Kannada NewsKarnataka NewsLatest
ಪರೀಕ್ಷೆಯಲ್ಲಿ ಸಾಧನೆ: ಎಸ್ ಜಿವಿ ಮಹೇಶ್ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ಥಳೀಯ ಎಸ್ ಜಿ ವಿ ಮಹೇಶ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಿಯದರ್ಶಿನಿ ಗುರವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಅಂಕ ಗಳಿಸಿದ್ದು, ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.
.ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಂ ವಿ ಭಟ್ಟ ಮಾತನಾಡಿ “ಕಳೆದ ೧೧ ವರ್ಷಗಳಿಂದ ಉತ್ತಮ ಸಾಧನೆ ತೋರಿಸುತ್ತ ಬಂದಿರುವ ಕಾಲೇಜು ಈ ವರ್ಷವೂ ಕೂಡ ಅತ್ಯುತ್ತಮ ಸಾಧನೆ ಗೈದಿದೆ “ಎಂದರು.
ಕಾಲೇಜಿನಲ್ಲಿ ಉತ್ತಮ ಬೋಧಕ ಸಿಬ್ಬಂದಿಯಿದ್ದು, ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ಸಿಗುತ್ತಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಹಾಗಾಗಿಯೇ ಬೆಳಗಾವಿಯಲ್ಲದೆ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದಲೂ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುತ್ತಾರೆ. ಕಾಲೇಜಿನ ಮೇಲೆ ವಿಶ್ವಾಸವಿಟ್ಟಿರುವ ಉತ್ತರ ಕರ್ನಾಟಕ ಭಾಗದ ಜನರಿಗೆ ನಾವು ಋಣಿಯಾಗಿರುತ್ತೇವೆ ಎಂದು ಎಂ.ವಿ.ಭಟ್ ಹೇಳಿದರು.
ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯ ಆನಂದ ಖೋತ್ ಮತ್ತು ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ಉಪಸ್ಥಿತರಿದ್ದರು. ಉತ್ತಮ ಅಂಕ ಗಳಿಸಿದ ಎಲ್ಲ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು,ಉಪಪ್ರಾಚಾರ್ಯರು, ಉಪನ್ಯಾಸಕರು,ಆಡಳಿತ ಮಂಡಳಿ , ಬೋದಕೇತರ ವರ್ಗ ಎಲ್ಲರು ಅಭಿನಂದಿಸಿದರು.
ಅಭಿಜಿತ ಹಣಗೋಡಿಮಠ ಸ್ವಾಗತಿಸಿದರು, ಸತೀಶ ಭಟ್ಟ ಪ್ರಾರ್ಥನೆ ಹಾಡಿದರು. ಸ್ಮೀತಾ ಪವಾರ ವಂದನಾರ್ಪಣೆ ಮಾಡಿದರು.
ಕಾಲೇಜಿನಲ್ಲಿ ಉತ್ತಮ ಬೋಧಕ ಸಿಬ್ಬಂದಿಯಿದ್ದು, ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ಸಿಗುತ್ತಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಹಾಗಾಗಿಯೇ ಬೆಳಗಾವಿಯಲ್ಲದೆ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದಲೂ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುತ್ತಾರೆ. ಕಾಲೇಜಿನ ಮೇಲೆ ವಿಶ್ವಾಸವಿಟ್ಟಿರುವ ಉತ್ತರ ಕರ್ನಾಟಕ ಭಾಗದ ಜನರಿಗೆ ನಾವು ಋಣಿಯಾಗಿರುತ್ತೇವೆ
-ಎಂ.ವಿ.ಭಟ್, ಪ್ರಾಚಾರ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ