Kannada NewsLatest

ಬೆಳಗಾವಿ ರಾಜ್ಯದ ಪ್ರಥಮ ಆನೆಕಾಲು ರೋಗ ಮುಕ್ತ ಜಿಲ್ಲೆಯಾಗಲು ಪಣತೊಟ್ಟ ಆರೋಗ್ಯ ಇಲಾಖೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯು ಫೈಲೇರಿಯಾ ರೋಗದಿಂದ ಸಂಪೂರ್ಣವಾಗಿ ಮುಕ್ತವಾಗಿದ್ದು, ಸದರಿ ಬೆಳಗಾವಿ ಜಿಲ್ಲೆಯ ರಾಮದರ‍್ಗ, ಚಿಕ್ಕೋಡಿ, ಖಾನಾಪೂರ, ನಿಪ್ಪಾಣಿ ತಾಲೂಕಿನಲ್ಲಿ ರಾತ್ರಿ ರಕ್ತಲೇಪನ ಸಂಗ್ರಹಣೆ ನೆಡೆದಿದ್ದು ಇವುಗಳನ್ನು ಬೆಂಗಳೂರಿನ ಕೇಂದ್ರ ಲ್ಯಾಬೋರೇಟರಿಗೆ ಪರೀಕ್ಷೆಗಾಗಿ ಕಳಿಹಿಸಲಾಗುವದು.

ಫೈಲೇರಿಯಾ (ಆನೆಕಾಲು) ಕ್ಯೂಲೆಕ್ಸ್ ಎಂಬ ಸೊಳ್ಳೆಯ ಕಡಿತದಿಂದಾಗುವ ರೋಗವಾಗಿದ್ದು, ಫೈಲೇರಿಯಾ ಪರಾವಲಂಬಿ ಜೀವಿಯಿರುವ ವ್ಯಕ್ತಿಯನ್ನು, ಕ್ಯೂಲೆಕ್ಸ್ ಸೊಳ್ಳೆ ಕಚ್ಚಿದಾಗ ರಕ್ತದಲ್ಲಿರುವ ಪರಾವಲಂಬಿ ಜೀವಿ ಸೊಳ್ಳೆಯ ದೇಹವನ್ನು ಪ್ರವೇಶಿಸುತ್ತದೆ. ಈ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಆ ವೈರಾಣು ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. ಕಡಿತಕ್ಕೊಳಗಾದ ವ್ಯಕ್ತಿಗೆ ಫೈಲೇರಿಯಾ ರೋಗ ಉಲ್ಬಣಗೊಂಡಿರುವುದು ತಿಳಿಯಲು ಸುಮಾರು 3 ರಿಂದ 5 ಲಕ್ಷಗಳು ತಗಲಬಹುದು. ವ್ಯಕ್ತಿಯ ದೇಹದೊಳಕ್ಕೆ ಪ್ರವೇಶಿಸಿದ ವೈರಾಣು ದುಗ್ಧರಸಗ್ರಂಥಿಗಳಲ್ಲಿ ಶೇಖರಣೆಯಾಗಿ, ರಕ್ತ ಪರಿಚಲನೆಯಾಗದೆ ಅಲ್ಲಿಂದ ಮುಂದಿನ ದೇಹದ ಭಾಗವು ಸಂಪರ‍್ಣವಾಗಿ ಊದಿಕೊಳ್ಳತೊಡಗುತ್ತದೆ. ವ್ಯಕ್ತಿಯ ದೇಹದೊಳಗಿರುವ ವೈರಾಣು ಸಾವನ್ನಪ್ಪಿದ ಮೇಲೆ ಲಿಪ್ಪೆಂಡಿಮಾ ದುಗ್ದನಾಳದ ಊತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ವೃಷಣ, ಕಾಲು, ಕೈ, ಊದುವಿಕೆ ಕಾಣಿಸಿಕೊಳ್ಳುತ್ತದೆ. ಮೊದಲ ಹಂತದಲ್ಲಿ ಪರೀಕ್ಷಿಸಿದಾಗ ಈ ರೋಗ ಪತ್ತೆ ಹಂಚಿ ಗುಣಪಡಿಸಬಹುದು. ಆದರಿಂದ ಉತ್ತರರ‍್ನಾಟಕದ ೯ ಜಿಲ್ಲೆಗಳಲ್ಲಿ ಈ ರೋಗವು ವ್ಯಾಪಕವಾಗಿರುವದರಿಂದ ಸರ‍್ವಜನಿಕರು ರಾಯಚೂರು, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ಕಲಬುರಗಿ, ಉತ್ತರಕನ್ನಡ, ಯಾದಗಿರಿ, ಬೀದರ ಜಿಲ್ಲೆಗಳಲ್ಲಿ ವಾಸ್ತವಿದ್ದು ಮರಳಿ ಬಂದ ಮೇಲೆ 15ರಿಂದ 20 ದಿನಗಳಲ್ಲಿ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ರಕ್ತ ತಪಾಸಣೆ ಮಾಡಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಹಳೆಯ ಫೈಲೇರಿಯಾ ಪ್ರಕರಣಗಳನ್ನು ಹೊರತು ಪಡಿಸಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಹೊರ ಜಿಲ್ಲೆ ಮತ್ತು ಹೊರರಾಜ್ಯದಿಂದ ಬರುವ ವಲಸೆ ಕರ‍್ಮಿಕರಲ್ಲಿ ರೋಗದ ವೈರಾಣು ಇರುವ ಸಾಧ್ಯತೆಗಳಿವೆ ಎಂದು ತಿಳಿಯಲು ಇಂತಹವರನ್ನು ನಿಯಮಿತವಾಗಿ ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸುವ ಕರ‍್ಯ ನಡೆಸಲಾಗುತ್ತದೆ. ವಲಸೆ ಕರ‍್ಮಿಕರನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ವಲಸಿಗರ ಪಟ್ಟಿಯನ್ನು ರಚಿಸಲಾಗಿದೆ.

ಬೆಳಗಾವಿ ಜಿಲ್ಲೆಯು ಫೈಲೇರಿಯಾ ರೋಗ ಮುಕ್ತವಾಗಿಟ್ಟಿಸುವ ನಿಟ್ಟಿನಲ್ಲಿ 2004 ರಲ್ಲಿ ಭಾರತ ಸರಕಾರವು Mass Drug Administration (MDA)ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ತದ ನಂತರ ಎಲ್ಲಾ ತಾಲೂಕಿನ ಸಂಶಯಿತ ಸ್ಥಳಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ರಕ್ತ ಲೇಪನದ ಮಾದರಿಗಳನ್ನು ಸಂಗ್ರಹಿಸಿ ಜಿಲ್ಲಾ ಪ್ರಯೋಗಾಲಕ್ಕೆ ಕಳುಹಿಸುತ್ತಿದ್ದು ಇದುವರೆಗೆ ಪ್ರಕರಣಗಳು ಕಂಡು ಬಂದಿರುವದಿಲ್ಲಾ. ಯಾದೃಚ್ಛಿಕವಾಗಿ ಆಯ್ಕೆ ಮಾಡಿ, ಶಾಲಾ ಮಕ್ಕಳ ರಕ್ತದ ನಮೂನೆಗಳನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಇದರ ಜೊತೆಗೆ ಕ್ಯೂಲೆಕ್ಸ್ ಸೊಳ್ಳೆಗಳನ್ನೂ ಪರೀಕ್ಷಿಸಿ ಅವುಗಳ ಒಳಗೆ ಪೈಲೇರಿಯಾ ರೋಗಾಣು ಎನ್ನುವುದನ್ನೂ ಪತ್ತೆ ಹಚ್ಚಲಾಗುತ್ತದೆ. ಈ ಎಲ್ಲಾ ಪರೀಕ್ಷೆಗಳನ್ನು ನಡೆಸುವ ಕಿಟ್ಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒದಗಿಸುತ್ತದೆ.
ಸ್ಥಳೀಯವಾಗಿ ಫೈಲೇರಿಯಾ ರೋಗ ಇಲ್ಲವೆನ್ನುವುದು ಕಂಡುಬಂದಿದೆ. ಬೆಳಗಾವಿ ಜಿಲ್ಲೆಯು ಅಧಿಕೃತವಾಗಿ ಫೈಲೇರಿಯಾ ಮುಕ್ತ ಜಿಲ್ಲೆಯಾಗಬೇಕಿದ್ದಲ್ಲಿ ಈ ಫೈಲೇರಿಯಾ ಮುಕ್ತವಾಗಿಡುವ ನಿಟ್ಟಿನಲ್ಲಿ ನಮ್ಮ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿಗಳಾದ ಡಾಕ್ಟರ್ ಎಮ್.ಎಸ್.ಪಲ್ಲೇದ ತಿಳಿಸಿದರು.

ಈ ಸಾವು ನ್ಯಾಯವೇ…?: ಸ್ವಾರಿ ಚಿನ್ನಿ, ನನ್ನನ್ನು ಕ್ಷಮಿಸು ಎಂದು ಬಿಕ್ಕಿ ಬಿಕ್ಕಿ ಅತ್ತ ಅಪ್ಪ; ಎರಡನೇ ಮಗುವನ್ನೂ ಉಳಿಸಿಕೊಳ್ಳಲಾಗಲಿಲ್ಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button