ಪ್ರಗತಿವಾಹಿನಿ ಸುದ್ದಿ, ಲಕ್ನೋ: ಅನೇಕ ಜನರಿಗೆ ಕೃಷಿ ಮಾಡುವ ಖಯಾಲಿ ಇದ್ದರೂ ಅದಕ್ಕೆ ಪೂರಕವಾಗಿ ಜಮೀನಿನ ಕೊರತೆ ನಿರಾಸೆ ಹುಟ್ಟಿಸುತ್ತದೆ. ಆದರೆ ಆಧುನಿಕ ರೈತರೊಬ್ಬರು ಕೃಷಿ ಜಮೀನಿನ ಹಂಗೇ ಇಲ್ಲದೆ ಮೂರಂತಸ್ತಿನ ಮನೆಯನ್ನೇ ಹೊಲವನ್ನಾಗಿಸಿಕೊಂಡಿದ್ದಾರೆ.
ಇದರಿಂದ ಅವರು ಗಳಿಸುವ ಆದಾಯ ವರ್ಷಕ್ಕೆ 70 ಲಕ್ಷ ರೂ. ಯಂತೆ. ಈ ಮೊದಲು ಪತ್ರಕರ್ತರಾಗಿದ್ದ ರಾಮವೀರ್ ಮಧ್ಯೆ ಉದ್ಯೋಗ ತೊರೆದರು. ಕಟ್ಟಡದಲ್ಲೇ ಸಾವಯವ ಕೃಷಿ ಮಾಡಿ ಯಶಸ್ಸು ಸಾಧಿಸಿದ್ದಾರೆ.
2017- 18ರಲ್ಲಿ ಅವರು ದುಬೈನಲ್ಲಿ ನಡೆದಿದ್ದ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅಲ್ಲಿ ಹೈಡ್ರೋಫೋನಿಕ್ಸ್ ಕೃಷಿ ಬಗ್ಗೆ ಮಾಹಿತಿ ಪಡೆದು ಅದನ್ನು ಬಳಸಿಕೊಂಡು ತಮ್ಮ 750 ಚದರ ಮೀ. ಜಾಗದಲ್ಲಿ 10 ಸಾವಿರಕ್ಕೂ ಅಧಿಕ ಗಿಡಗಳು, ತರಕಾರಿಗಳನ್ನು ಬೆಳೆದರು. ಇದರಲ್ಲಿ ಶೇ. 90ರಷ್ಟು ನೀರಿನ ಉಳಿತಾಯವನ್ನೂ ಮಾಡುತ್ತಿದ್ದಾರೆ.
ಮೆಣಸು, ಬೆಂಡೆ, ಸೋರೆಕಾಯಿ, ದೊಣಮೆಣಸು, ಪಾಲಕ್ ಹೂಕೋಸು, ಟೊಮೆಟೊ ಬಟಾಣಿ, ಸ್ಟ್ರಾಬೆರ್ರಿ, ಮೆಂತೆ ಸೇರಿದಂತೆ ಹಲವು ತರಕಾರಿಗಳು ಇವರ ತೋಟದಲ್ಲಿ ಹೈಡ್ರೋಫೋನಿಕ್ಸ್ ವಿಧಾನದಲ್ಲಿ ಬೆಳೆಯುತ್ತಿವೆ.
ಲೋಕಾಯುಕ್ತ ಮೆಟ್ಟಿಲೇರಿದ ಬೆಂಗಳೂರಿನ ಮಳೆ ಅವಾಂತರ ಪ್ರಕರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ