Karnataka NewsLatest

ಡಾ. ಸೋನಾಲಿ ಸರ್ನೋಬತ್ ಜನ್ಮದಿನ ನಿಮಿತ್ತ ಉಚಿತ ನೇತ್ರ ತಪಾಸಣೆ ಶಿಬಿರ

 

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಅವರ ಜನ್ಮದಿನದ ಅಂಗವಾಗಿ ಖಾನಾಪುರದ ಶಿವಸ್ಮಾರಕ ನಂದಾದೀಪ ನೇತ್ರಾಲಯದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ನಂದಾದೀಪ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡು ನೇತ್ರ ತಪಾಸಣೆ ಕೈಗೊಂಡರು.
ಸಾರ್ವಜನಿಕ ಸಂಪರ್ಕಾಧಿಕಾರಿ, ಓಟಿ ಇನ್ ಚಾರ್ಜ್ (ಸ್ಟಾಫ್ ನರ್ಸ್) ಆನಂದ ತುಪ್ಪದ,  ಹಿರಿಯ ಕ್ಲಿನಿಕಲ್ ಆಪ್ಟೊಮೆಟ್ರಿಸ್ಟ್ ಹಯಾತ್ ಬಾಷಾ, ಕೌನ್ಸೆಲರ್ ಶೃತಿ ಜಾಧವ, ಫೆಲ್ಲೋ ಆಪ್ಟಂ ಪಾರ್ಥ ಜಾಧವ, ಟಿಪಿಎ ಸಂಯೋಜಕ ಸಾಗರ ಗೊಬ್ಬೂರ, ಆಪ್ಟಿಷಿಯನ್ ಸಚಿನ್ ಗಾಳಿ, ಮಾರುಕಟ್ಟೆ ಸಹಾಯಕ ನಾಗೇಶ ಶಹಾಪುರಕರ ಕಾರ್ಯನಿರ್ವಹಿಸಿದರು.

Home add -Advt

ಡಾ.ಸೋನಾಲಿ ಸರ್ನೋಬತ್ ,  ಬಸವರಾಜ ಕಡೇಮನಿ, ಬಾಳೇಶ ಚವಣ್ಣವರ, ಈಶ್ವರ ಸಾಣಿಕೊಪ್ಪ, ಭಾರತಿ ತಕಡಿ, ರಮೇಶ ಪಾಟೀಲ್, ಅಂಜಲಿ ಗುರವ, ರತ್ನವ್ವ ಮಾದರ, ಕಲ್ಪನಾ ಗುರವ, ಅರ್ಜುನ್ ಗಾವಡೆ, ಈಶ್ವರ ಸಾಣಿಕೊಪ್ಪ ಉಪಸ್ಥಿತರಿದ್ದರು.

ಖಾನಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಸುಮಾರು 200 ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಪಾಲ್ಗೊಂಡು ನೇತ್ರ ತಪಾಸಣೆಗೆ ಒಳಗಾದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button