CrimeKannada NewsKarnataka NewsNational

*ಹೊಟ್ಟೆನೋವು ಎಂದು ಆತ್ಮಹತ್ಯೆಗೆ ಶರಣಾದ ಯುವತಿ*

ಪ್ರಗತಿವಾಹಿನಿ ಸುದ್ದಿ: ಹೊಟ್ಟೆನೋವು ಎಂದು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬುರಡುಗುಂಟೆ ಗ್ರಾಮದಲ್ಲಿ ನಡೆದಿದೆ.‌

ಆತ್ಮಹತ್ಯೆ ಮಾಡಿಕೊಂಡ ಯುವತಿ ಹೆಸರು ಶಾರದ (18). ಅಂಜನಪ್ಪ ಹಾಗೂ ಮಧುಶ್ರಿ ದಂಪತಿಯ ಮಗಳು. ಶಾರದಾಗೆ ಪದೇ ಪದೇ ಹೊಟ್ಟೆ ನೋವು ಇತ್ತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿಸಿ ಹರಕೆಗಳನ್ನು ಸಹ ಕಟ್ಟಿಕೊಂಡಿದ್ರು. ಮಾಟ ಮಂತ್ರ ಅಂತ ನಾಟಿ ಔಷಧಿಗಳನ್ನ ಸಹ ಕೊಡಿಸಿದ್ದರಂತೆ, ದೇವರಿಗೆ ಪೂಜೆ ಮಾಡಿಸಿದಾಗ ಕೆಲ ದಿನಗಳು ಹೊಟ್ಟೆ ನೋವು ಇರ್ತಿರಲಿಲ್ಲವಂತೆ, ಆದ್ರೆ ಮತ್ತೆ ಕೆಲ ದಿನಗಳ ನಂತರ ತಡೆಯಲಾರದ ಹೊಟ್ಟೆ ನೋವು, ಚಿತ್ರ ವಿಚಿತ್ರವಾಗಿ ವರ್ತಿಸೋದು, ಕೂಗಾಡೋದು, ರೇಗಾಡೋದು, ಅರಚೋದು ಕಿರುಚಾಡೋದು, ಕೋಪ ಮಾಡಿಕೊಂಡು ಎಲ್ಲರನ್ನ ಗುರಾಯಿಸೋದು ಮಾಡುತ್ತಿದ್ದಳು, ಇದರಿಂದ ಮಗಳನ್ನ ಕಾಲೇಜಿನಿಂದ ಬಿಡಿಸಿ ಮನೆಯಲ್ಲಿ ಇಟ್ಟುಕೊಂಡಿದ್ರು.

Home add -Advt

ಮೊನ್ನೆ ಗುರುವಾರ ತಾಯಿ ಹುಷಾರಿಲ್ಲ ಅಂತ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ಶಾರದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಶಾರದಾ ಆತ್ಮಹತ್ಯೆ ಪ್ರಕರಣ ಸಂಬಂಧ ನಂದಿಗಿರಿಧಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನ ಪೋಷಕರಿಗೆ ಹಸ್ತಾಂತರಿಸಿದ್ದಾರೆ. 

Related Articles

Back to top button