ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಮಣೆ ಹಾಕುವ ಅಗತ್ಯವಿಲ್ಲ; ಕನಿಷ್ಠ ಜ್ಞಾನ ಬೇಡವೇ?: ರಮೇಶ ಜಾರಕಿಹೊಳಿ ಮತ್ತು ನಾಯಕರ ವಿರುದ್ಧ ಈರಣ್ಣ ಕಡಾಡಿ ತೀವ್ರ ಆಕ್ರೋಶ
ಪರಿವಾರ ವಾದವನ್ನು ವಿರೋಧಿಸುವ ಮೌಲ್ಯಾಧಾರಿತ ಪಕ್ಷಕ್ಕೆ ನಾವೇ ಒಂದು ಕಳಂಕವಾಗಬಾರದು, ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಕೂಡ ಮಣೆ ಹಾಕುವ ಅಗತ್ಯವಿಲ್ಲ. ಇಂಥವರ ಪ್ರಜಾ ವಿರೋಧಿ ನೀತಿಗಳ ಬಗ್ಗೆ ಜಾಣ ಕುರುಡುತನ ತೋರುವ ನಮ್ಮ ನಾಯಕರು ಬಾರಿ ಬೆಲೆ ತೆರಬೇಕಾದಿತು.
ಪ್ರಗತಿವಾಹಿನಿ ಸುದ್ದಿ, ಗೋಕಾಕ : ರಾಜಹಂಸಗಡ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ವಿಷಯದಲ್ಲಿ ಶಿಷ್ಠಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಭಾರಿ ವಿವಾದವೆಬ್ಬಿಸಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಅವರದ್ದೇ ಪಕ್ಷದ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ತೀವ್ರ ಕಿಡಿಕಾರಿದ್ದು, ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಕೂಡ ಮಣೆ ಹಾಕುವ ಅಗತ್ಯವಿಲ್ಲ ಎಂದು ಭಾರತೀಯ ಜನತಾ ಪಾರ್ಟಿಯ ನಾಯಕರಿಗೂ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ಇಂಥವರ ಪ್ರಜಾ ವಿರೋಧಿ ನೀತಿಗಳ ಬಗ್ಗೆ ಜಾಣ ಕುರುಡುತನ ತೋರುವ ನಮ್ಮ ನಾಯಕರು ಬಾರಿ ಬೆಲೆ ತೆರಬೇಕಾದಿತು ಎಂದೂ ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಉನ್ನತ ನಾಯಕರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಬುಧವಾರ ಗೋಕಾಕದಲ್ಲಿ ನಡೆದ ಘಟ್ಟಿ ಬಸವಣ್ಣ ಏತ ನೀರಾವರಿ ಯೋಜನೆ ಉದ್ಘಾಟನೆ ಸಮಾರಂಭಕ್ಕೆ ತಮ್ಮನ್ನು ಕರೆಯದೇ ರಮೇಶ ಜಾರಕಿಹೊಳಿ ಶಿಷ್ಠಾಚಾರ ಉಲ್ಲಂಘಿಸಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಈರಣ್ಣ ಕಡಾಡಿ ಈ ಆಕ್ರೋಶ ಹೊರಹಾಕಿದ್ದಾರೆ.
ರಾಜಹಂಸಗಡ ವಿಷಯದಲ್ಲಿ ವಿರೋಧ ಪಕ್ಷದ ಶಾಸಕಿ ಶಿಷ್ಠಾಚಾರ ಉಲ್ಲಂಘಿಸಿದ್ದಾರೆ ಎನ್ನುವ ನಿಮಗೆ ಕನಿಷ್ಠ ಜ್ಞಾನವಿರಬೇಕು ಎಂದು ಕಿಚಾಯಿಸಿದ್ದಾರೆ. ಅಲ್ಲದೆ ಅವರ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ಪಕ್ಷದ ನಾಯಕರ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ತಕ್ಕ ಬೆಲೆ ತೆರಬೇಕಾದೀತು ಎಂದು ಬಿಜೆಪಿ ನಾಯಕರು ಹಾಗೂ ಮುಖ್ಯಮಂತ್ರಿಗಳಿಗೆ ಎಚ್ಚರಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಡಾಡಿ, ವಿರೋಧ ಪಕ್ಷದ ಶಾಸಕರೊಬ್ಬರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ ಎಂದು ಮಾತನಾಡುವ ನಮಗೆ ನಮ್ಮದೇ ಪಕ್ಷದ ಸ್ಥಳೀಯ ಸಂಸದರನ್ನು ಅದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜೊತೆಗೂಡಿಸಿಕೊಂಡು ಹೋಗದಿರುವ ನಮ್ಮ ಹೃದಯ ವೈಶಾಲ್ಯತೆಗೆ ಜನ ಏನಂದಾರು ? ಎಂಬ ಕನಿಷ್ಠ ಜ್ಞಾನವಿರಬೇಕು ಎಂದಿದ್ದಾರೆ.
ನಮ್ಮ ಕುಟುಂಬದ ಸದಸ್ಯರು, ನಮ್ಮ ಕಚೇರಿ ಸಿಬ್ಬಂದಿಗಳು ಸರ್ಕಾರಿ ಯೋಜನೆಗಳ ಅಡಿಗಲ್ಲು, ಉದ್ಘಾಟನೆ ಮಾಡಬಹುದು ಆದರೆ ನಾನು ಹೋದಲೆಲ್ಲಾ ಪಕ್ಷ ಬದಲಾಯಿಸಿದಾಗ ನನ್ನ ಜೊತೆಗಿರುವ ನನ್ನ ಬೆಂಬಲಿಗರು ಚುನಾಯಿತ ಪ್ರತಿನಿಧಿಗಳಾಗಿದ್ದರೂ ಕೂಡ ಅವರಿಗೆ ಅವಕಾಶ ನೀಡದಿರುವ ನಮ್ಮ ಬಗ್ಗೆ ಜನ ಏನಂದಾರು ? ಎಂಬ ಕನಿಷ್ಠ ವಿವೇಚನೆ ನಮಗಿರಬೇಕು.
ಪರಿವಾರ ವಾದವನ್ನು ವಿರೋಧಿಸುವ ಮೌಲ್ಯಾಧಾರಿತ ಪಕ್ಷಕ್ಕೆ ನಾವೇ ಒಂದು ಕಳಂಕವಾಗಬಾರದು, ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಕೂಡ ಮಣೆ ಹಾಕುವ ಅಗತ್ಯವಿಲ್ಲ. ಇಂಥವರ ಪ್ರಜಾ ವಿರೋಧಿ ನೀತಿಗಳ ಬಗ್ಗೆ ಜಾಣ ಕುರುಡುತನ ತೋರುವ ನಮ್ಮ ನಾಯಕರು ಬಾರಿ ಬೆಲೆ ತೆರಬೇಕಾದಿತು.
ಕಡಾಡಿ ಅವರ ಟ್ವೀಟ್ ಈಗ ಭಾರಿ ವೈರಲ್ ಆಗುತ್ತಿದೆ.
ವಿರೋಧ ಪಕ್ಷದ ಶಾಸಕರೊಬ್ಬರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ ಎಂದು ಮಾತನಾಡುವ ನಮಗೆ ನಮ್ಮದೇ ಪಕ್ಷದ ಸ್ಥಳೀಯ ಸಂಸದರನ್ನು ಅದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜೊತೆಗೂಡಿಸಿಕೊಂಡು ಹೋಗದಿರುವ ನಮ್ಮ ಹೃದಯ ವೈಶಾಲ್ಯತೆಗೆ ಜನ ಏನಂದಾರು ? ಎಂಬ ಕನಿಷ್ಠ ಜ್ಞಾನವಿರಬೇಕು. (1/3)
— Iranna Kadadi-MP (@Irannakadadi_MP) March 2, 2023
ನಮ್ಮ ಕುಟುಂಬದ ಸದಸ್ಯರು, ನಮ್ಮ ಕಚೇರಿ ಸಿಬ್ಬಂದಿಗಳು ಸರ್ಕಾರಿ ಯೋಜನೆಗಳ ಅಡಿಗಲ್ಲು, ಉದ್ಘಾಟನೆ ಮಾಡಬಹುದು ಆದರೆ ನಾನು ಹೋದಲೆಲ್ಲಾ ಪಕ್ಷ ಬದಲಾಯಿಸಿದಾಗ ನನ್ನ ಜೊತೆಗಿರುವ ನನ್ನ ಬೆಂಬಲಿಗರು ಚುನಾಯಿತ ಪ್ರತಿನಿಧಿಗಳಾಗಿದ್ದರೂ ಕೂಡ ಅವರಿಗೆ ಅವಕಾಶ ನೀಡದಿರುವ ನಮ್ಮ ಬಗ್ಗೆ ಜನ ಏನಂದಾರು ? ಎಂಬ ಕನಿಷ್ಠ ವಿವೇಚನೆ ನಮಗಿರಬೇಕು. (2/3)
— Iranna Kadadi-MP (@Irannakadadi_MP) March 2, 2023
ಪರಿವಾರ ವಾದವನ್ನು ವಿರೋಧಿಸುವ ಮೌಲ್ಯಾಧಾರಿತ ಪಕ್ಷಕ್ಕೆ ನಾವೇ ಒಂದು ಕಳಂಕವಾಗಬಾರದು, ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಕೂಡ ಮನೆ ಹಾಕುವ ಅಗತ್ಯವಿಲ್ಲ. ಇಂಥವರ ಪ್ರಜಾ ವಿರೋಧಿ ನೀತಿಗಳ ಬಗ್ಗೆ ಜಾಣ ಕುರುಡುತನ ತೋರುವ ನಮ್ಮ ನಾಯಕರು ಬಾರಿ ಬೆಲೆ ತೆರಬೇಕಾದಿತು. (3/3)
— Iranna Kadadi-MP (@Irannakadadi_MP) March 2, 2023
ನಮಗೆ ತೊಂದರೆ ಮಾಡಲು ಬಂದರೆ ನಾವು ಸುಮ್ಮನಿರೆವು – ರಮೇಶ ಜಾರಕಿಹೊಳಿಗೆ ನೇರಾ ನೇರ ಎಚ್ಚರಿಕೆ ನೀಡಿದ ಜೊಲ್ಲೆ
https://pragati.taskdun.com/if-they-come-to-trouble-us-we-will-not-keep-quiet-jolles-direct-warning-to-ramesh-jarakiholi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ