*ಉಚಿತ ಅಕ್ಕಿ ವಿತರಣೆಯ ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆ 2029ರ ವರೆಗೆ ವಿಸ್ತರಣೆ: ಪ್ರಲ್ಹಾದ ಜೋಶಿ*
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ, ಉಚಿತ ಅಕ್ಕಿ ವಿತರಣೆಯ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 2029ರವರೆಗೂ ವಿಸ್ತರಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ದೇಶದಲ್ಲಿ 80 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರ ದೊರಕಿದ್ದು, ಈ ಯೋಜನೆಯನ್ನು 2029ರ ವರೆಗೂ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.
ಎನ್ಎಎಫ್ಇಡಿ, ಎನ್ ಸಿಸಿಎಫ್ ಹಾಗೂ ಕೇಂದ್ರೀಯ ಭಂಡಾರಗಳಲ್ಲಿ ಭಾರತ್ ಅಕ್ಕಿ ಕೆಜಿಗೆ 29 ರೂ. ಬೆಲೆಯಲ್ಲಿ 5 ಮತ್ತು 10 ಕೇಜಿ ಚೀಲಗಳಲ್ಲಿ ದೊರೆಯುತ್ತಿದೆ ಎಂದಿದ್ದಾರೆ.
ಅತಿ ಅಗ್ಗದ ಬೆಲೆಗೆ ಗೋಧಿ ಹಿಟ್ಟು
ಇನ್ನು, ಭಾರತ್ ಆಟ್ಟಾ ಉಪಕ್ರಮದಲ್ಲಿ ಅತಿ ಅಗ್ಗದ ಬೆಲೆ 27.5 ರೂ. ಕೆಜಿಗೆ ಗೋಧಿ ಹಿಟ್ಟು ಪೂರೈಸಲಾಗುತ್ತಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಭಾರತ್ ದಾಲ್ ಉಪಕ್ರಮದಡಿಯಲ್ಲಿ ಕಡಲೆ ಮತ್ತು ಹೆಸರುಬೇಳೆ ಯನ್ನು ಕಡಿಮೆ ದರದಲ್ಲಿ ದೊರೆಯುವಂತಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಮಯೋಚಿತ ಉಪಕ್ರಮಗಳಿಂದಾಗಿ ದೇಶದ ಹಣದುಬ್ಬರ ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತೆ ಆಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ