*ಕೆ ಎಲ್ ಎಸ್ ಜಿ ಆಯ್ ಟಿ ಯಲ್ಲಿ ಡಸಾಲ್ಟ್ ಸಿಸ್ಟಮ್ಸ್ ಸಹಯೋಗದಲ್ಲಿ ಇಂಟರ್ ಡಿಸಿಪ್ಲಿನರಿ ಡಿಸೈನ್ ಮತ್ತು ಇನ್ನೋವೇಶನ್ ಕೇಂದ್ರದ ಸ್ಥಾಪನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜುಲೈ 15 ವಿಶ್ವಯುವ ಕೌಶಲ್ಯ ದಿನವಾಗಿದ್ದು, ಜಾಗತಿಕ ಸವಾಲುಗಳನ್ನು ಎದುರಿಸುವಾಗ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಾಗ ಉದ್ಯೋಗ, ಯೋಗ್ಯ ಕೆಲಸ ಮತ್ತು ಉದ್ಯಮಶೀಲತೆಗಾಗಿ ಯುವಜನರನ್ನು ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಪ್ರಮುಖ ಸವಾಲು ನಮ್ಮ ಮುಂದಿದೆ.
ಜವಾಬ್ದಾರಿಯುತ ಜಾಗತಿಕ ನಾಗರಿಕರನ್ನು ಪೋಷಿಸಲು ಮತ್ತು ಹೆಚ್ಚು ನ್ಯಾಯಯುತ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಅಗತ್ಯವಾದ ಕೌಶಲ್ಯಗಳೊಂದಿಗೆ ಅವರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇದೇ ಜುಲೈ 13 ರಂದು ಸೆಂಟರ್ ಫಾರ್ ಇಂಟರ್ ಡಿಸಿಪ್ಲಿನರಿ ಡಿಸೈನ್ ಅಂಡ್ ಇನ್ನೋವೇಶನ್ (ಸಿ ಆಯ್ ಡಿ ಆಯ್) ಕೇಂದ್ರದ ಉದ್ಘಾಟನೆ ಕೆ ಎಲ್ ಎಸ್ ಜಿ ಆಯ್ ಟಿ , ದಸಲ್ಟ್ ಸಿಸ್ಟಮ್ಸ್ ಸಹಯೋಗದೊಂದಿಗೆ ಇತ್ತೀಚಿಗೆ ಜರುಗಿತು.
ಈ ಕೇಂದ್ರವು ಭವಿಷ್ಯದ-ನಾವೀನ್ಯತೆ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಸಜ್ಜುಗೊಳಿಸುತ್ತದೆ ಮತ್ತು ಉದ್ಯಮದ ಅಗತ್ಯಗಳೊಂದಿಗೆ ಶೈಕ್ಷಣಿಕ ಕಲಿಕೆಯನ್ನು ಸುಗಮಗೊಳಿಸಲಿದೆ. ಈ ಕೇಂದ್ರದ ಉದ್ಘಾಟನೆಗೆ ಆಗಮಿಸಿದ, ಮುಖ್ಯ ಅತಿಥಿಗಳು, ಕೆಎಲ್‌ಎಸ್ ಸದಸ್ಯರು ಮತ್ತು ಉದ್ಯಮದ ಆಹ್ವಾನಿತರು ಸೇರಿದಂತೆ ಗಣ್ಯರನ್ನು, ಕೆಎಲ್‌ಎಸ್ ಜಿಐಟಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಂದ್ರ ಬೆಳಗಾಂವಕರ ಅವರು ಸ್ವಾಗತಿಸಿದರು.
ಕೆಎಲ್ಎಸ್ ಜಿ ಆಯ್ ಟಿ ಯ ಪ್ರಾಂಶುಪಾಲರಾದ ಡಾ. ಎಂ ಎಸ್ ಪಾಟೀಲ್ ಅವರು ಸಂಸ್ಥೆಯಲ್ಲಿ ಸ್ಥಾಪಿತ ಇನ್ನೋವೇಷನ್ ಸೆಂಟರ್ ಗಳಾದ ಆಸ್ಟ್ರೋಫಿಸಿಕ್ಸ್, ವಿಎಲ್ಸಿಆಯ್, ಸಂಯೋಜಕ ವಸ್ತುಗಳು ಮತ್ತು ರಿವರ್ಸ್ ಎಂಜಿನಿಯರಿಂಗ್, ನ್ಯಾನೊಸೈನ್ಸ್ ಮತ್ತು ನ್ಯಾನೊಟೆಕ್ನಾಲಜಿ , ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಇದೇ ನಿಟ್ಟಿನಲ್ಲಿ ಸೆಂಟರ್ ಫಾರ್ ಇಂಟರ್ ಡಿಸಿಪ್ಲಿನರಿ ಡಿಸೈನ್ ಅಂಡ್ ಇನ್ನೋವೇಶನ್ (ಸಿ ಆಯ್ ಡಿ ಆಯ್) ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು ಎರಡು ವರ್ಷಗಳ ಯೋಜನೆಯನ್ನು ವಿವರಿಸಿದರು .
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಹರ್ಷಿತ್ ಕುಲಕರ್ಣಿ, ಈ ಇನ್ನೋವೇಶನ್ ಕೇಂದ್ರದ ಮೂಲಕ ನೀಡಲಾಗುವ ಪ್ರಮಾಣೀಕರಣ ಕೋರ್ಸ್‌ಗಳು ಕುರಿತು ವಿವರಿಸಿದರು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮ ಪಾಲುದಾರರಿಗೆ, ಶಬ್ದ ಕಂಪನ ಮತ್ತು ಕಠಿಣತೆ , ಇಂಡಸ್ಟ್ರಿಯಲ್ ಮೈಕ್ರೋವೇವ್ ಅಪ್ಲಿಕೇಶನ್‌ಗಳು, ನ್ಯಾನೊತಂತ್ರಜ್ಞಾನ ಮತ್ತು ಆಸ್ಟ್ರೋಫಿಸಿಕ್ಸ್ ಕೋರ್ಸ್ ಗಳ ಕುರಿತು ತಿಳಿಸಿದರು.
ಮುಖ್ಯ ಅತಿಥಿ , ಡಸಾಲ್ಟ್ ಸಿಸ್ಟಮ್ಸ್ ಸೊಲ್ಯೂಷನ್ಸ್ ಲ್ಯಾಬ್‌ನ ಸಿಇಓ, ಸುದರ್ಶನ್ ಮೊಗಸಾಲೆ ಅವರು ಮಾತನಾಡಿ, ಸಿ ಆಯ್ ಡಿ ಆಯ್ ಸಹಯೋಗದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಪ್ರಸ್ತುತ ವಿದ್ಯಾರ್ಥಿಗಳಿಗೆ ಲಭ್ಯವಿರುವ ವ್ಯಾಪಕ ಅವಕಾಶಗಳನ್ನು ಮತ್ತು ಬಹುಶಿಸ್ತೀಯ ಯೋಜನೆಗಳ ಮಹತ್ವವನ್ನು ತಿಳಿಸಿದರು.
ಗೌರವ ಅತಿಥಿಗಳಾದ ಧಾರವಾಡದ ಟಾಟಾ ಮೋಟಾರ್ಸ್‌ನ ಪ್ಲಾಂಟ್ ಹೆಡ್ ಪ್ರದೋಶ್ ಮೊಹಂತಿ ಅವರು ಟಾಟಾ ಮೋಟಾರ್ಸ್ ಕುರಿತು ಸಭಿಕರಿಗೆ ಮಾಹಿತಿ ನೀಡಿದರು ಮತ್ತು ಸಿಐಡಿಐ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷರಾದ ಅನಂತ್ ಮಂಡಗಿ ಅವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಉತ್ತರ ಕರ್ನಾಟಕದಲ್ಲಿ ಸಿಐಡಿಐನ ವಿಶಿಷ್ಟತೆ ಮತ್ತು ಬೆಳಗಾವಿ ಮತ್ತು ಜಿಐಟಿಯನ್ನು ಮಹತ್ವ ಸ್ಥಾಪಿಸುವಲ್ಲಿ ಅದರ ಪಾತ್ರವನ್ನು ಹೇಳಿದರು. ಎಂಜಿನಿಯರಿಂಗ್ ಮತ್ತು ವೈಜ್ಞಾನಿಕ ಸಿಮ್ಯುಲೇಶನ್‌ನ ಉಪಯೋಗಗಳನ್ನು ವಿವರಿಸಿದರು.
ಕ್ಯಾಟಿಯಾ, ಮತ್ತು 3D ಎಕ್ಸ್ಪೀರಿಯೆನ್ಸ್ ನಂತಹ ಡಸಾಲ್ಟ್ ಸಿಸ್ಟಮ್ಸ್ ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ವಹಿಸಿದ ಪ್ರಾಜೆಕ್ಟ್ ಗಳನ್ನೂ ಈ ಸಂಧರ್ಭದಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು.
ಕೆಎಲ್‌ಎಸ್ ಜಿಐಟಿಯ ತರಬೇತಿ ಮತ್ತು ನಿಯೋಜನೆ ಅಧಿಕಾರಿ ಪ್ರೊ.ಸತೀಶ ಹುಕ್ಕೇರಿ ವಂದಿಸಿದರು. ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ