ಜಿಐಟಿಯಲ್ಲಿ ಇಂಟರ್ ಡಿಸಿಪ್ಲಿನರಿ ಡಿಸೈನ್ ಮತ್ತು ಇನ್ನೋವೇಶನ್ ಕೇಂದ್ರ ಸ್ಥಾಪನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಜಿಐಟಿಯಲ್ಲಿ, ಡಸಾಲ್ಟ್ ಸಿಸ್ಟಮ್ಸ್ ಸಹಯೋಗದೊಂದಿಗೆ ಸೆಂಟರ್ ಫಾರ್ ಇಂಟರ್ ಡಿಸಿಪ್ಲಿನರಿ ಡಿಸೈನ್ ಅಂಡ್ ಇನ್ನೋವೇಶನ್ (ಸಿ ಆಯ್ ಡಿ ಆಯ್) ಕೇಂದ್ರದ ಉದ್ಘಾಟನೆ ಇತ್ತೀಚಿಗೆ ಜರುಗಿತು.
ಈ ಕೇಂದ್ರದ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ , ಡಸಾಲ್ಟ್ ಸಿಸ್ಟಮ್ಸ್ ಸೊಲ್ಯೂಷನ್ಸ್ ಲ್ಯಾಬ್‌ನ ಸಿಇಓ, ಸುದರ್ಶನ್ ಮೊಗಸಾಲೆ ಅವರು ಮಾತನಾಡಿ, ಸಿ ಆಯ್ ಡಿ ಆಯ್ ಸಹಯೋಗದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಈ ಕೇಂದ್ರದಲ್ಲಿ ಡಸಾಲ್ಟ್ ಸಿಸ್ಟಮ್ಸ್ ಸೊಲ್ಯೂಷನ್ಸ್ನ ಉನ್ನತ ಸಾಫ್ಟ್ ವೆರ್ ಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಸಿಮ್ಯುಲೇಶನ್ ಮೂಲಕ ಯಾಂತ್ರಿಕ ಭಾಗ , ರಚಿಸಿದ ಯಂತ್ರಗಳ ಪೂರ್ವ ವ್ಯವಹಾರ ತಿಳಿಯುವಿಕೆ , ಏರೋಡೈನಾಮಿಕ್ ರಚನೆ , ಬಿಡಿ ಭಾಗಗಳ ಬಾಳಿಕೆ ಹಾಗೂ ಸಾಮರ್ಥ್ಯ ವಿಶ್ಲೇಷಣೆ ಯನ್ನು ಈ ಅತ್ತ್ಯುನ್ನತ ಸಾಫ್ಟ್ ವೆರ್ ಮೂಲಕ ಪೂವನಿರ್ಧಾರಿತ ವೇಳೆಯಲ್ಲಿ ತಿಳಿಯಬಹುದು . ಇದರ ಬಳಕೆಯಿಂದ , ಕೈಗಾರಿಕೆಗಳಲ್ಲಿ ಹೊಸ ಬಿಡಿ ಭಾಗಗಳ ಡಿಸೈನ್ ಅನ್ನು ಸಿಮ್ಯುಲೇಶನ್ ಮೂಲಕ , ತಯಾರಿಕೆಯ ಮುನ್ನವೇ ವಸ್ತುನಿಷ್ಠ ವಿಶೇಷಣೆಯನ್ನು ಅತ್ಯಂತ ನಿಖರವಾಗಿ ಮಾಡಬಹುದು. ಇದರಿಂದ ಹಣ ಹಾಗೂ ಸಮಯದ ಉಳಿತಾಯವಾಗುವುದಲ್ಲದೆ ಕೈಗಾರಿಕೆಯ ಉತ್ಪನ್ನಗಳ ಬಾಳಿಕೆ ಹೆಚ್ಚಾಗಲಿದೆ ಎಂದು ತಿಳಿಸಿದರು .
ಗೌರವ ಅತಿಥಿಗಳಾದ ಧಾರವಾಡದ ಟಾಟಾ ಮೋಟಾರ್ಸ್‌ನ ಪ್ಲಾಂಟ್ ಹೆಡ್, ಶ್ರೀ ಪ್ರದೋಶ್ ಮೊಹಂತಿ ಅವರು ಟಾಟಾ ಮೋಟಾರ್ಸ್ ಕುರಿತು ಮಾಹಿತಿ ನೀಡಿದರು ಮತ್ತು ಸಿಐಡಿಐ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ಕರೆ ನೀಡಿದರು.
ಕೆಎಲ್ಎಸ ಜಿ ಆಯ್ ಟಿ ಯ ಪ್ರಾಂಶುಪಾಲರಾದ ಡಾ. ಎಂ ಎಸ್ ಪಾಟೀಲ್, ಜಿ ಐಟಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇನ್ನೋ ವೇಷನ್ ಸೆಂಟರ್ ಗಳಾದ ಆಸ್ಟ್ರೋಫಿಸಿಕ್ಸ್, ವಿಎಲ್ಸಿಆಯ್, ಕಂಪೋಸಿಟ್ ಮೆಟೀರಿಯಲ್ಸ್ ಮತ್ತು ರಿವರ್ಸ್ ಎಂಜಿನಿಯರಿಂಗ್, ನ್ಯಾನೊಸೈನ್ಸ್ ಮತ್ತು ನ್ಯಾನೊಟೆಕ್ನಾಲಜಿ , ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೇ ನಿಟ್ಟಿನಲ್ಲಿ ಸೆಂಟರ್ ಫಾರ್ ಇಂಟರ್ ಡಿಸಿಪ್ಲಿನರಿ ಡಿಸೈನ್ ಅಂಡ್ ಇನ್ನೋವೇಶನ್ (ಸಿ ಆಯ್ ಡಿ ಆಯ್) ಕಾರ್ಯ ಯೋಜನೆಯನ್ನು ವಿವರಿಸಿದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಹರ್ಷಿತ್ ಕುಲಕರ್ಣಿ, ಈ ಇನ್ನೋವೇಶನ್ ಕೇಂದ್ರದ ಮೂಲಕ ನೀಡಲಾಗುವ ಕೋರ್ಸ್‌ಗಳು ಕುರಿತು ವಿವರಿಸಿದರು.
ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷರಾದ ಅನಂತ್ ಮಂಡಗಿ ಅವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಉತ್ತರ ಕರ್ನಾಟಕದಲ್ಲಿ ಸಿಐಡಿಐನ ಸ್ಥಾಪನೆ, ಬೆಳಗಾವಿಗೆ ವಿಶೇಷ ಕೈಗಾರಿಕಾ ಸ್ಥಾನಮಾನ ನೀಡುವಲ್ಲಿ ಮಹತ್ವದ ಪಾಲು ನೀಡಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕ್ಯಾಟಿಯಾ, ಮತ್ತು 3D ಎಕ್ಸ್ಪೀರಿಯೆನ್ಸ್ ನಂತಹ ಡಸಾಲ್ಟ್ ಸಿಸ್ಟಮ್ಸ್ ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ವಹಿಸಿದ ಪ್ರಾಜೆಕ್ಟ್ ಗಳನ್ನೂ ಈ ಸಂಧರ್ಭದಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು.
ಕೆಎಲ್‌ಎಸ್ ಜಿಐಟಿ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಂದ್ರ ಬೆಳಗಾಂವಕರ ಅವರು ಸ್ವಾಗತಿಸಿದರು. ತರಬೇತಿ ಮತ್ತು ನಿಯೋಜನೆ ಅಧಿಕಾರಿ ಪ್ರೊ.ಸತೀಶ ಹುಕ್ಕೇರಿ ವಂದಿಸಿದರು. ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ