Kannada NewsKarnataka NewsLatest

ಪರೀಕ್ಷೆ ಫಲಿತಾಂಶ ಪ್ರಕಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ.

ಇಂದು ರಾತ್ರಿ 8 ಗಂಟೆಗೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. 2,4,5,6ನೇ ಸೆಮಿಸ್ಟರ್ ಗಳ ರಿಪೀಟರ್ ಮತ್ತು ರೆಗ್ಯುಲರ್ ಫಲಿತಾಂಶ ಪ್ರಕಟಿಸಲಾಗಿದೆ. 2019 -20ನೇ ಸಾಲಿನ ಪರೀಕ್ಷೆ ಕಳೆದ ಸೆಪ್ಟಂಬರ್ ತಿಂಗಳಲ್ಲಿ ನಡೆದಿತ್ತು. ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಿದ್ದು ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ.

ಸದರಿ ಪರೀಕ್ಷೆಗಳ ಬಿಪಿಎಡ್ 2ನೇ ಸೆಮಿಸ್ಟರ್ (ರಿಪೀಟರ್),  4ನೇ ಸೆಮಿಸ್ಟರ್ (ರೆಗ್ಯುಲರ್ & ರಿಪೀಟರ್), ಬಿಬಿಎ 6ನೇ ಸೆಮಿಸ್ಟರ್ (ರೆಗ್ಯುಲರ್ &  ರಿಪೀಟರ್),  ಬಿಎಸ್ಸಿ (ಸಿಎಸ್) ಪದವಿಯ 6ನೇ ಸೆಮಿಸ್ಟರ್ ಪದವಿಗಳ ಮೌಲ್ಯಮಾಪನ ಮುಕ್ತಾಯವಾಗಿದ್ದು ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಸ್ಟುಡೆಂಟ್ ಪೋರ್ಟಲ್ ಮೂಲಕ ಮತ್ತು ಕಾಲೇಜುಗಳಿಂದ ಓಯಾಸಿಸ್ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ.ಹುರಕಡ್ಲಿ ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button