
ಪ್ರಗತಿವಾಹಿನಿ ಸುದ್ದಿ: ರೈಲ್ವೆ ಪ್ರಯಾಣಿಕರ ಗಮನಕ್ಕೆ. ನವೆಂಬರ್ 21ರಿಂದ ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ರೈಲ್ವೆ ಕಾಮಗಾರಿ ಇರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ ಹಲವು ಪ್ರಮುಖ ಎಕ್ಸ್ಪ್ರೆಸ್ ರೈಲುಗಳ ಆಗಮನ ಸಮಯವನ್ನು ಪರಿಷ್ಕರಿಸಲಾಗಿದೆ.
ಆಯಾ ರೈಲುಗಳ ಮುಂದೆ ನಮೂದಿಸಲಾದ ಪ್ರಯಾಣ ಆರಂಭದ ದಿನಾಂಕದಿಂದ ಈ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಶವಂತಪುರ ಮತ್ತು ಹಾಸನ ನಿಲ್ದಾಣಗಳಿಗೆ ತಲುಪುವ ಬೀದರ್, ಕಣ್ಣೂರು, ಸಿಂಧನೂರು, ದೆಹಲಿ, ಪಾಂಡಿಚೇರಿ ಹಾಗೂ ಚರ್ಲಪಲ್ಲಿ ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಪ್ರಯಾಣಿಕರು ಗಮನಿಸಿ ಸಹಕರಿಸಲು ರೈಲ್ವೆ ಇಲಾಖೆ ಕೋರಿದೆ.
ಸಮಯ ಬದಲಾವಣೆಯಾದ ಪ್ರಮುಖ ರೈಲುಗಳ ಸಂಪೂರ್ಣ ಪಟ್ಟಿಇಲ್ಲಿದೆ.
ಯಶವಂತಪುರ–ಹಾಸನ ಮಾರ್ಗದ ರೈಲು:
ಹಾಸನ ನಿಲ್ದಾಣಕ್ಕೆ ಈ ಹಿಂದೆ ರಾತ್ರಿ 21:05 (9:05 PM) ಕ್ಕೆ ಆಗಮಿಸುತ್ತಿದ್ದ ಈ ರೈಲು, ಪರಿಷ್ಕೃತ ವೇಳಾಪಟ್ಟಿಯಂತೆ ರಾತ್ರಿ 21:20 (9:20 PM) ಕ್ಕೆ ತಲುಪಲಿದೆ (ಯಶವಂತಪುರದಿಂದ ಶಾಂತಿಗ್ರಾಮದವರೆಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ).
ರೈಲು ಸಂಖ್ಯೆ: 16572 ಬೀದರ್–ಯಶವಂತಪುರ ಎಕ್ಸ್ಪ್ರೆಸ್
ಜಾರಿ ದಿನಾಂಕ : ನವೆಂಬರ್ 23, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 07:40 | ಬದಲಾವಣೆಯಾದ ಸಮಯ ಬೆಳಗ್ಗೆ 07:55 (ಬೀದರ್–ಯಲಹಂಕ ನಡುವೆ ಸಮಯ ಬದಲಾವಣೆ ಇಲ್ಲ)
ರೈಲು ಸಂಖ್ಯೆ 16528 ಕಣ್ಣೂರು–ಯಶವಂತಪುರ ಡೈಲಿ ಎಕ್ಸ್ಪ್ರೆಸ್
ಜಾರಿ ದಿನಾಂಕ : ನವೆಂಬರ್ 21, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 07:50 | ಬದಲಾವಣೆಯಾದ ಸಮಯ ಬೆಳಗ್ಗೆ 08:05 (ಕಣ್ಣೂರು–ಬಾಣಸವಾಡಿ ನಡುವೆ ಸಮಯ ಬದಲಾವಣೆ ಇಲ್ಲ)
ರೈಲು ಸಂಖ್ಯೆ 16546 ಸಿಂಧನೂರು–ಯಶವಂತಪುರ ಡೈಲಿ ಎಕ್ಸ್ಪ್ರೆಸ್
ಜಾರಿ ದಿನಾಂಕ: ನವೆಂಬರ್ 21, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:05 | ಬದಲಾವಣೆಯಾದ ಸಮಯ ಬೆಳಗ್ಗೆ 08:15 (ಸಿಂಧನೂರು–ಚಿಕ್ಕಬಾಣಾವರ ನಡುವೆ ಸಮಯ ಬದಲಾವಣೆ ಇಲ್ಲ)
ರೈಲು ಸಂಖ್ಯೆ 12214 ದೆಹಲಿ ಸರಾಯ್ ರೋಹಿಲ್ಲಾ–ಯಶವಂತಪುರ ವಾರದ ಡುರೊಂಟೊ ಎಕ್ಸ್ಪ್ರೆಸ್
ಜಾರಿ ದಿನಾಂಕ : ನವೆಂಬರ್ 23, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ಬದಲಾವಣೆಯಾದ ಸಮಯ ಬೆಳಗ್ಗೆ 08:25 (ದೆಹಲಿ–ಗುಂತಕಲ್ ನಡುವೆ ಸಮಯ ಬದಲಾವಣೆ ಇಲ್ಲ)
ರೈಲು ಸಂಖ್ಯೆ 16574 ಪಾಂಡಿಚೇರಿ–ಯಶವಂತಪುರ ವಾರದ ಎಕ್ಸ್ಪ್ರೆಸ್
ಜಾರಿ ದಿನಾಂಕ: ನವೆಂಬರ್ 21, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ಬದಲಾವಣೆಯಾದ ಸಮಯ ಬೆಳಗ್ಗೆ 08:25 (ಪಾಂಡಿಚೇರಿ–ಬಾಣಸವಾಡಿ ನಡುವೆ ಸಮಯ ಬದಲಾವಣೆ ಇಲ್ಲ)
ರೈಲು ಸಂಖ್ಯೆ 12735 ಚರ್ಲಪಲ್ಲಿ–ಯಶವಂತಪುರ ಗರೀಬ್ ರಥ್ ಎಕ್ಸ್ಪ್ರೆಸ್
ಜಾರಿ ದಿನಾಂಕ : ನವೆಂಬರ್ 22, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ನೂತನ ಸಮಯ ಬೆಳಗ್ಗೆ 08:25 (ಚರ್ಲಪಲ್ಲಿ–ಹಿಂದೂಪುರ ನಡುವೆ ಸಮಯ ಬದಲಾವಣೆ ಇಲ್ಲ)


