Belagavi NewsBelgaum NewsKannada NewsKarnataka News

ಬೆಳಗಾವಿಯಲ್ಲಿ ಕೃಷಿ ಹೊಂಡದಲ್ಲಿ ಬಿದ್ದು ಶಾಲಾ ವಿದ್ಯಾರ್ಥಿನಿ ಸಾವು 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಲಾಬಾದ ಗ್ರಾಮದಲ್ಲಿ ಮೇಕೆಗಳಿಗೆ ನೀರು ಕುಡಿಸಲು ಕೃಷಿ ಹೊಂಡಕ್ಕೆ ಹೋದಾಗ ಕಾಲು ಜಾರಿ ಬಿದ್ದು ನೀರಲ್ಲಿ ಮುಳಗಿ ಬಾಲಕಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಮೇಕೆ ಕಾಯಲು ಹೋಗಿದ್ದ ಮಲಾಬಾದ ಗ್ರಾಮದ ಅನ್ವಿತಾ ಸತ್ಯಪ್ಪ ಖೋತ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾಳೆ. ಬಳಿಕ ಅಲ್ಲೆ ಇದ್ದ ಸಹೋದರಿಯನ್ನು ರಕ್ಷಿಸಲು ಹೋದ  ಸಹೋದರ  ಅಣ್ಣಪ್ಪ ವಿಠ್ಠಲ್ ಖೋತ್  ಕೂಡ ನೀರಲ್ಲೇ ಮುಳುಗಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಕೂಡಲೇ ಇಬ್ಬರನ್ನು ಮೇಲೆಕ್ಕೆ ಎತ್ತಲಾಗಿದೆ. ಅಷ್ಟೊತ್ತಿಗೆ ಬಾಲಕಿ ಅನ್ವಿತಾ ಖೋತ್ ಅವಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

Home add -Advt

ಅಣ್ಣಪ್ಪ ವಿಠ್ಠಲ್ ಖೋತ್ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದವನನ್ನು ಕೂಡಲೇ ಅಥಣಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಚೇತರಿಸಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button