Kannada NewsKarnataka NewsLatest

ಪಿಡಿಒಗಳ ವರ್ಗಾವಣೆ ಪಟ್ಟಿ ಸೋರಿಕೆ ಪ್ರಕರಣ: ಅಪ್ಪ- ಮಗ ಸಿಇಎನ್ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಿಡಿಒ ಗಳ ವರ್ಗಾವಣೆಗೂ ಮೊದಲೇ ವರ್ಗಾವಣೆ ಪಟ್ಟಿಯ ಪ್ರತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪ-ಮಗನನನ್ನು ಇಸಿಎನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸರಕಾರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಾರಾಯಣ್ ಹಾಗೂ ಅವರ ಮಗ, ಆರ್ ಡಿಪಿ ಆರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಧರ್ ಅವರನ್ನು ವಶಕ್ಕೆ ಪಡೆದು ಸಿಇಎನ್ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

Home add -Advt

ಇವರಿಬ್ಬರೂ ಸೇರಿ ಇಲಾಖೆ ಕಂಪ್ಯೂಟರ್ ನಲ್ಲಿದ್ದ ಪಿಡಿಒಗಳ ವರ್ಗಾವಣೆ ಪಟ್ಟಿಯ ಪ್ರತಿಯನ್ನು ವಾಟ್ಸಾಪ್ ಮೂಲಕ ಹಲವರಿಗೆ ರವಾನಿಸಿದ್ದರು. ಇಲಾಖೆ ಅಧಿಕೃತವಾಗಿ ವರ್ಗಾವಣೆ ಪಟ್ಟಿ ಬಿಡುಗಡೆಗೊಳಿಸುವ ಮುನ್ನವೇ ಸೋರಿಕೆಯಾದ ಬಗ್ಗೆ ಕೇಂದ್ರ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ಕೈಗೊಂಡ ಸಿಇಎನ್ ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

Related Articles

Back to top button