Belagavi NewsBelgaum NewsKannada NewsKarnataka NewsLatest

*ಅನಾರೋಗ್ಯದಲ್ಲೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಅಭಿವೃದ್ಧಿಯದ್ದೇ ಚಿಂತೆ – ಚನ್ನರಾಜ ಹಟ್ಟಿಹೊಳಿ*

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ತಾವು ಅನಾರೋಗ್ಯದಲ್ಲಿದ್ದರೂ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಬಾರದೆಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ಇಡೀ ತಂಡಕ್ಕೆ ಆದೇಶ ನೀಡಿದ್ದಾರೆ. ಹಾಗಾಗಿ ಕಳೆದ 2 ದಿನಗಳಲ್ಲಿ 10ಕ್ಕೂ ಹೆಚ್ಚು ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಲಾಗಿದೆ. ಎಲ್ಲ ಕೆಲಸಗಳೂ ನಿರ್ವಿಘ್ನವಾಗಿ ಮುಂದುವರಿಯಲಿವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ -ಮಾರಿಹಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣದ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ನಿನ್ನೆ ಹಲವಾರು ಕಡೆಗಳಲ್ಲಿ ರಸ್ತೆ, ಚರಂಡಿ ಮತ್ತಿತರ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇಂದು ಸಹ 5-6 ಗ್ರಾಮಗಳಲ್ಲಿ ಅಭಿವೃದ್ಧಿ ಯೋಜನೆ ಆರಂಭಿಸಲಾಗಿದೆ. ಲಕ್ಷ್ಮೀ ಹೆಬ್ಬಾಳಕರ್ ಅವರು ಆರೋಗ್ಯವಾಗಿದ್ದರೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿ ಕೆಲಸ ಮಾಡುತ್ತಾರೆ. ಈಗ ಅನಿವಾರ್ಯವಾಗಿ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ತಮ್ಮ ಅನಾರೋಗ್ಯ ಕ್ಷೇತ್ರದ ಕೆಲಸಗಳಿಗೆ ತಡೆಯೊಡ್ಡಬಾರದು ಎನ್ನುವ ಕಳಕಳಿ ಅವರದ್ದು. ಈ ಹಿನ್ನೆಲೆಯಲ್ಲಿ ನಾವು ಮತ್ತು ಎಲ್ಲ ಆಪ್ತ ಸಹಾಯಕರ ಮೂಲಕ ಕೆಲಸ ಮಾಡಲಾಗುತ್ತಿದೆ ಎಂದು ಚನ್ನರಾಜ ತಿಳಿಸಿದರು. 

ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ಬರುವ ಭಕ್ತಾಧಿಗಳ ಹಾಗೂ ಗ್ರಾಮಸ್ಥರ ಸುಗಮ ಸಂಚಾರಕ್ಕಾಗಿ ಸುಮಾರು 1.71 ಕೋಟಿ ರೂ,ಗಳ ವೆಚ್ಚದಲ್ಲಿ ಈ ರಸ್ತೆ ನಿರ್ಮಾಣವಾಗಲಿದೆ.  ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದೂ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹೇಶ ಸುಗಣೆನ್ನವರ, ದೇವಣ್ಣ‌ ಬಂಗೇನ್ನವರ್, ಮಂಜುನಾಥ ಪೂಜೇರಿ, ರುದ್ರಪ್ಪ ಅಂಬ್ರಾಪುರ, ಮಂಜುನಾಥ್ ಪಾಥಲಿ, ಶಿವಾಜಿ ಹುಂಕ್ರಿಪಾಟೀಲ, ಬಸನಗೌಡ ಹುಂಕ್ರಿಪಾಟೀಲ್, ಲಕ್ಷ್ಮಿನಾರಾಯಣ ಕಲ್ಲೂರ್, ಫಕೀರಪ್ಪ ಅಂಬ್ರಾಪುರ್, ಮುರಗೇಶ್ ಹಂಪಿಹೊಳಿ, ಇಸ್ಮಾಯಿಲ್ ತಿಗಡಿ, ನಾಗಯ್ಯ ಕುಡಚಿಮಠ್, ಅಸ್ಲಂ ಮತ್ತುರ್, ಬಸು ಕುಕಡೊಳಿ, ನಿಂಗಪ್ಪ ಚಂದೂರ್, ಪ್ರಕಾಶ ಹುದ್ದೆನ್ನವರ್, ಜೀವನಪ್ಪ ಶಿಂದೆ, ಅಡಿವೆಪ್ಪ ನಾಗರಾಳ, ಸಂಗಪ್ಪ ಪಾಟೀಲ, ಮಂಜುನಾಥ ಹಣಗೋಜಿ ಮುಂತಾದವದರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button