ಪ್ರಗತಿವಾಹಿನಿ ಸುದ್ದಿ, ಗೋಕಾಕ್ : ರಸ್ತೆ ಬದಿಯಲ್ಲಿ ಅನದಿಕೃತವಾಗಿ ವ್ಯಾಪಾರ ಮಾಡಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತಿದ್ದ ನಗರದಲ್ಲಿನ ವರ್ತಕರನ್ನು, ಸಣ್ಣಪುಟ್ಟ ಡಬ್ಬಾಅಂಗಡಿಗಳನ್ನು ನಗರ ಪೋಲಿಸ್ ಠಾಣೆಯ ಪಿಎಸ್ಐ ಕೆ ವಾಲಿಕಾರ ಮತ್ತು ನಗರಸಭೆಯ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಧಾರಾಕಾರ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ತೆರವು ಗೊಳಿಸಿದರು.
ಗೋಕಾಕ ಪಟ್ಟಣದ ಸಂಗೋಳ್ಳಿ ರಾಯಣ್ಣನ ವೃತ್ತದ ಬಳಿ, ಬಸವೇಶ್ವರ ವೃತ್ತದಿಂದ ಲಕ್ಷ್ಮೀ ಟಾಕೀಜ್, ಪೊಲೀಸ್ ಠಾಣೆ ಸುತ್ತಮುತ್ತ ಬೀದಿಬದಿಯಲ್ಲಿ ಡಬ್ಬಾಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂಬ ದೂರುಗಳಿದ್ದವು. ಹಲವಾರು ಬಾರಿ ಮೌಖಿಕವಾಗಿ ನೋಟಿಸ್ ನೀಡಿ ಬೀದಿ ಬಳಿಯ ವ್ಯಾಪಾರಸ್ಥರಿಗೆ, ಸಣ್ಣ ಪುಟ್ಟ ಅಂಗಡಿಯವರಿಗೆ ತಿಳಿಸಿದರು ಕೂಡ ನಿರ್ಲಕ್ಷ್ಯ ವಹಿಸಿದವರಿಗೆ ಇಂದು ಪಿಎಸ್ಐ ಕೆ, ವಾಲಿಕಾರ ನೇತೃತ್ಬದಲ್ಲಿ ತೆರವುಗೊಳಿಸಿದರು. ಇನ್ನು ತೆರವುಗೊಳಿಸಲು ಕೆಲವರು ಪ್ರತಿರೋಧ ವ್ಯಕ್ತಪಡಿಸಿದರು.
ಯಾವುದನ್ನು ಲೆಕ್ಕಿಸದೆ ಜನರ ಹಿತಕಾಪಾಡಲು ಬೀದಿ ಬದಿ ಇದ್ದ ವರ್ತಕರ ಮತ್ತು ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ನೋಡಿಕೊಂಡು ನಗರಸಭೆಯವರು ಸೂಚಿಸಿದ ಸ್ಥಳಕ್ಕೆ ತೆರಳಿ ವ್ಯಾಪರ ಮಾಡಿಕೊಂಡು ಹೊಗಲು ತಿಳಿಸಿದರು.
ಈ ಸಂದರ್ಬದಲ್ಲಿ ಪೊಲೀಸ್ ಸಿಬ್ಬಂದಿಗಳು, ನಗರ ಸಭೆಯ ಅಧಿಕಾರಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ