Kannada NewsKarnataka NewsLatestPolitics

ಮುತ್ತಜ್ಜನ ಹೆಸರು ಹೇಳಿ ಎಂದು ಪರಮೇಶ್ವರ್ ಗೆ ಈಶ್ವರಪ್ಪ ಸವಾಲು

ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ: ಸನಾತನ ಧರ್ಮ ಯಾವಾಗ ಹುಟ್ಟಿತು?, ಯಾರು ಹುಟ್ಟಿಸಿದರು? ಎಂದು ಪ್ರಶ್ನಿಸಿ ವಿವಾದ ಸೃಷ್ಟಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ವಿರುದ್ಧ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ “ಪರಮೇಶ್ವರ ಅವರ ಅಪ್ಪನ ಹೆಸರು ಗಂಗಾಧರಪ್ಪ, ಅಜ್ಜನ ಹೆಸರು ಮರಿಯಪ್ಪ ಎಂಬುದು ಗೊತ್ತಿದೆ, ಆದರೆ ನಿಮ್ಮ ಮುತ್ತಜ್ಜ, ಅವರ ಅಪ್ಪನ ಹೆಸರು ಹೇಳಿ” ಎಂದು ಪರಮೇಶ್ವರ ಅವರಿಗೆ ಸವಾಲೆಸೆದಿದ್ದಾರೆ.

“ಸನಾತನ ಧರ್ಮವನ್ನು ಪ್ರಶ್ನಿಸುವ ಪರಿಸ್ಥಿತಿ ಪರಮೇಶ್ವರರಂಥ ಹಿರಿಯರಿಗೆ ಬರಬಾರದಿತ್ತು. ಇಷ್ಟಾಗಿಯೂ ಅವರೊಬ್ಬ ಡಾಕ್ಟರ್ ಅಷ್ಟೇ ಅಲ್ಲ, ರಾಜ್ಯದ‌ ಗೃಹ ಸಚಿವರೂ ಹೌದು. ಯಾರೇ ಏನೇ ಮಾತಾಡಿದರೂ ಹಿಂದೂ ಸಮಾಜ ಶಾಂತವಾಗಿರುತ್ತದೆ. ಎಲ್ಲಿ ಖಂಡಿಸಬೇಕೋ ಅಲ್ಲಿ ಖಂಡಿಸಿ ಮಾಡಿ ಕೂತಿದೆ” ಎಂದರು.

“ಪರಮೇಶ್ವರ ಅವರಿಗೆ ಪರಮೇಶ್ಚರ್ ಗೆ ನಾನು ಪ್ರಾರ್ಥನೆ ಮಾಡುತ್ತೇನೆ. ಸನಾತನ ಧರ್ಮದ ಬಗ್ಗೆ ಮಾತಾಡಲು ನಿಮಗೆ ಅಧಿಕಾರವಿಲ್ಲ. ದಯವಿಟ್ಟು ಹಿಂದೂ ಸಮಾಜದ ಕ್ಷಮೆ ಕೇಳಿ. ಇಲ್ಲವಾದಲ್ಲಿ ನಿಮ್ಮ ಮುತ್ತಜ್ಜ, ಅವರ ಅಪ್ಪ, ಅಜ್ಜಂದಿರ ಹೆಸರುಗಳ ಪಟ್ಟಿ ತೆಗೆದಿಡಿ” ಎಂದು ಸವಾಲೆಸೆದರು.

“ತಮ್ಮ ವಂಶದ ಮುತ್ತಜ್ಜ, ಅವರಿಗಿಂತ ಮೊದಲಿನವರ ಹೆಸರೇ ಗೊತ್ತಿಲ್ಲದ ನೀವು ಸನಾತನ ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ ಇದು ನನಗೆ ನೋವು ತಂದಿದೆ” ಎಂದು ಅವರು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button