ಪ್ರಗತಿವಾಹಿನಿ ಸುದ್ದಿ, ಅಥಣಿ: ಅಥಣಿ ಉಪವಿಭಾಗದ ಅಧೀನ ಪೊಲೀಸ್ ಠಾಣೆಗಳಾದ ಅಥಣಿ, ಐಗಳಿ, ಕಾಗವಾಡ ಮತ್ತು ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಜೂಜಾಟ, ಅಕ್ರಮ ಮಟ್ಕಾ, , ಸರಾಯಿ ಮತ್ತು ಅಕ್ರಮ ಮರಳು ಸಾಗಾಣಿಕೆಯ ಹಾಗೂ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿದ ವ್ಯಕ್ತಿಗಳ ವಿರುದ್ಧ ಗಡಿಪಾರು ಶಿಕ್ಷೆ ಜಾರಿಗೊಳಿಸಲಾಗಿದೆ.
ಅಥಣಿ ಠಾಣೆಯಿಂದ- 2. ಕುಡಚಿ -5, ಕಾಗವಾಡ – 1, ಐಗಳಿ -2 ಜನರನ್ನು ಗಡಿಪಾರು ಮಾಡುವಂತೆ ಚಿಕ್ಕೋಡಿ ಉಪವಿಭಾಗಾಧಿಕಾರಿಗಳಿಗೆ ಪೊಲೀಸರು ವರದಿ ಮಾಡಿದ್ದರು. ಅದನ್ನು ಆಧರಿಸಿ ಉಪವಿಭಾಗಾಧಿಕಾರಿಗಳು 10 ಜನರನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
1. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯ ಮದಬಾವಿಯ ಮೀರಾಸಾಬ್ ಗಂಗಾರಾಮ ಬಾಗಡಿ 5 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಆತನನ್ನು ಬೆಳಗಾವಿ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.
2. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯ ಸದಾಶಿವ ಸತ್ತಪ್ಪಾ ಗೋಡಮಾಲೆ ರಡ್ಡೇರಹಟ್ಟಿ 5 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಆತನನ್ನು ಸಹ ಬೆಳಗಾವಿ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
3. ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಉಗಾರದ ಮಹಾದೇವ ಯಲ್ಲಪ್ಪ ಕಾಂಬಳೆ ಮೇಲೆ ಸಹ 5 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಇವನನ್ನು ಬೆಳಗಾವಿ ಜಿಲ್ಲೆಯಿಂದ ವಿಜಯಪುರ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
4. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಹಳ್ಳಿಯ ರವಿ ಸುರೇಶ್ ಶಿಂಗೆ 4 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
5. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಕಮರಿಯ ಪ್ರದೀಪ ಪ್ರಕಾಶ ಕರಡಿ ವಿರುದ್ಧ 03 ಅಕ್ರಮ ಮರಳು ಸಾಗಣಿಕೆ ಮತ್ತು: 02-ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿದ್ದು, ಆತನನ್ನು ಬೆಳಗಾವಿ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.
5, ಕುಡಚಿ ಪೊಲೀಸ್ ಕಾಣಾ ವ್ಯಾಪ್ತಿಯ ಕುಡಚಿಯ ಅಲಿಮುರ್ತುಜಾ ದಾದೆಪಿರ್ ಚಮನಮಲಕ 10 ಮಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.
7. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾಹೇಬಹುಸೇನ ದಾದೆಫಿರರ್ ಚಮನಮಲಿಕ ಮೇಲೆ 22 ಮಟಕಾ ಪ್ರಕರಣವಿದ್ದು, ಆತನನ್ನು ಬೆಳಗಾವಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
8. ಕುಡಚಿ ಠಾಣೆಯ ಕುಡಚಿಯ ನಜೀರ್ ಹುಸೇನ ತಾಂಬೋಳಿಯ ಮೇಲೆ 10. ಮಟಕಾ ಪ್ರಕರಣಗಳು ಇದ್ದು ಈತನನ್ನು ಬೆಳಗಾವಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.
9. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂಚಲಿಯ ಲಕ್ಷ್ಮಣ ವಸಂತ ಪೋಳ ನ ಮೇಲೆ 07 ಮಟಕಾ ಪ್ರಕರಣಗಳಿದ್ದು ಆತನನ್ನು ಬೆಳಗಾವಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
10. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯ ಅಲ್ತಾನ ಅಲ್ತಾಪ ಹುಸೇನ ಭಾವರದ್ದೀನ್ ಮೇವಿಗಾರ್ ಈತನ ಮೇಲೆ 15 ಮಟ್ಕಾ ಪ್ರಕರಣ ಹಾಗೂ 3 ಜೂಜಾಟ ಪ್ರಕರಣಗಳು ಇದ್ದು ಈತನನ್ನು ಬೆಳಗಾವಿಯಿಂದ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಒಟ್ಟು ಹತ್ತು ಜನರ ವಿರುದ್ಧ 86 ಅಕ್ರಮ ಮಟ್ಕಾ ಪ್ರಕರಣ 3 ಜೂಜಾಟ ಪ್ರಕರಣ, 3 ಅಕ್ರಮ ಮರಳು ಸಾಗಾಣಿಕೆ ಪ್ರಕರಣ, ಹಾಗೂ 2 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಇವರೆಲ್ಲರನ್ನೂ ಗಡಿಪಾರು ಮಾಡಿ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ – PRESS NOTE PHOTO.232
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ