
ಪ್ರಗತಿವಾಹಿನಿ ಸುದ್ದಿ, ಮೈಸೂರು – 17 ಜನರು ಬಂದ ಮೇಲೆ ಬಿಜೆಪಿಯಲ್ಲಿ ಗೊಂದಲ ಶುರುವಾಗಿದೆ ಎನ್ನುವ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ, 17 ಜನರ ತ್ಯಾಗದಿಂದಲೇ ಈಶ್ವರಪ್ಪ ಮಂತ್ರಿಯಾಗಿದ್ದು ಎಂದು ಹೇಳಿದ್ದಾರೆ.
17 ಜನರು ಬರದಿದ್ದರೆ ಈ ಸರಕಾರವೇ ಬರುತ್ತಿರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ, ಈಶ್ವರಪ್ಪ ಮಂತ್ರಿಯೂ ಆಗುತ್ತಿರಲಿಲ್ಲ. ಈ ರೀತಿಯ ಹೇಳಿಕೆಯನ್ನು ಅವರು ನೀಡುವುದು ಸರಿಯಲ್ಲ ಎಂದರು.
ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಯಾರೂ ಗೊಂದಲದ ಹೇಳಿಕೆ ನೀಡಬಾರದೆಂದು ಹೈಕಮಾಂಡ್ ಸೂಚನೆ ನೀಡಿದೆ. ಆದರೂ ಇಂತಹ ಹೇಳಿಕೆ ದುರದೃಷ್ಟಕರ. ನಾಳೆ ರಾಜ್ಯಕ್ಕೆ ಉಸ್ತುವಾರಿ ಅರುಣ ಸಿಂಗ್ ಬರಲಿದ್ದು ಎಲ್ಲ ಗೊಂದಲಗಳಿಗೂ ಪೂರ್ಣವಿರಾಮ ಹಾಕಲಿದ್ದಾರೆ ಎಂದು ಪಾಟೀಲ ಹೇಳಿದರು.
17 ಜನ ಬಂದ ನಂತರ ಬಿಜೆಪಿಯಲ್ಲಿ ಗೊಂದಲ: ಈಶ್ವರಪ್ಪ ಬಹಿರಂಗ ಹೇಳಿಕೆ (ವಿಡಿಯೋ ಸಹಿತ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ