೆಡುವ ಹಾಗೂ ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Related Articles

ಕಲುಷಿತವಾಗುತ್ತಿರುವ ವಾತಾವರಣ ತಡೆಗಟ್ಟಲು ಎಲ್ಲರೂ ಸಸಿ ನೆಟ್ಟು ಬೆಳೆಸಬೇಕು. ಗಿಡ ಮರಗಳ ನಾಶದಿಂದ ಪರಿಸರದ ಸಮತೋಲನದಲ್ಲಿ ಎರುಪೆರಾಗುತ್ತದೆ ಎಂದರು. ರಕ್ತದಾನವು ಜೀವದಾನವಿದ್ದಂತೆ ಒಬ್ಬರ ರಕ್ತದಿಂದ ನಾಲ್ಕು ಜನರ ಜೀವವನ್ನು ಉಳಿಸಬಹುದು. ಆದುದರಿಂದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕರೆಕೊಟ್ಟರು.

ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಶ್ರೀಮತಿ.ಎಂ.ಆರ್.ಬನಹಟ್ಟಿ ಪದವಿಪೂರ್ವ ಪ್ರಾಚಾರ್ಯರಾದ ಗಿರಿಜಾ ಹಿರೇಮಠ, ಎನ್.ಎಸ್.ಎಸ್ ನೂಡಲ್ ಅಧಿಕಾರಿಯಾದ ಡಾ.ಎಸ್.ಎನ್.ಮೂಲಿಮನಿ, ರಾಷ್ಟ್ರೀಯ ಸೇವಾಯೋಜನೆ ಘಟಕದ ಸಂಯೋಜಕರಾದ ಡಾ.ಎಚ್.ಎಂ.ಚನ್ನಪ್ಪಗೋಳ ಹಾಗೂ ದೈಹಿಕ ಶಿಕ್ಷಣ ವಿಭಾಗದ ಸಂಯೋಜಕರಾದ ಡಾ.ರಾಮರಾವ ಐಕ್ಯೂಎಸಿ ಸಂಯೋಜಕರಾದ ಡಾ.ಎಚ್.ಎಸ್.ಮೇಲಿನಮನಿ ಹಾಗೂ ಎಲ್ಲ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕೇತರ ಸಿಬ್ಬಂದಿ ಸಸಿ ನೆಟ್ಟರು.

Home add -Advt

ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ರಕ್ತದಾನ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.////

Related Articles

Back to top button