Latest

ರಸ್ತೆ ಅಪಘಾತ ತಡೆಯಲು ರಸ್ತೆ ಸುರಕ್ಷತಾ ನಿಯಂತ್ರಣ ಪ್ರಾಧಿಕಾರ ರಚನೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರ್ಕಾರ ರಸ್ತೆ ಸುರಕ್ಷತೆ ಹಿತದೃಷ್ಟಿಯಿಂದ 2015 ರಲ್ಲಿ ರಾಜ್ಯ ರಸ್ತೆ ಸುರಕ್ಷತಾ ನೀತಿಯನ್ನು ಜಾರಿಗೊಳಿಸಿದೆ. ರಸ್ತೆ ಅಪಘಾತಗಳನ್ನು ನಿಯಂತ್ರ‍್ರಿಸಿ ಸಾವು ನೋವುಗಳನ್ನು ತಡೆಗಟ್ಟಲು 2018 ರಲ್ಲಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು,ಇವುಗಳ ಜೊತೆಗೆ ರಸ್ತೆ ಸುರಕ್ಷತಾ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಲು ಚಿಂತಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಬುಧವಾರ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಕಲಾಪಗಳ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಕೆ.ಎ.ತಿಪ್ಪೇಸ್ವಾಮಿ ಚುಕ್ಕೆ ಗುರುತಿನ ಪ್ರಶ್ನೆ 410 ಚರ್ಚೆಯ ಪ್ರಶ್ನೆಗೆ ಉತ್ತರಿಸಿ ಸ್ಪಷ್ಟೀಕರಣ ನೀಡಿದರು.
ರಾಜ್ಯಾದ್ಯಂತ 942 ಕಪ್ಪು ಚುಕ್ಕೆ ಸ್ಥಳಗಳನ್ನು ಪಟ್ಟಿ ಮಾಡಲಾಗಿದ್ದು, ಇದರಲ್ಲಿ 214 ಸ್ಥಳಗಳು ಲೋಕೋಪಯೋಗಿ ಇಲಾಖೆ ಅಡಿ ಬರುತ್ತವೆ. ಇದರಲ್ಲಿ 186 ಸ್ಥಳಗಳನ್ನು ಸರಿಪಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಸ್ಥಳಗಳ ಕಾಮಗಾರಿ ಪ್ರಗತಿಯಲ್ಲಿದೆ. ಇಲಾಖೆ ವತಿಯಿಂದ ಐ.ಆರ್.ಸಿ ಅನುಸಾರ ರೂ.10 ಕೋಟಿಗೂ ಹೆಚ್ಚಿನ ರಸ್ತೆ ಕಾಮಗಾರಿಗಳ ಸುರಕ್ಷತಾ ಆಡಿಟ್ ನಡೆಸಲಾಗುವುದು. ನಿಯಮಾನುಸಾರ 5 ಅಪಘಾತಗಳು ಅಥವಾ 10 ಜನರಿಗೂ ಅಧಿಕ ಮೃತ್ಯು ಸಂಭವಿಸಿದ 10 ಮೀಟರ್ ವ್ಯಾಪ್ತಿಯ ಸ್ಥಳಗಳನ್ನು ಕಪ್ಪು ಚುಕ್ಕೆ ಸ್ಥಳಗಳಾಗಿ ಗುರುತಿಸಲಾಗಿದೆ. ರೂ.10 ಕೋಟಿಗೂ ಅಧಿಕ ರಸ್ತೆ ಕಾಮಗಾರಿಗಳ ಶೇ.3 ರಿಂದ 5 ರಷ್ಟು ಹಣವನ್ನು ರಸ್ತೆ ಸುರಕ್ಷತೆಗೆ ಮೀಸಲಿರಿಸಲಾಗಿದೆ. ರಸ್ತೆ ಸುರಕ್ಷತೆ ಚಿಹ್ನೆ, ಬೋರ್ಡ್ ಅಳವಡಿಕೆ, ತಿರುವು ರಕ್ಷಣೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆಗಳಲ್ಲಿ ಕಪ್ಪು ಚುಕ್ಕೆ ಜಾಗಗಳನ್ನು ಸಾರಿಗೆ, ಪೊಲೀಸ್, ಶಿಕ್ಷಣ, ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ರಾಜ್ಯಾದ್ಯಂತ 2019ರಲ್ಲಿ 40658 ಅಪಘಾತಗಳು ಸಂಭವಿಸಿವೆ. ಇದರಲ್ಲಿ 10958 ಜನರು ಮೃತ್ಯು ಹೊಂದಿದ್ದಾರೆ. 2020 ರಲ್ಲಿ 34178 ಅಪಘಾತದಲ್ಲಿ 9760 ಜನರು ಮೃತ್ಯು ಹೊಂದಿದ್ದಾರೆ. 2021ರಲ್ಲಿ 34647 ಅಪಘಾತದಲ್ಲಿ 10038 ಜನರು ಮೃತ್ಯ ಹೊಂದಿದ್ದಾರೆ. 2022 ರಲ್ಲಿ ಇದುವರೆಗೂ 36100 ಅಪಘಾತದಲ್ಲಿ 9857 ಜನರು ಮೃತ್ಯು ಹೊಂದಿದ್ದಾರೆ ಎಂಬ ಮಾಹಿತಿಯನ್ನು ಲೋಕೋಪಯೋಗಿ ಸಚಿವರು ನೀಡಿದ ಲಿಖಿತ ಉತ್ತರದ ಅನುಬಂಧದಲ್ಲಿ ತಿಳಿಸಲಾಗಿದೆ.
ಶಾಸಕ ಕೆ.ಎ.ತಿಪ್ಪೇಸ್ವಾಮಿ ಅವರು ಸರ್ವೋಚ್ಚ ನ್ಯಾಯಾಲಯದ ಅಡಿ ರಸ್ತೆ ಸುರಕ್ಷತಾ ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸಾರಿಗೆ ಮಂತ್ರಾಲಯದಡಿ ರಸ್ತೆ ಪ್ರಾಧಿಕಾರಗಳು ರಚನೆಯಾಗಿವೆ. ರಾಜ್ಯದಲ್ಲೂ ರಸ್ತೆ ಸುರಕ್ಷತಾ ನಿಯಂತ್ರಣ ಪ್ರಾಧಿಕಾರ ರಚನೆ ಮಾಡುವಂತೆ ಸರ್ಕಾರವನ್ನು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ರಾಜ್ಯಾದ್ಯಂತ ರೂ. 850 ಕೋಟಿ ವೆಚ್ಚದಲ್ಲಿ 100 ಅಂಬೇಡ್ಕರ್ ಹಾಸ್ಟೆಲ್,11 ಕ್ರೈಸ್ ಶಾಲೆಗಳ ನಿರ್ಮಾಣ:

Home add -Advt

ಈ ಬಾರಿ ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪಯೋಜನೆಗಳಡಿ ರಾಜ್ಯಾದ್ಯಂತ ರೂ.850 ಕೋಟಿ ವೆಚ್ಚದಲ್ಲಿ 100 ಅಂಬೇಡ್ಕರ್ ಹಾಸ್ಟೆಲ್‌ಗಳು, 11 ಕ್ರೈಸ್ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಸದಸ್ಯ ಕೆ. ಅಬ್ದುಲ್ ಜಬ್ಬರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಲೋಕೋಪಯೋಗಿ ಇಲಾಖೆಯಿಂದ ದಾವಣಗೆರೆ ಜಿಲ್ಲೆಯಲ್ಲಿ 2022-23ರಲ್ಲಿ ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪಯೋಜನೆಗಳಡಿ ಯಾವುದೇ ಹೊಸ ರಸ್ತೆ ಕಾಮಗಾರಿಗಳಿಗೆ ಮಂಜೂರಾತಿ ನೀಡಿರುವುದಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ 9 ರಸ್ತೆಗಳು ಲೋಕೋಪಯೋಗಿ ಇಲಾಖೆ ಅಡಿ ಬರುತ್ತವೆ. ಈ ರಸ್ತೆಗಳ ದುರಸ್ತಿಗೆ ಇಲಾಖೆಯಿಂದ ಅನುದಾನ ನೀಡಲಾಗಿದೆ. 2022-23ನೇ ಸಾಲಿನಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೂ.86.76 ಲಕ್ಷ ಅಂದಾಜು ಮೊತ್ತದಲ್ಲಿ 118.89 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ನಿರ್ವಹಣೆ ಕಾಮಗಾರಿಗಳನ್ನು ಹಾಗೂ ರೂ.87.20 ಲಕ್ಷ ಅಂದಾಜು ಮೊತ್ತದಲ್ಲಿ 229.31 ಕಿ.ಮೀ ಉದ್ದದ ಜಿಲ್ಲಾ ಮುಖ್ಯರಸ್ತೆ ನಿರ್ವಹಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ ಎಂದರು.

ಆಟೋ, ಕ್ಯಾಬ್ ಚಾಲಕರಿಗೆ ಆಯುಷ್ಮಾನ್ ಭಾರತ್ ಅಡಿ ಉಚಿತ ಚಿಕಿತ್ಸೆ 

https://pragati.taskdun.com/free-treatment-under-ayushman-bharat-for-auto-and-cab-drivers/

ವಂದೇ ಭಾರತ್, ಶತಾಬ್ದಿ ಸೂಪರ್‌ಫಾಸ್ಟ್ ರೈಲುಗಳು ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ

https://pragati.taskdun.com/vande-bharat-shatabdi-superfast-trains-check-for-schedule-change/

*ಮಾನಸಿಕ ಸಮತೋಲನ ಕಳೆದುಕೊಂಡ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರು: ಮುಖ್ಯಮಂತ್ರಿ ಬೊಮ್ಮಾಯಿ ಟೀಕೆ*

https://pragati.taskdun.com/karnataka-maharashtra-border-issue-cm-basavaraj-bommaireactionjayanth-patilsanjay-rawath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button