Kannada NewsKarnataka NewsPolitics

*ಎನ್‌ಕೌಂಟರ್ ಕಾನೂನು ಜಾರಿಗೆ ಬಂದರೆ ಎಲ್ಲವೂ ನಿಲ್ಲುತ್ತೆ: ಸಚಿವ ಸಂತೋಷ ಲಾಡ್ *

ಪ್ರಗತಿವಾಹಿನಿ ಸುದ್ದಿ: ಇಂಥಹ ಕೆಟ್ಟ ಮನಸ್ಥಿತಿಯನ್ನು ಮಟ್ಟಹಾಕಲು ದೇಶದಲ್ಲಿ ಎನ್‌ಕೌಂಟರ್ ಕಾನೂನು ಬರಬೇಕು ಎಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹೀರೆಮಠ ಎಂಬ ವಿದ್ಯಾರ್ಥಿನಿಯ ಕೊಲೆ ಪ್ರಕರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಖಂಡಿಸಿದ್ದಾರೆ.

ನಗರದ ಕಿಮ್ಸ್ ಶವಗಾರಕ್ಕೆ ಭೇಟಿ ನೀಡಿ ಕೊಲೆಯಾದ ವಿದ್ಯಾರ್ಥಿನಿಯ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಸಂತೋಷ್ ಲಾಡ್,‌ ವೈಯಕ್ತಿಕವಾಗಿ ಈ ಘಟನೆಯನ್ನು ಖಂಡಿಸುತ್ತೇನೆ. ಈ ರೀತಿಯ ಕೃತ್ಯಗಳನ್ನು ತಡೆಯಲು ದೇಶದಲ್ಲಿ ಎನ್‌ಕೌಂಟರ್ ಎಂಬ ಕಾನೂನು ಬರಬೇಕು ಎಂದರು.

ಬಿಜೆಪಿ ಈ ವಿಚಾರವನ್ನು ಸುಮ್ಮನೆ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌ ಸರ್ಕಾರ ಮಾತ್ರವಲ್ಲ ಎಲ್ಲಾ ಸರ್ಕಾರದ ಅವಧಿಯಲ್ಲೂ ಇಂತಹ ಘಟನೆ ನಡೆದಿದೆ. ದಯವಿಟ್ಟು ಈ ವಿಚಾರವನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಡಿ ಎಲ್ಲರೂ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಸಂತ್ರಸ್ತ ಕುಟುಂಬದವರಿಗೆ ಧೈರ್ಯ ಹೇಳಬೇಕು.‌ ಸರಿಯಾದ ತನಿಖೆಯಾಗಬೇಕು ಎಂದು ಸಂತೋಷ್ ಲಾಡ್ ಹೇಳಿದರು.

Home add -Advt

ಡ್ರಗ್ಸ್, ಐಪಿಎಲ್ ಬೆಟ್ಟಿಂಗ್ ವಿಚಾರಗಳೇ ಬೇರೆ, ಇಂತಹ ಘಟನೆಗಳೇ ಬೇರೆ. ಇಂತಹ ಕೃತ್ಯ ಎಸಗಿದವರನ್ನು ಎನ್‌ಕೌಂಟರ್ ಮಾಡಿದರೆ ಎಲ್ಲವೂ ನಿಲ್ಲುತ್ತದೆ ಎಂದರು.‌

Related Articles

Back to top button