Belagavi NewsBelgaum NewsCrimeKannada NewsKarnataka NewsNationalPolitics

*ಸುಲಿಗೆ ಹಾಗೂ ಮನೆಗಳಿಗೆ ಕನ್ನ:  ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆ ಕಳ್ಳತನ ಹಾಗೂ ಸುಲಿಗ ಮಾಡುತ್ತಿದ್ದ ಖದೀಮನ್ನು ಬೆಳಗಾವಿಯ ಸವದತ್ತಿ ಪೊಲೀಸರು ಹೆಡೆಮೂರಿ ಕಟ್ಟಿದ್ದಾರೆ.

ರೇಣುಕಾ ಲಕ್ಷ್ಮಣ ನಂದಿ ಎಂಬುವರು ಸವದತ್ತಿ ಪೊಲೀಸ್ ಠಾಣೆಗೆ ಹಾಜರಾಗಿ  ಶ್ರೀ ರೇಣುಕಾಯಲ್ಲಮ್ಮ ದೇವಿ ದೇವಸ್ಥಾನದ ಹತ್ತಿರ ಜನ ಸಂದಣಿಯಲ್ಲಿ ತಮ್ಮ ಕೊರಳಲ್ಲಿ ಇದ್ದ ಸುಮಾರು 10 ಗ್ರಾಂ ಚಿನ್ನದ ತಾಳಿ ಸರ ಕಿತ್ತುಕೊಂಡು ಹೋಗಿರುತ್ವ ಬಗ್ಗೆ ನೀಡಿದ ದೂರನ್ನು ಸ್ವೀಕರಿಸಿಕೊಂಡು ಸವದತ್ತಿ ಠಾಣೆಯ ನಂಃ 10/2026 ಕಲಂ 309 (4) ಬಿ.ಎನ್.ಎಸ್ 2023 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆಯ ನಡೆಸಿದ ಪೊಲೀಸರು ಆರೋಪಿ ಪಕ್ಕಿರೇಶ @ ದರ್ಶನ ಗಂಗಪ್ಪ ಎಂಬುವರನ್ನು ಬಂಧಿಸಿದ್ದಾರೆ.

ಬಂದಿತನಿಂದ 6,90,000 ರೂ. ಮೌಲ್ಯದ 46 ಗ್ರಾಂ ಬಂಗಾರದ ಆಭರಣಗಳು, 1,55,250 ರೂ ಮೌಲ್ಯದ

675 ಗ್ರಾಂ ಬೆಳ್ಳಿಯ ಆಭರಣ 50000 ರೂ ಮೌಲ್ಯದ ಬೈಕ್ ಹೀಗೆ ಒಟ್ಟು 8ಣ95,250 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

Home add -Advt

ಈ ಪ್ರಕರಣದಲ್ಲಿ ಬಂಧಿತ ಆರೋಪಿ ವಿರುದ್ಧ ಸವದತ್ತಿ ಠಾಣೆಯಲ್ಲಿ ಒಟ್ಟು 1 ಸುಲಿಗೆ ಹಾಗೂ 4 ಮನೆ ಕನ್ನ ಕಳವು ಪ್ರಕರಣಗಳನ್ನು ಇರುವುದು ಕಂಡು ಬಂದಿದೆ. ಸದ್ಯ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸದರಿ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಸವದತ್ತಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Related Articles

Back to top button